For Quick Alerts
  ALLOW NOTIFICATIONS  
  For Daily Alerts

  ಸರ್ಜರಿ ಇಲ್ಲದೆ, ಕೇವಲ ವರ್ಕೌಟ್‌ ಮಾಡಿಕೊಂಡೇ ದೇಹ ಸೌಂದರ್ಯ ಹೆಚ್ಚಿಸಿಕೊಂಡ ನಟರಿವರು

  |

  ಸಿನಿಮಾ, ಕಿರುತೆರೆಯಲ್ಲಿ ನಟಿಸುವ ನಟ ನಟಿಯರು ಹೆಚ್ಚಾಗಿ ತಮ್ಮ ದೇಹ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕನ್ನಡ ಕಿರುತೆರೆ ನಟರು ಕೂಡ ತಮ್ಮ ದೇಹವನ್ನು ಸದೃಢವಾಗಿಡಲು ನಿರಂತರ ವರ್ಕ್‌ ಔಟ್‌ ಮಾಡುವ ಮೂಲಕ ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.

  ಇತ್ತೀಚಿಗಷ್ಟೇ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಕಿರುತೆರೆ ನಟಿ ಚೇತನಾ ರಾಜ್‌ ಸಾವನ್ನಪ್ಪಿದ್ದರು. ಇವರ ಸಾವಿನ ಬಳಿಕ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಹಲವು ನಟಿಯರು ಚಿತ್ರರಂಗದಲ್ಲಿನ ಬ್ಯೂಟಿ, ಬಾಡಿ ಶೇಮಿಂಗ್‌ ಕುರಿತು ಅಸಮಾಧಾನ ಹೊರಹಾಕಿದ್ದರು. ಇನ್ನು ಕೆಲವರು ಇಂತಹ ಸರ್ಜರಿಗಳನ್ನು ಬಿಟ್ಟು ಯೋಗ ವರ್ಕೌಟ್‌ ಮಾಡುವ ಮೂಲಕ ನಮ್ಮ ದೇಹವನ್ನು ಸೌಂದರ್ಯವಾಗಿ ಇಟ್ಟುಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

  ಅಂತೂ ಬಾಲಿವುಡ್ ಮರ್ಯಾದೆ ಉಳೀತು: 'ಭೂಲ್ ಭುಲಯ್ಯ 2' 2ನೇ ದಿನದ ಕಲೆಕ್ಷನ್ ಸೂಪರ್!ಅಂತೂ ಬಾಲಿವುಡ್ ಮರ್ಯಾದೆ ಉಳೀತು: 'ಭೂಲ್ ಭುಲಯ್ಯ 2' 2ನೇ ದಿನದ ಕಲೆಕ್ಷನ್ ಸೂಪರ್!

  ಬಣ್ಣದ ಲೋಕದಲ್ಲಿರುವವರಿಗೆ ಸೌಂದರ್ಯದ ಮೇಲೆ ತಮ್ಮ ದೇಹದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನಟನಾಗುವುದು ಅಷ್ಟು ಸುಲಭದ ಕೆಲಸವಲ್ಲ ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಕನ್ನಡ ಕಿರುತೆರೆಯ ಖ್ಯಾತ ನಟರು ಸಹ ನಿರಂತರ ವರ್ಕೌಟ್‌ ಮಾಡುವ ಮೂಲಕ ತಮ್ಮ ದೇಹವನ್ನು ಸಧೃಡವಾಗಿ ಇಟ್ಟುಕೊಂಡಿದ್ದಾರೆ.

  ನಿರೂಪಕ ಅಕುಲ್ ಬಾಲಾಜಿ

  ನಿರೂಪಕ ಅಕುಲ್ ಬಾಲಾಜಿ

  ಖ್ಯಾತ ಕಿರುತೆರೆ ನಿರೂಪಕ ಅಕುಲ್‌ ಬಾಲಾಜಿ ಕೂಡ ಕೆಲ ವರ್ಷಗಳ ಹಿಂದೆ ತಮ್ಮ ತೂಕ ಹೆಚ್ಚಿಸಿಕೊಂಡಿದ್ದರು. ಇದರಿಂದ ಅವರಿಗೆ ಕೆಲ ಸಿನಿಮಾ ಅವಕಾಶಗಳು ಕೈ ತಪ್ಪಿದ್ದವು. ಬಳಿಕ ನಿರಂತರ ವ್ಯಾಯಾಮ, ಯೋಗ ಮಾಡುವ ಮೂಲಕ ತೂಕ ಇಳಿಕೆ ಮಾಡಿಕೊಂಡಿದ್ದರು. ಸದ್ಯ ಈಗ ಡ್ಯಾನ್ಸ್‌ ಚಾಂಪಿಯನ್‌ ರಿಯಾಲಿಟಿ ಶೋನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ದೇಹವನ್ನು ನ್ಯಾಚುರಲ್‌ ಆಗಿ ಸದೃಢವಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  ದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡಿದರೆ ತಪ್ಪೇನು? ಅಕ್ಷಯ್ ಪ್ರಶ್ನೆದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡಿದರೆ ತಪ್ಪೇನು? ಅಕ್ಷಯ್ ಪ್ರಶ್ನೆ

   ನಟ ಚಂದನ್‌ ಕುಮಾರ್‌

  ನಟ ಚಂದನ್‌ ಕುಮಾರ್‌

  ನಟ ಚಂದನ್‌ ಕುಮಾರ್‌ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಲಾಕ್‌ಡೌನ್‌ ಆಗಿದ್ದಾಗ ನಟ ಚಂದನ್‌ ಕುಮಾರ್‌ ಕೂಡ ತೂಕ ಹೆಚ್ಚಿಸಿಕೊಂಡಿದ್ದರು. ಇದೇ ವೇಳೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಸಿಕ್ಕ ಹಿನ್ನೆಲೆ ನಿರಂತರವಾಗಿ ವ್ಯಾಯಾಮ ಮಾಡಿ ತಮ್ಮ ತೂಕವನ್ನು ಇಳಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಯಾವುದೇ ಸರ್ಜರಿ ಮಾಡಿಸಿಕೊಳ್ಳದೇ ತಾಳ್ಮೆಯಿಂದ ವರ್ಕೌಟ್‌ ಮಾಡಿ ಈಗ ಬೇರೆಯವರಿಗೂ ಮಾದರಿಯಾಗಿದ್ದಾರೆ.

   ನಟ ಜಯರಾಮ್‌ ಕಾರ್ತಿಕ್‌

  ನಟ ಜಯರಾಮ್‌ ಕಾರ್ತಿಕ್‌

  'ಅಶ್ವಿನಿ ನಕ್ಷತ್ರ' ಮೂಲಕ ಖ್ಯಾತಿ ಗಳಿಸಿದ್ದ ನಟ ಜಯರಾಮ್‌ ಕಾರ್ತಿಕ್‌ (ಜೆಕೆ) ಕನ್ನಡ ಸಿನಿರಂಗದಲ್ಲಿ ಮಾತ್ರವಲ್ಲದೆ ಹಿಂದಿ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ನಟಿಸುವ ಮೂಲಕ ಎಲ್ಲರ ಗಮನ ಸೆಳದಿದ್ದರು. ಕಳೆದ ಕೆಲ ವರ್ಷಗಳಿಂದ ಬೇರೆ ಯಾವುದೇ ಸಿನಿಮಾ, ಧಾರಾವಾಹಿಗಳಲ್ಲಿ ಜೆಕೆ ನಟನೆ ಮಾಡುತ್ತಿಲ್ಲ. ಆದರೂ ಕೂಡ ತಮ್ಮ ಫಿಟ್ನೆಸ್‌ನ್ನು ಮರೆತಿಲ್ಲ. ಇತ್ತೀಚಿಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ತಮ್ಮ ವರ್ಕ್‌ಔಟ್‌ ಪೋಟೊವೊಂದನ್ನು ಶೇರ್‌ ಮಾಡಿಕೊಂಡಿದ್ದರು. ಆ ಪೋಟೊಗೆ ಸಾಕಷ್ಟು ಕಮೆಂಟ್‌ಗಳು ಬಂದಿದ್ದವು. ನಿರಂತರವಾಗಿ ಶ್ರಮ ವಹಿಸಿದ ಪರಿಣಾಮ ಈಗಲೂ ಕೂಡ ಯಾವುದೇ ನಟರಿಗೂ ಕಡಿಮೆ ಇಲ್ಲದಂತೆ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.

  ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!

   ನಟ ಜಗನ್ನಾಥ್‌ ಚಂದ್ರಶೇಖರ್‌

  ನಟ ಜಗನ್ನಾಥ್‌ ಚಂದ್ರಶೇಖರ್‌

  'ಲಕ್ಷಣ' ಸೀರಿಯಲ್‌ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ ಜಗನ್ನಾಥ್‌ ಚಂದ್ರಶೇಖರ್‌ ಕೂಡ ತಮ್ಮ ದೇಹ ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿದಿನ ವರ್ಕೌಟ್‌ ಮಾಡುತ್ತಾರೆ. ಯಾವುದೇ ಸರ್ಜರಿಗಳಿಗೆ ಒಳಗಾಗದೇ ನಿರಂತರವಾಗಿ ವ್ಯಾಯಾಮ ಮಾಡುವ ಮೂಲಕ ಈಗಲೂ ಕೂಡ ತಮ್ಮ ದೇಹ ಸೌಂದರ್ಯವನ್ನು ಸದೃಢವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಸಿನಿಮಾ ಹಾಗೂ ಕಿರುತೆಯಲ್ಲಿರುವವರಿಗೆ ಅವರ ದೇಹ ಸೌಂದರ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ಆರೋಗ್ಯಕರ ವರ್ಕೌಟ್‌ ಬಿಟ್ಟು ಶಾರ್ಟ್‌ ಕಟ್‌ನಲ್ಲಿ ಸಕ್ಸಸ್‌ ಕಾಣಬೇಕು ಎಂದು ಸರ್ಜರಿಗೆ ಒಳಗಾಗುತ್ತಾರೆ. ಆದರೆ, ಅವರೆಲ್ಲರಿಗೂ ಈ ನಟರು ಸ್ಪೂರ್ತಿಯಾಗಿದ್ದಾರೆ. ಸತತ ಶ್ರಮ ಪಟ್ಟರೆ, ಫಲಿತಾಂಶ ಕೂಡ ಅಷ್ಟೇ ಅದ್ಬುತವಾಗಿ ಸಿಗುತ್ತದೆ ಎಂಬುದನ್ನು ಈ ನಟರು ಸಾಧಿಸುವ ಮೂಲಕ ತೋರ್ಪಡಿಸಿದ್ದಾರೆ.

  English summary
  Kannada Tv Actors who underwent an amazing major body transformation, Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X