»   » ತಮಿಳಿನಲ್ಲಿ ಖಳನಾಗಿ ಜೆಕೆ ಅಲಿಯಾಸ್ ಜಯ ಕಾರ್ತಿಕ್

ತಮಿಳಿನಲ್ಲಿ ಖಳನಾಗಿ ಜೆಕೆ ಅಲಿಯಾಸ್ ಜಯ ಕಾರ್ತಿಕ್

Posted By:
Subscribe to Filmibeat Kannada

ಹಿರಿತೆರೆಗಿಂತ ಕಿರುತೆರೆಯಲ್ಲಿಯೇ ಹೆಚ್ಚು ಸುದ್ದಿ ಮಾಡಿರುವ ಜೆ.ಕೆ ಅಲಿಯಾಸ್ ಜಯ ಕಾರ್ತಿಕ್ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಸೂಪರ್ ಸ್ಟಾರ್ ಜೆ.ಕೆ ಯಾಗಿ ಎಲ್ಲರ ಮನೆ-ಮನ ಗೆದ್ದಿರುವ ಹುಡುಗ.

ಅಂದ ಹಾಗೆ ಸಣ್ಣ ಮಟ್ಟಿನ ಖಳ ನಾಯಕನ ಪಾತ್ರ ಮಾಡುತ್ತಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದುಕೊಂಡ ಜೆ.ಕೆ ಇದೀಗ ಇನ್ನೂ ಹೆಸರಿಡದ ತಮಿಳು ಚಿತ್ರವೊಂದರ ಖಳ ನಾಯಕನ ಪಾತ್ರಕ್ಕಾಗಿ ಕಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರಂತೆ.

Kannada TV star Jaya Karthik to act as villain in Tamil Film

ಕಾಲಿವುಡ್ ಸ್ಟಾರ್ ಕಾರ್ತಿ ಹಾಗೂ ಪ್ರಣೀತಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ಶಗುನಿ' ಚಿತ್ರ ನಿರ್ದೇಶನ ಮಾಡಿದ್ದ ಶಂಕರ್ ದಯಾಳ್, ಜೆ.ಕೆ ನಟಿಸುವ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ನಾಯಕನಾಗಿ ವಿಷ್ಣು ವಿಶಾಲ್ ನಟಿಸುತ್ತಿದ್ದಾರೆ.

ನಿರ್ದೇಶಕ ಶಂಕರ್ ದಯಾಳ್, ತಮ್ಮ ಮುಂದಿನ ಚಿತ್ರಕ್ಕಾಗಿ ಅನುಭವಿ ಖಳ ನಾಯಕ ನಟನನ್ನು ಹುಡುಕುತ್ತಿದ್ದರಂತೆ. ನಂತರ ಸಿಸಿಎಲ್ ಮೂಲಕ ಪರಿಚಯವಿದ್ದ ಚಿತ್ರದ ನಾಯಕ ವಿಷ್ಣು ವಿಶಾಲ್ ನಿರ್ದೇಶಕರಿಗೆ ಜೆ.ಕೆ ಬಗ್ಗೆ ಮಾಹಿತಿ ನೀಡಿದ್ದರಂತೆ.

Kannada TV star Jaya Karthik to act as villain in Tamil Film

ಆದರೆ ಖಳ ನಾಯಕನ ಪಾತ್ರವಾದ್ದರಿಂದ ವಿಷ್ಣು ಜೆ.ಕೆ.ಯನ್ನು ಸಂಪರ್ಕಿಸಲು ಹಿಂದೇಟು ಹಾಕಿದ್ದಾರೆ, ಎಂದು ಚಿತ್ರದ ಶೂಟಿಂಗ್ ಗಾಗಿ ಈಗಾಗಲೇ ಚೆನ್ನೈಗೆ ಹಾರಿರುವ ಸೂಪರ್ ಸ್ಟಾರ್ ಜೆ.ಕೆ, ಸಿ.ಟಿ ಎಕ್ಸ್ ಪ್ರೆಸ್ ನೊಂದಿಗೆ ತಾವು ಚಿತ್ರಕ್ಕೆ ಖಳ ನಾಯಕನಾಗಿ ಆಯ್ಕೆಯಾದ ಬಗೆಯನ್ನು ಹಂಚಿಕೊಂಡಿದ್ದಾರೆ.

ವಿಶೇಷವಾಗಿ ಖಳನಾಯಕನ ಸುತ್ತ ಸುತ್ತುವ ಕಥೆಯಲ್ಲಿ ನಮ್ಮ ಸೂಪರ್ ಸ್ಟಾರ್ ಜೆ.ಕೆ ಹೈಲೈಟ್ ಆಗ್ತಾರಂತೆ. ಈಗಾಗಲೇ ಕನ್ನಡದ ತುಂಬಾ ಚಿತ್ರಗಳಲ್ಲಿ ನಟಿಸಿದ್ದು, ಇನ್ನೂ ಬಿಡುಗಡೆಗಾಗಿ ಕಾಯುತ್ತಿವೆ.

ಅದೇನೇ ಇರಲಿ ಒಟ್ನಲ್ಲಿ ಸ್ಯಾಂಡಲ್ ವುಡ್ ಕ್ರೇತ್ರದಲ್ಲಿ ಮಾತ್ರವಲ್ಲದೇ ಪರಬಾಷಾ ಚಿತ್ರರಂಗದಲ್ಲೂ ನಟಿಸುತ್ತಿರುವ ನಮ್ಮ ಜಯ ಕಾರ್ತಿಕ್ ಗೆ ಆಲ್ ದ ಬೆಸ್ಟ್ ಹೇಳೋಣ ಅಲ್ವಾ.

English summary
Kannada actor Jaya Karthik plays a villain role in Tamil movie. The movie is directed by Shankar Dayal

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada