South Celebs Wishes to James : ಟ್ವಿಟ್ಟರ್ ಮೂಲಕ ಜೇಮ್ಸ್‌ಗೆ ವಿಶ್ ಮಾಡಿದ ಸೌತ್ ತಾರೆಯರು

ನಟ ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗೆ ಇದ್ದಿದ್ರೆ ಅಭಿಮಾನಿಗಳ ಸಂಭ್ರಮ ಸಡಗರವೇ ಬೇರೆ ಇರುತ್ತಿತ್ತು. ಮನೆ ಬಳಿ ತೆರಳಿ ಅಪ್ಪುಗೆ ವಿಶ್ ಮಾಡಲು ಜನ ಸಾಗರವೇ ಸೇರುತ್ತಿತ್ತು. ಕಳೆದೆರೆಡು ವರ್ಷಗಳಿಂದ ಕೊರೊನಾ ಹಾವಳಿ ಇದ್ದಿದ್ದರಿಂದ ಪುನೀತ್ ಬರ್ತ್‌ಡೇ ಆಚರಣೆಗೂ ಬ್ರೇಕ್ ಬಿದ್ದಿತ್ತು.

Recommended Video

Puneeth Rajkumar | ಅಪ್ಪುಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವ ಸಮಯ ಬಂದೇ ಬಿಡ್ತು.

ಈ ವರ್ಷವಾದ್ರೂ ಅಪ್ಪು ಬರ್ತ್‌ಡೇಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ , ಅಪ್ಪು ನಮ್ಮೊಂದಿಗೆ ಇಲ್ಲಾ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಆದರೂ ಇಂದು ರಿಲೀಸ್ ಆಗಿರುವ 'ಜೇಮ್ಸ್' ಸಿನಿಮಾವನ್ನು ಅಭಿಮಾನಿಗಳು ಒಂದು ಕಡೆ ಜಾತ್ರೆಯಂತೆ ಆಚರಿಸುತ್ತಿದ್ದಾರೆ. ಇತ್ತ ಸ್ಟಾರ್ ಸೆಲೆಬ್ರೆಟಿಗಳು ಕೂಡ 'ಜೇಮ್ಸ್' ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ. ಯಾರು ಯಾರು ಏನೇನು ವಿಶ್ ಮಾಡಿದ್ದಾರೆ ಬನ್ನಿ ನೋಡೋಣ.

ಕೋಟಿ ಹೃದಯಗಳಲ್ಲಿ ಸದಾ ಜೀವಂತ ಅಪ್ಪು

ಸೌತ್ ಇಂಡಸ್ಟ್ರಿಯ ಹಲವಾರು ಸ್ಟಾರ್ ಸೆಲೆಬ್ರೆಟಿಗಳು 'ಜೇಮ್ಸ್' ಚಿತ್ರಕ್ಕೆ ಶುಭ ಕೋರಿದ್ದಾರೆ. 'ಜೇಮ್ಸ್' ಚಿತ್ರದಲ್ಲಿ ನಟಿಸಿರುವ ತೆಲುಗು ನಟ ಶ್ರೀಕಾಂತ್ ಮೆಕ 'ಜೇಮ್ಸ್' ಚಿತ್ರಕ್ಕೆ ಶುಭ ಕೋರಿದ್ದಾರೆ. ಅಪ್ಪು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. "ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಇಂದು 'ಜೇಮ್ಸ್' ಚಿತ್ರ ರಿಲೀಸ್ ಆಗಿದೆ. ನೀವು ಕೋಟಿ ಹೃದಯಗಳಲ್ಲಿ ಸದಾ ಜೀವಂತ ಅಪ್ಪು. ಹುಟ್ಟು ಹಬ್ಬದ ಶುಭಾಶಯಗಳು" ಎಂದು ಶುಭ ಕೋರಿದ್ದಾರೆ.

ಭಾವನಾತ್ಮಕ ಸಾಲು ಬರೆದುಕೊಂಡ ಅನೂಪ್

ಇನ್ನು ಕನ್ನಡದ ನಟ-ನಿರ್ದೇಶಕ ಅನೂಪ್ ಭಂಡಾರಿ ಕೂಡ ಸಿನಿಮಾದ ಬಗ್ಗೆ ಮತ್ತು ಅಪ್ಪು ಬಗ್ಗೆ ಭಾವನಾತ್ಮವಾಗಿ ಟ್ವೀಟ್ ಮಾಡಿದ್ದಾರೆ. "ನಾವು ವಿಭಿನ್ನ ಭಾವನೆಗಳನ್ನು ಹೊಂದಿರುವ ಸಿನಿಮಾ ನೋಡಿ ಹೊರಬಂದಿದ್ದೇವೆ. ಆದರೆ ಮೊದಲ ಬಾರಿಗೆ ನಾವೆಲ್ಲರೂ ಅಗಾಧ ಭಾವನೆಗಳಿಂದ ಚಿತ್ರಮಂದಿರಗಳಿಗೆ ಕಾಲಿಡುತ್ತೇವೆ. ನಿಮ್ಮ ಜನ್ಮದಿನದಂದು ನಿಮ್ಮನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ ಅಪ್ಪು ಸರ್. ವಿಶ್ ಯು ಹ್ಯಾಪಿ ಬರ್ತ್‌ಡೇ" ಎಂದು ಅನೂಪ್ ಭಂಡಾರಿ ಭಾವನಾತ್ಮಕವಾಗಿ ಸಾಲುಗಳನ್ನು ಬರೆದುಕೊಂಡಿದ್ದಾರೆ.

'ಜೇಮ್ಸ್' ಚಿತ್ರಕ್ಕೆ ಮೋಹನ್ ಲಾಲ್ ವಿಶ್

ಮಲಯಾಳಂನ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಅಪ್ಪು ಸಾವಿನ ಸುದ್ದಿ ಕೇಳಿ ಭಾವುಕರಾಗಿದ್ದರು. ಆಗಲೂ ಅಪ್ಪು ಬಗ್ಗೆ ಸಾಲು ಸಾಲು ಬರೆದುಕೊಂಡಿದ್ದ ಮೋಹನ್ ಲಾಲ್, ಇಂದು ಮತ್ತೆ 'ಜೇಮ್ಸ್' ಚಿತ್ರಕ್ಕೆ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದಾರೆ."ಆತ್ಮೀಯ ಪುನೀತ್, ನಿಮ್ಮ #ಜೇಮ್ಸ್ ಚಿತ್ರವು ಉತ್ತಮ ಚಿತ್ರವಾಗಲಿದೆ ಎಂದು ನನಗೆ ನಂಬಿಕೆ ಇದೆ. ಇದು ನಮ್ಮೆಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ನಾವು ನಮ್ಮ ಹೃದಯದಲ್ಲಿ ಸದಾ ನಿಮ್ಮನ್ನು ಇರಿಸಿಕೊಂಡಿರುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಪ್ಪು ನೆನಪನ್ನು ಮತ್ತೆ ಮಾಡಿಕೊಂಡಿದ್ದಾರೆ.

ಶಾಶ್ವತವಾಗಿ ಬದುಕಿರುತ್ತಾರೆ ಅಪ್ಪು

ತೆಲುಗು ನಟ ವರುಣ್ ತೇಜ್ ಕೂಡ ಪುನೀತ್ ಅವರು ಇಲ್ಲದೇ ಇರುವ ಬಗ್ಗೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. "ಪುನೀತ್ ರಾಜ್ ಕುಮಾರ್ ಅವರು ತಮ್ಮ ಕೆಲಸದ ಮೂಲಕ ಶಾಶ್ವತವಾಗಿ ಬದುಕುತ್ತಾರೆ. #ಜೇಮ್ಸ್ ಅವರ ಇಡೀ ತಂಡಕ್ಕೆ ನನ್ನ ಶುಭಾಶಯಗಳು. ಅಪ್ಪು ಅಣ್ಣಾ ನಿಮ್ಮ ಅಸಂಖ್ಯಾತ ಅಭಿಮಾನಿಗಳು ಮತ್ತು ನಾವೆಲ್ಲರೂ ನಿಮ್ಮನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ." ಎಂದು ಟ್ವೀಟ್ ಮಾಡಿದ್ದಾರೆ.

ಜೇಮ್ಸ್ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು

ಮಲಯಾಳಂ ನಟ ಸುರೇಶ್ ಗೋಪಿ ಕೂಡ ಟ್ವಿಟ್ಟರ್‌ನಲ್ಲಿ 'ಜೇಮ್ಸ್‌'ಗೆ ಶುಭ ಕೋರಿದ್ದಾರೆ. "ಇಂದು ಬಿಡುಗಡೆಯಾಗಿರುವ #'ಜೇಮ್ಸ್' ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು. ಆತ್ಮೀಯ ಪುನೀತ್, ನೀವು ಯಾವಾಗಲೂ ಲಕ್ಷಾಂತರ ಜನರ ಹೃದಯದಲ್ಲಿ ಉಳಿಯುತ್ತೀರಿ." ಎಂದು ಬರೆಯುವ ಮೂಲಕ 'ಜೇಮ್ಸ್' ತಂಡಕ್ಕೆ ವಿಶ್ ಮಾಡಿದ್ದಾರೆ.

More from Filmibeat

English summary
James Kannada Movie: Mohan Lal, Anup Bhandari, Varun Tej, Srikanth, Suresh Gopi wished Puneeth Rajkumar and Priya Anand movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X