ಬಾಲಿವುಡ್ ಸ್ಟಾರ್ ನಟನ ಸಿನಿಮಾಗೆ 'ಲೂಸಿಯ' ಪವನ್ ಕುಮಾರ್ ನಿರ್ದೇಶನ?
ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕ ಮತ್ತು ನಟ 'ಲೂಸಿಯಾ' ಪವನ್ ಈಗ ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. 'ಯು ಟರ್ನ್' ಸಿನಿಮಾ ನಂತರ ಪವನ್ ನಿರ್ದೇಶನದ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ. ಸ್ಯಾಂಡಲ್ ವುಡ್ ನಲ್ಲಿ 'ಯು ಟರ್ನ್' ಸಕ್ಸಸ್ ಆಗುತ್ತಿದ್ದಂತೆ ಕಾಲಿವುಡ್ ಮತ್ತು ಟಾಲಿವುಡ್ ಕಡೆ ಮುಖ ಮಾಡಿದ್ರು ಪವನ್.
ತಮಿಳು ಮತ್ತು ತೆಲುಗಿನಲ್ಲಿ 'ಯು ಟರ್ನ್' ಸಿನಿಮಾ ರಿಮೇಕ್ ಮಾಡಿ ರಿಲೀಸ್ ಮಾಡಿರುವ ಪವನ್ ಈಗ ಮತ್ತೊಂದು ಸಿನಿಮಾದ ತಯಾರಿಯಲ್ಲಿದ್ದಾರೆ. ಈ ಬಾರಿ ಪವನ್ ನಿರ್ದೇಶಕ ಮಾಡುತ್ತಿರುವುದು ಕನ್ನಡದಲ್ಲಿ ಅಲ್ಲ, ಬದಲಿಗೆ ಬಾಲಿವುಡ್ ನಲ್ಲಿ. ಪವನ್ ಸೈಲೆಂಟ್ ಆಗಿ ಬಾಲಿವುಡ್ ಗೆ ಹಾರಿದ್ದಾರೆ.
ಈಗಾಗಲೆ ಹಿಂದಿಯಲ್ಲಿ ವೆಬ್ ಸಿರೀಸ್ ಮಾಡಿರುವ ಪವನ್ ಈಗ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದ್ಹಾಗೆ ಪವನ್ ಬಾಲಿವುಡ್ ನ ದೊಡ್ಡ ನಟರೊಬ್ಬರಿಗೆ ಆಕ್ಷನ್ ಕಟ್ ಹೇಳುತ್ತಾರಂತೆ. ಖ್ಯಾತ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪವನ್ ಸಿನಿಮಾ ಮೂಡಿ ಬರಲಿದೆಯಂತೆ.

ಪವನ್ ಸಿನಿಮಾ ಯಾವುದು? ಯಾರು ಆ ದೊಡ್ಡ ನಟ ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಯಾವ ನಟ ಎನ್ನುವ ಕುತೂಹಲ ಅಭಿಮಾನಿಗಲ್ಲಿ ಹೆಚ್ಚಾಗಿದೆ. ಮೂಲಗಳ ಪ್ರಕಾರ ಪವನ್ ಚೊಚ್ಚಲ ಬಾಲಿವುಡ್ ಸಿನಿಮಾ ಸೆಪ್ಟಂಬರ್ ನಲ್ಲಿ ಅನೌನ್ಸ್ ಆಗುವ ಸಾಧ್ಯತೆ ಇದೆ. ಸದ್ಯ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿರುವ ಪವನ್ ಮತ್ಯಾವ ಹೊಸ ಪ್ರಯೋಗದ ಮೂಲಕ ಮೋಡಿ ಮಾಡಲಿದ್ದಾರೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಹೆಚ್ಚಾಗಿದೆ.
ಈಗಾಗಲೆ ಪವನ್ ಕೆಮಿಕಲ್ ಫಾರ್ಮುಲ ಆಪ್ ನಿಕೋಟಿನ್ 'C10H14N2' ಸಿನಿಮಾವನ್ನು ಅನೌನ್ಸ್ ಮಾಡಿದ್ರು. ಆದ್ರೆ ಇದುವರೆಗೂ ಈ ಸಿನಿಮಾ ಸೆಟ್ಟೇರಲಿಲ್ಲ. ಇದೇ ಸಿನಿಮಾವನ್ನು ಬಾಲಿವುಡ್ ನಲ್ಲಿ ಮಾಡ್ತಾರಾ ಅಥವಾ ಸಂಪೂರ್ಣ ಹೊಸ ಸಬ್ಜೆಕ್ಟ್ ಇಟ್ಟುಕೊಂಡು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರಾ ಎನ್ನುವುದು ಗೊತ್ತಾಗಬೇಕಿದೆ. ಸದ್ಯ ಬಾಲಿವುಡ್ ಗೆ ಟಿಕೆಟ್ ಪಡೆದಿರುವ ಪವನ್ ಹೊಸ ಸಿನಿಮಾ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಪ್ರಾರಂಭವಾಗುವ ಸಾಧ್ಯತೆ ಇದೆ.


Click it and Unblock the Notifications











