ನನ್ನದೇನಾದರೂ ಇದ್ದರೆ ಕೇಳಿ, ದರ್ಶನ್ ಬಗ್ಗೆ ಕೇಳಿದ್ದಕ್ಕೆ ಜಗ್ಗೇಶ್ ಹೀಗೆ ಹೇಳೋದಾ...?
ಜಗ್ಗೇಶ್ ಅದ್ಭುತ ನಾಯಕ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅವರ ಡೈಲಾಗ್ ಡೆಲಿವರಿ ಮತ್ತು ಕಾಮಿಡಿ ಟೈಮಿಂಗ್ ನ ಯಾರಿಂದಲೂ ಅಷ್ಟು ಸುಲಭಕ್ಕೆ ಅನುಕರಿಸಲು ಸಾಧ್ಯವಿಲ್ಲ.ಇಂಥ ಜಗ್ಗೇಶ್ ಕಾಲ ..ಕಾಲಕ್ಕೆ .. ಕನ್ನಡ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಕಿಡಿ ಕಾರ್ತಾನೆ ಬಂದಿದ್ದಾರೆ. ಅದು, ಪ್ಯಾನ್ ಇಂಡಿಯಾ ವಿಚಾರದಲ್ಲಿರಲಿ .. ಕಿರಿಯರಿಗೆ ಹಿರಿಯರ ಮೇಲಿರುವ ಗೌರವದ ವಿಚಾರದಲ್ಲಿರಲಿ.. ಜಗ್ಗೇಶ್ ತಮ್ಮ ಅಸಮಾಧಾನ ಹೊರ ಹಾಕ್ತಾನೇ ಬಂದಿದ್ದಾರೆ.
ಇನ್ನೂ..ನಿಮಗೆ ಗೊತ್ತು.. ಜಗ್ಗೇಶ್ ಮತ್ತು ಸದ್ಯಕ್ಕೆ ಜೈಲು ಪಾಲಾದ ದರ್ಶನ್ ನಡುವೆ ಒಂದಾನೊಂದು ಕಾಲದಲ್ಲಿ ಸ್ನೇಹ ಮತ್ತು ಅನುಬಂಧ ಇತ್ತು. ಆದರೆ, ಅದ್ಯಾವಾಗ .. ದರ್ಶನ್ ಥರ ಅವುರ್ ಥರಾ ಇದಾರಲ್ಲಾ? ಅವನ..ನ್ ತಲೆ ಮಾಂಸ ಕಳಿಸಿ ಅಣ್ಣಾ.... ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರೆಲ್ಲಾ ಇಲ್ಲ....ಅಂತಾ ಯದ್ವಾ ತದ್ವಾ ಜಗ್ಗೇಶ್ ಮಾತನಾಡಿದ್ರೋ ಆ ದಿನದಿಂದನೇ ಈ ಸಂಬಂಧ ಮುರಿದು ಬಿತ್ತು. ಅಲ್ಲಿಂದಾಚೆ .. ದರ್ಶನ್ ಮತ್ತು ಜಗ್ಗೇಶ್ ವಿರುದ್ಧ ದಿಕ್ಕಿನ ಕಡೆ ಮುಖ ಮಾಡಿದರು.

ನಿಜಾ.. ಆ ನಂತರ ಸಂಬಂಧದಲ್ಲಿ ಬಿರುಕು ಮೂಡಿಲ್ಲ ಎಂಬ ಸಂದೇಶ ಸಾರುವ ಪ್ರಯತ್ನ ನಡೆದಿತ್ತು ಆದರೂ, ಅದು ಒಡೆದ ಕನ್ನಡಿ ಎನ್ನುವುದು ಜಗಜ್ಜಾಹೀರಾಗಿತ್ತು. ಇದಕ್ಕೆ ಪೂರಕವಾಗಿ ಆ ನಂತರ ಇವರು ಇಬ್ಬರು ಪುನೀತ್ ನಮನ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ಹೊರತು ಪಡಿಸಿದರೆ, ಆ ನಂತರ ಒಟ್ಟಿಗೆ ಕಾಣಿಸಿಕೊಂಡ ಉದಾಹರಣೆ ಇಲ್ಲ. ಉಭಯ ಕುಶಲೋಪರಿಯನ್ನು ವಿಚಾರಿಸಿಕೊಂಡು ಶುಭಾಶಯವನ್ನೂ ಹೇಳಿದ ಉದಾಹರಣೆ ಕೂಡ ಇಲ್ಲ. ಹೀಗಿರುವಾಗ ಇದೀಗ ಜಗ್ಗೇಶ್ ಕೊಲೆ ಆರೋಪವನ್ನು ಹೊತ್ತು ಕಂಬಿ ಹಿಂದೆ ಇರುವ ದರ್ಶನ್ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದಾರೆ. ನಾನು ಬೇರೆಯವರ ಬಗ್ಗೆ ಮಾತನಾಡಲ್ಲ, ನನ್ನದೇನಾದರೂ ಇದ್ದರೆ ಕೇಳಿ ಎಂದು ಖಂಡ ತುಂಡವಾಗಿಯೇ ಹೇಳಿದ್ದಾರೆ.
ಹೌದು, ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆಯ ನಂತರ ದರ್ಶನ್ ಪ್ರಕರಣದ ಕುರಿತು ಜಗ್ಗೇಶ್ ಅವರ ಪ್ರತಿಕ್ರಿಯೆ ಪಡೆಯಲು, ಪಬ್ಲಿಕ್ ಟಿವಿ ಪ್ರತಿನಿಧಿ ಮುಂದಾದರು. ಇದೇ ಸಮಯದಲ್ಲಿ ನಿರ್ಮಾಪಕರ ಕಷ್ಟ ಮತ್ತು ನಷ್ಟದ ಬಗ್ಗೆ ಮಾತನಾಡಿದ ಜಗ್ಗೇಶ್, ಶಿಸ್ತು ಇಲ್ಲದೇ ಇರೋದು ಸಂಕಷ್ಟಕ್ಕೆ ಕಾರಣ ಅಂದಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಹೆಸರು ಕೇಳಿದ ತಕ್ಷಣ ನಾನು ಯಾರ ವಿಚಾರವನ್ನೂ ಮಾತನಾಡಲ್ಲ. ನೇರವಾಗಿ ನನ್ನದೇನಾದರೂ ಇದ್ದರೆ ಕೇಳಿ ಎಂದು ಅಲ್ಲಿಂದ ಹೊರಟು ಹೋಗಿದ್ದಾರೆ ಜಗ್ಗೇಶ್.

ಜಗ್ಗೇಶ್ ಅವರ ಈ ನಡೆ ಮತ್ತು ನುಡಿ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ತನಕ್ಕಿಂತ ಕಿರಿಯ ಕಲಾವಿದ, ತನ್ನ ಕಲಾ ಬಂಧು ಹೀಗೆ ಕಷ್ಟದಲ್ಲಿದ್ದಾಗ ಅವರಿಗೆ ಚಿತ್ರರಂಗದ ಹಿರಿಯ ನಾಯಕನಾಗಿ ಅವರಿಗೆ ಬೆಂಬಲ ಕೊಡುವುದು ಬೇಡ, ಕೊನೆ ಪಕ್ಷ ತಮ್ಮ ಅಭಿಪ್ರಾಯವನ್ನಾದರೂ ಜಗ್ಗೇಶ್ ಹೇಳಬೇಕಿತ್ತು ಎಂಬ ಮಾತು ಕೇಳಿ ಬರುತ್ತಿದೆ. ಪರ-ವಿರೋಧದ ಚರ್ಚೆ ನಡೆಯುತ್ತಿದೆ.


Click it and Unblock the Notifications











