ಈ ವಾರ ಚಿತ್ರಮಂದಿರಕ್ಕೆ ಬರ್ತಿರೋ ಚಿತ್ರಗಳ ಪಟ್ಟಿ; ಯಾವುದು ಸ್ಪೆಷಲ್?

ಮತ್ತೊಂದು ವೀಕೆಂಡ್ ಹತ್ತಿರ ಬರ್ತಿದೆ. ಕಳೆದ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗಪ್ಪಳಿಸಿದ್ದವು. ಈ ಶುಕ್ರವಾರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ಒಂದಷ್ಟು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿವೆ.

ಬಾಕ್ಸಾಫೀಸ್‌ನಲ್ಲಿ ಸದ್ಯ ಮೋಹನ್ ಲಾಲ್ ನಟನೆಯ 'ಥುಡಾರಮ್', ಸೂರ್ಯ ನಟನೆಯ 'ರೆಟ್ರೋ', ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಜೋಡಿಯ 'ಹಿಟ್-3' ಸಿನಿಮಾ ಸದ್ದು ಮಾಡ್ತಿವೆ. ದೇಶ ವಿದೇಶಗಳಲ್ಲಿ 'ಥುಡಾರಮ್' ಆರ್ಭಟ ಕೊಂಚ ಜೋರಾಗಿಯೇ ಇದೆ. ಈಗಾಗಲೇ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. 'ರೆಟ್ರೋ' ಹಾಗೂ 'ಹಿಟ್-3' ಸಿನಿಮಾಗಳು ಕೂಡ 100 ಕೋಟಿ ಕ್ಲಬ್ ಸೇರಿವೆ.

Kannada telugu tamil hidni and Malayalam movies releasing in theaters this week

ಈ ವಾರ ಓಟಿಟಿಯಲ್ಲಿ 'ಗುಡ್‌ ಬ್ಯಾಡ್ ಅಗ್ಲಿ', 'ವಾಮನ' ಹಾಗೂ 'ರಾಬಿನ್ ಹುಡ್' ಸೇರಿ ಒಂದಷ್ಟು ಸಿನಿಮಾಗಳು ವೀಕ್ಷಕರನ್ನು ರಂಜಿಸಲಿವೆ. ಇನ್ನು ಚಿತ್ರಮಂದಿರಗಳಲ್ಲಿ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗುತ್ತದೆ ಮುಂದೆ ಓದಿ.

ಸೂತ್ರಧಾರಿ

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹೀರೊ ಆಗಿ ನಟಿಸಿರುವ 'ಸೂತ್ರಧಾರಿ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ನಟಿಸಿದ್ದಾರೆ. ಚಿತ್ರದಲ ಟ್ರೈಲರ್, ಸಾಂಗ್ಸ್ ಈಗಾಗಲೇ ರಿಲೀಸ್ ಆಗಿದೆ. ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಭಾಗಿ ಆಗಿ ತಂಡಕ್ಕೆ ಶುಭ ಕೋರಿದ್ದರು. ಸಂಜನಾ ಆನಂದ್ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲಾ ನಾಣಿ, ಕಾರ್ತಿಕ್, ಪಲ್ಲವಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ದಸ್ಕತ್

ಕಳೆದ ವರ್ಷ ತುಳು ಸಿನಿಮಾ 'ದಸ್ಕತ್' ತೆರೆಕಂಡು ಸದ್ದು ಮಾಡಿತ್ತು. ಈ ವಾರ ಚಿತ್ರದ ಕನ್ನಡ ವರ್ಷನ್ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಅನೀಶ್ ಪೂಜಾರಿ ವೆನುರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೀಕ್ಷಿತ್‍ ಕೆ. ಅಂದಿನ್ಜೆ, ನೀರಜ್‍ ಕುಂದರ್ಪ, ಮಿಥುನ್‍ ರಾಜ್‍, ಯುವ ಶೆಟ್ಟಿ, ಮೋಹನ್‍ ಶೇಣಿ ಈ ಚಿತ್ರದ ತಾರಾಗಣದಲ್ಲಿದ್ದಾರೆ.

Kannada telugu tamil hidni and Malayalam movies releasing in theaters this week

ಶುಭಂ

ಸಮಂತಾ ರುತ್‌ಪ್ರಭ್ ನಿರ್ಮಾಣದ ತೆಲುಗು ಸಿನಿಮಾ 'ಶುಭಂ'. ಈ ಹಾರರ್ ಕಾಮಿಡಿ ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಸಮಂತಾ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಿದ್ದು ಬಹುತೇಕ ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ. ಸಮಂತಾ ನಿರ್ಮಾಪಕಿಯಾಗಿ ಗೆಲ್ತಾರಾ? ಎನ್ನುವ ಕುತೂಹಲ ಮೂಡಿದೆ.

ಸಿಂಗಲ್

ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ತೆಲುಗಿನ 'ಸಿಂಗಲ್' ಸಿನಿಮಾ ನಿರ್ಮಾಣವಾಗಿದೆ. ಶ್ರೀ ವಿಷ್ಣು ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ಕೆತಿಕಾ ಶರ್ಮಾ ಹಾಗೂ ಇವಾನಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಇದೊಂದು ಕಾಮೆಡಿ ಎಂಟರ್‌ಟೈನರ್ ಸಿನಿಮಾ ಆಗಿದೆ.

ಮಲಯಾಳಂ ಚಿತ್ರಗಳು

ಮಾಲಿವುಡ್ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡ್ತಿವೆ. ಈ ವಾರ 'ಸರ್ಕಿಟ್', 'ಆಜಾದಿ', 'ಪಡಕ್ಕಾಲಂ' ಹಾಗೂ 'ಪ್ರಿನ್ಸ್ ಅಂಡ್ ಫ್ಯಾಮಿಲಿ' ಎಂಬ 4 ಮಲಯಾಳಂ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಬರ್ತಿವೆ.

6 ತಮಿಳು ಚಿತ್ರಗಳು

ಕಾಲಿವುಡ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಕಳೆದ ವಾರ ಬಂದ 'ರೆಟ್ರೋ' ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಈ ವಾರ 'ಗಜಾನಾ', 'ಅಂಬಿ', 'ಎನ್ ಕಾದಲೈ', 'ಕಲಿಯುಗಂ', 'ಯಮನ್ ಕಟ್ಟಲೈ' ಹಾಗೂ 'ನಿಳರ್ ಕುಡೈ' ಎಂಬ ಸಿನಿಮಾಗಳು ಈ ವಾರ ತೆರೆಗೆ ಬರ್ತಿದೆ.

ಬಾಲಿವುಡ್ ಚಿತ್ರಗಳು

ಅತ್ತ ಬಾಲಿವುಡ್‌ ಸಿನಿಮಾಗಳ ಆರ್ಭಟ ಕಮ್ಮಿ ಆಗಿದೆ. ಈ ವರ್ಷ ಸ್ಟಾರ್ ನಟರ ಯಾವುದೇ ಸಿನಿಮಾಗಳು ಬರ್ತಿಲ್ಲ. ಈ ವಾರ 'ಭೂಲ್ ಚುಕ್ ಮಾಫ್' ತೆರೆಗೆ ಬರ್ತಿದೆ. ಪಾಕ್ ನಟ ಫವಾದ್ ಫಾಸಿಲ್ ನಟನೆಯ 'ಅಬೀರ್ ಗುಲಾಲ್' ಸಿನಿಮಾ ಬಿಡುಗಡೆಗೆ ಸಂಕಷ್ಟ ಎದುರಾಗಿದೆ.

More from Filmibeat

English summary
From Suthradaari to Prince and Family; This week theatrical releases list;
Read more about: sandalwood kannada tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X