'ಕಲ್ಕಿ 2898 AD' ಚಿತ್ರದಲ್ಲಿ ಕನ್ನಡ ಪ್ರತಿಭೆಗೆ ಸಿಕ್ತಿದೆ ಶಿಳ್ಳೆ ಚಪ್ಪಾಳೆ

By ಫಿಲ್ಮಿಬೀಟ್ ಡೆಸ್ಕ್

ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಬಿಗ್‌ಬಿ, ಕಮಲ್ ಹಾಸನ್‌, ದೀಪಿಕಾ ಪಡುಕೋಣೆ ರೀತಿಯ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಮಹಾಭಾರತ ಹಾಗೂ ಭವಿಷ್ಯದ ಕಲಿಯುಗಕ್ಕೆ ಲಿಂಕ್ ಮಾಡಿ 'ಕಲ್ಕಿ 2898 AD' ಕಥೆ ಹೇಳಿದ್ದಾರೆ. ಅದ್ಧೂರಿ ವಿಷ್ಯುವಲ್ಸ್, ಹೈವೋಲ್ಟೇಜ್ ಆಕ್ಷನ್ ಸನ್ನಿವೇಶಗಳಿಂದ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕೆಲವರಿಗೆ ಸಿನಿಮಾ ಇಷ್ಟವಾಗುತ್ತಿಲ್ಲ. ಆದರೆ ಸಾಕಷ್ಟು ಜನ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಚಿತ್ರದ ಸೀಕ್ವೆಲ್ ನೋಡಲು ಉತ್ಸುಕರಾಗಿದ್ದಾರೆ.

Kannada talent is appreciated in Prabhas Kalki 2898 AD film

ವೈಜಯಂತಿ ಮೂವೀಸ್ ಸಂಸ್ಥೆ 500 ಕೋಟಿ ರೂ. ಬಜೆಟ್‌ನಲ್ಲಿ ಈ ಸೈನ್ಸ್ ಫಿಕ್ಷನ್ ಫ್ಯಾಂಟಸಿ ಸಿನಿಮಾ ನಿರ್ಮಿಸಿದೆ. ಸ್ಟಾರ್ ನಟರಿಗೆ 150 ಕೋಟಿ ರೂ. ಕೇವಲ ಸಂಭಾವನೆ ರೂಪದಲ್ಲಿ ಕೊಡಲಾಗಿದೆ. ತೆಲುಗಿನಲ್ಲಿ ಸಿನಿಮಾ ನಿರ್ಮಾಣವಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬಂದಿದ್ದರಿಂದ ಆಯಾ ಭಾಷೆಯ ಬಾಕ್ಸಾಫೀಸ್ ಗಮನದಲ್ಲಿಟ್ಟುಕೊಂಡು ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಹಿಂದಿಯಿಂದ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ, ತಮಿಳಿನಿಂದ ಕಮಲ್ ಹಾಸನ್ ಮಲಯಾಳಂನಿಂದ ದುಲ್ಕರ್ ಸಲ್ಮಾನ್ ಹಾಗೂ ಅನ್ನಾ ಬೆನ್ ಸೇರಿದಂತೆ ಹಲವರನ್ನು ತಾರಾಗಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕನ್ನಡದ ಕಲಾವಿದರಿಂದ ಅವಕಾಶ ಸಿಕ್ಕಿಲ್ಲ. ಆದರೆ 'ಕಲ್ಕಿ 2898 AD' ಹಾಡೊಂದಕ್ಕೆ ಕನ್ನಡ ಪ್ರತಿಭೆ ದನಿಯಾಗಿರುವುದು ವಿಶೇಷ.

Kannada talent is appreciated in Prabhas Kalki 2898 AD film

ಸಂತೋಷ್ ನಾರಾಯಣ್ 'ಕಲ್ಕಿ 2898 AD' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದ ಆಲ್ಬಮ್‌ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಸಿನಿಮಾ ಬಿಡುಗಡೆ ಬಳಿಕ ಅದೊಂದು ಸಾಂಗ್ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ಭೈರವ(ಪ್ರಭಾಸ್) ತನ್ನ ಪ್ರೇಯಸಿ ರೊಕ್ಸಿ(ದಿಶಾ ಪಟಾನಿ) ಜೊತೆ ಕಾಂಪ್ಲೆಕ್ಸ್ ಪ್ರಪಂಚದಲ್ಲಿ ವಿಹರಿಸುವ ವೇಳೆ ಬರುವ ಸಾಂಗ್ ಅದು.

'ಟ ಟಕ್ಕರ' ಎಂದು ಶುರುವಾಗುವ ಈ ಡ್ಯಾನ್ಸಿಂಗ್‌ ನಂಬರ್‌ನ ಸಂಜಿತ್ ಹೆಗ್ಡೆ ಹಾಡಿದ್ದಾರೆ. ಕನ್ನಡ ಮಾತ್ರವಲ್ಲ 5 ಭಾಷೆಗಳಲ್ಲಿ ಸಂಜಿತ್ ಹಾಡಿರುವುದು ವಿಶೇಷ. ಈಗಾಗಲೇ ಕನ್ನಡದ ಸ್ಟಾರ್ ಸಿಂಗರ್ ಪರಭಾಷೆಗಳಲ್ಲಿ ಕೂಡ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ದಾರೆ. ಸದ್ಯ 'ಕಲ್ಕಿ 2898 AD' ಚಿತ್ರದಲ್ಲೂ ಸಂಜಿತ್ ದನಿ ಕೇಳಿಬರ್ತಿದೆ. ಅಂತಾದೊಂದು ಅದ್ಧೂರಿ ಚಿತ್ರದ ಭಾಗವಾಗಿದ್ದಾರೆ. ಕನ್ನಡಿಗನ ಗಾಯನವನ್ನು ಪರಭಾಷಿಕರು ಶಿಳ್ಳೆ ಹೊಡೆದು ಎಂಜಾಯ್ ಮಾಡುತ್ತಿದ್ದಾರೆ.

'ಸರಿಗಮಪ' ಶೋನಲ್ಲಿ ಸಂಜಿತ್ ಹೆಗ್ಡೆ ಭಾಗವಹಿಸಿ ಗಮನ ಸೆಳೆದಿದ್ದರು. ಬಳಿಕ 'ದಳಪತಿ' ಚಿತ್ರದಲ್ಲಿ ಮೊದಲ ಬಾರಿಗೆ ಹಾಡು ಹಾಡಿದ್ದರು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದರು. ಬಳಿಕ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಹಾಡಲು ಶುರು ಮಾಡಿದರು.

'ಪಿಟ್ಟ ಕಥಲು' ಎನ್ನುವ ಚಿತ್ರದಲ್ಲಿ ಕೂಡ ಸಂಜಿತ್ ಹೆಗ್ಡೆ ನಟಿಸಿದ್ದರು. 'ಡಾಂಗೆ' ಹಾಗೂ 'ಪೋರ್', 'ಪಿಟ್ಟ ಕಥಲು' ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಸಹ ಮಾಡಿದ್ದಾರೆ.

More from Filmibeat

English summary
One and only kannada talent got chance in Prabhas' Kalki 2898 AD film;
Read more about: filmibeat original prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X