twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ 'ಡಿಯರ್ ಕಾಮ್ರೇಡ್' ರಿಲೀಸ್ ಆಗಿದ್ದು ಐದೇ ಚಿತ್ರಮಂದಿರದಲ್ಲಿ.!

    |

    Recommended Video

    ರಶ್ಮಿಕಾ ಮಂದಣ್ಣಗೆ ಸರಿಯಾಗಿ ಬುದ್ದಿ ಕಲಿಸಿದ ಕನ್ನಡಿಗರು..? | FILMIBEAT KANNADA

    ಬೇರೆ ಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ಹೆಚ್ಚು ರಿಲೀಸ್ ಮಾಡುವುದರಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಮಸ್ಯೆ ಎಂದು ಬೊಬ್ಬೆ ಹೊಡಿತಾರೆ. ಆದರೂ, ನೂರು, ಇನ್ನೂರು, ಮುನ್ನೂರು ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳು ಪ್ರದರ್ಶನವಾಗುತ್ತೆ. ಆರವತ್ತು, ಏಪ್ಪತ್ತು, ಏಂಬತ್ತು ಥಿಯೇಟರ್ ನಲ್ಲಿ ಕನ್ನಡ ಸಿನಿಮಾ ಪ್ರದರ್ಶನವಾಗುತ್ತೆ.

    ಇನ್ನೊಂದು ಕಡೆ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬರಲಿ. ಆಗ, ಬೇರೆ ಭಾಷೆಯ ಚಿತ್ರಗಳ ಹಾವಳಿ ತಪ್ಪಿಸಬಹುದು ಎಂದು ಹೇಳ್ತಾರೆ. ಕೆಲವರು ಡಬ್ಬಿಂಗ್ ಬೇಡ, ಅದರಿಂದ ನಮ್ಮ ಸಂಸ್ಕೃತಿ ಹಾಳಾಗುತ್ತೆ. ಕಲಾವಿದರ ಜೀವನಕ್ಕೆ ಕಷ್ಟ ಆಗುತ್ತೆ ಅಂತಾನೂ ಹೇಳ್ತಾರೆ.

    Dear Comrade Review : ಬಾಬಿ - ಲಿಲ್ಲಿಯ ಎಮೋಷನಲ್ ಲವ್ ಸ್ಟೋರಿ Dear Comrade Review : ಬಾಬಿ - ಲಿಲ್ಲಿಯ ಎಮೋಷನಲ್ ಲವ್ ಸ್ಟೋರಿ

    ಸುಮ್ಮನೇ ಏನೋ ಒಂದು ಹೇಳಬೇಕು ಎಂದು ಹೇಳ್ತಾರೆ ಹೊರತು ಸದ್ಯದ ಪರಿಸ್ಥಿತಿಯ ಬಗ್ಗೆ ಯಾರೂ ಕಡಿವಾಣ ಹಾಕೋಕೆ ಮುಂದಾಗಲ್ಲ. ಇದಕ್ಕೆ ತಾಜಾ ಉದಾಹರಣೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ. ಏನಿದು ಕಾಮ್ರೇಡ್ ಕಥೆ? ಮುಂದೆ ಓದಿ.....

    200ಕ್ಕೂ ಅಧಿಕ ಸ್ಕ್ರೀನ್ ನಲ್ಲಿ ಕಾಮ್ರೇಡ್

    200ಕ್ಕೂ ಅಧಿಕ ಸ್ಕ್ರೀನ್ ನಲ್ಲಿ ಕಾಮ್ರೇಡ್

    ಡಿಯರ್ ಕಾಮ್ರೇಡ್ ಸಿನಿಮಾ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಬಂದಿದೆ. ಕರ್ನಾಟಕದಲ್ಲಿ ಡಿಯರ್ ಕಾಮ್ರೇಡ್ ಚಿತ್ರವನ್ನ ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ರಿಲೀಸ್ ಮಾಡಲಾಗಿದೆ. ಹಾಗಿದ್ರೆ, ಕನ್ನಡದಲ್ಲಿ ಈ ಸಿನಿಮಾ ಯಾಕೆ ಡಬ್ ಮಾಡಿದ್ರು. ಸುಮ್ಮನೇ ತೆಲುಗಿನಲ್ಲಿ ಬಂದಿದ್ರೆ ಸಾಕಿತ್ತು. ಎಲ್ಲರೂ ಅದನ್ನೇ ನೋಡಿಕೊಳ್ಳುತ್ತಿದ್ದರು ಅಲ್ವಾ?

    ಕನ್ನಡದ ಕಾಮ್ರೇಡ್ ಕೇವಲ 5 ಚಿತ್ರಮಂದಿರದಲ್ಲಿ.!

    ಕನ್ನಡದ ಕಾಮ್ರೇಡ್ ಕೇವಲ 5 ಚಿತ್ರಮಂದಿರದಲ್ಲಿ.!

    ಕನ್ನಡ ಭಾಷೆಯಲ್ಲಿ ಡಿಯರ್ ಕಾಮ್ರೇಡ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿರುವುದು ಕೇವಲ 5 ಚಿತ್ರಮಂದಿರದಲ್ಲಿ. 200 ಸ್ಕ್ರೀನ್ ನಲ್ಲಿ ತೆಲುಗು 5 ಚಿತ್ರಮಂದಿರದಲ್ಲಿ ಕನ್ನಡ. ಪೀಣ್ಯದ ಭಾರತಿ ಚಿತ್ರಮಂದಿರ (ಒಂದು ಶೋ), ಬನಶಂಕರಿಯ ಕಾಮಾಕ್ಯ (ಎರಡು ಶೋ), ಜಿಗಿಣಿಯ ನಂದೀಶ್ವರ (ಒಂದು ಶೋ), ಕೆಂಗೇರಿಯ ವೆಂಕಟೇಶ್ವರ (ಎರಡು ಶೋ) ಹಾಗೂ ಸಿಂಗಾಪುರದ ವೈನಿಧಿ (ಒಂದು ಶೋ) ಚಿತ್ರದಲ್ಲಿ ಕನ್ನಡ ಭಾಷೆಯಲ್ಲಿ ಕಾಮ್ರೇಡ್ ಪ್ರದರ್ಶನವಾಗ್ತಿದೆ.

    'ಡಿಯರ್ ಕಾಮ್ರೇಡ್' ಮೊದಲ ದಿನದ ಕಲೆಕ್ಷನ್ ರಿಪೋರ್ಟ್'ಡಿಯರ್ ಕಾಮ್ರೇಡ್' ಮೊದಲ ದಿನದ ಕಲೆಕ್ಷನ್ ರಿಪೋರ್ಟ್

    ಕನ್ನಡದಲ್ಲಿ ನೋಡೋರು ಕಮ್ಮಿ ಅಂತಾನಾ?

    ಕನ್ನಡದಲ್ಲಿ ನೋಡೋರು ಕಮ್ಮಿ ಅಂತಾನಾ?

    ಕನ್ನಡ ಭಾಷೆಯಲ್ಲಿ ಸಿನಿಮಾ ನೋಡಲು ಜನ ಆಸಕ್ತಿ ತೋರುವುದಿಲ್ಲ, ಮೂಲ ಭಾಷೆಯಲ್ಲೇ ಚಿತ್ರ ವೀಕ್ಷಿಸಲು ಜನರು ಇಷ್ಟ ಪಡ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಜನರು ನೋಡಬೇಕು ಎನಿಸಿದರೂ ಯಾವುದೋ ಒಂದೊಂದು ಚಿತ್ರಮಂದಿರದಲ್ಲಿ ಒಂದೊಂದು ಶೋ ಇದ್ದರೇ ಹೇಗೆ ನೋಡಲು ಸಾಧ್ಯ ಎಂಬುದನ್ನ ಯೋಚಿಸಬೇಕಾಗಿದೆ.

    ದೇವರಕೊಂಡ ಜೊತೆ ಸಿನಿಮಾ ಮಾಡ್ಬೇಡ ಎಂದು ಮನೆಯವರೇ ನಿರಾಕರಿಸಿದ್ದರು: ರಶ್ಮಿಕಾದೇವರಕೊಂಡ ಜೊತೆ ಸಿನಿಮಾ ಮಾಡ್ಬೇಡ ಎಂದು ಮನೆಯವರೇ ನಿರಾಕರಿಸಿದ್ದರು: ರಶ್ಮಿಕಾ

    ಬಹುಶಃ ಹೀಗೆ ಮಾಡೋದು ಉತ್ತಮ

    ಬಹುಶಃ ಹೀಗೆ ಮಾಡೋದು ಉತ್ತಮ

    ಬೇರೆ ಭಾಷೆಯ ಚಿತ್ರಗಳನ್ನ ರೀಮೇಕ್ ಮಾಡುವ ಸಂಪ್ರದಾಯವಿದೆ. ಒಂದು ವೇಳೆ ಡಬ್ಬಿಂಗ್ ಮಾಡಿದ್ರೆ ರೀಮೇಕ್ ಮಾಡೋ ಟ್ರೆಂಡ್ ಕಮ್ಮಿಯಾಗಬಹುದು. ಡಬ್ಬಿಂಗ್ ಮಾಡಿ ರಿಲೀಸ್ ಮಾಡಿದ್ರೆ ಮೂಲ ಭಾಷೆಯ ಚಿತ್ರವನ್ನ ಕಡಿಮೆ ಚಿತ್ರಮಂದಿರಲ್ಲಿ ಬಿಡುಗಡೆ ಮಾಡಬೇಕು. ಅದರಿಂದ ಡಬ್ಬಿಂಗ್ ಚಿತ್ರಗಳನ್ನ ನೋಡುವ ಸಂಖ್ಯೆ ಹೆಚ್ಚಾಗಬಹುದು. ಡಬ್ಬಿಂಗ್ ಮಾಡಿ, ಮೂಲ ಸಿನಿಮಾವನ್ನು ಹೆಚ್ಚು ಚಿತ್ರಮಂದಿರದಲ್ಲಿ ಬಿಟ್ಟಾಗ ಅಥವಾ ಅದೂ ಬೇಕು, ಇದೂ ಬೇಕುಅಂದಾಗ ಸಮಸ್ಯೆಯಾಗುವುದು ಕನ್ನಡ ಚಿತ್ರಗಳಿಗೆ ಮಾತ್ರವೇ.

    English summary
    Vijay devarakonda and rashmika mandanna starrer kannada version dear comrade released in only 5 theaters.
    Saturday, July 27, 2019, 12:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X