ಮೊದಲ ಬಾರಿಗೆ ಮಗನ ಸಿನಿಮಾದಲ್ಲಿ ಸುಪ್ರೀಂ ಹೀರೋ: ವಿಭಿನ್ನ ಕಥೆಯ ಸಿನಿಮಾ 'ಖೆಯೊಸ್'

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಸುಪ್ರೀಂ ಹೀರೊ ಶಶಿಕುಮಾರ್ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಪುತ್ರ ಅಕ್ಷಿತ್ ಅಭಿನಯದ ವಿಭಿನ್ನ ಸಿನಿಮಾ 'ಖೆಯೊಸ್'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಇದೇ ಮೊದಲ ಬಾರಿಗೆ ಶಶಿಕುಮಾರ್ ಮಗನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

'ಖೆಯೊಸ್' ಸಿನಿಮಾ ಫೆಬ್ರವರಿ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಕ್ಷಿತ್ ಶಶಿಕುಮಾರ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಿತ್ ಶಶಿಕುಮಾರ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅಪ್ಪ - ಮಗ ಒಂದೇ ಸಿನಿಮಾದಲ್ಲಿ ನಟಿಸಿದಂತಾಗಿದೆ.‌

ಮೂಲತಃ ವೈದ್ಯರಾಗಿರುವ ಜಿ.ವಿ.ಪ್ರಸಾದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ‌ವೈದ್ಯಕೀಯ ಕಾಲೇಜ್‌ವೊಂದರಲ್ಲಿ ನಡೆಯುವ ಕಥೆಯನ್ನೇ ಆಧರಿಸಿ, ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಅಕ್ಷಿತ್ ಶಶಿಕುಮಾರ್ ಹಾಗೂ ಅದಿತಿ ಪ್ರಭುದೇವ ಇಬ್ಬರೂ ವೈದ್ಯಕೀಯ ವಿದ್ಯಾರ್ಥಿಗಳಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Kannada Supreem Hero Shashi Kumar First time Acting in His Son Movie Chaos

ನಟ ಶಶಿಕುಮಾರ್ 'ಖೆಯೊಸ್' ಸಿನಿಮಾ ಬಗ್ಗೆ ಮೆಚ್ಚುಗೆ ಮಾತಿಗಳನ್ನಾಗಿಡಿದ್ದು, ಯಜಮಾನ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಕೂಡ ಹಾಕಿ ಗಮನ ಸೆಳೆದಿದ್ದರು.ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

" ನಾನು ಅಪ್ಪನ ನೆರಳಿನಲ್ಲಿ ಅರಳಿದರೂ ಬೆಳೆಯಲು ಬೇರೆ ಆಶ್ರಯ ಬೇಕಾಗುತ್ತದೆ. ಈ ವಿಷಯದಲ್ಲಿ ಸ್ನೇಹಿತರು ಅತ್ಯಂತ ಸಹಕಾರ ನೀಡುತ್ತಿದ್ದಾರೆ " ಎನ್ನುವ ಮೂಲಕ ಅಕ್ಷಿತ್ ಶಶಿಕುಮಾರ್ ಈ ಸಿನಿಮಾ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

More from Filmibeat

English summary
Kannada Supreem Hero Shashi Kumar First time Acting in His Son Movie Chaos, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X