For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಮತ್ತೊಬ್ಬ ಹಿರಿಯ ನಟಿ ನಿಧನ: ಹಾಸ್ಯ ಕಲಾವಿದೆ ಬಿ ಜಯಾ ಇನ್ನಿಲ್ಲ

  |

  ಸ್ಯಾಂಡಲ್ ವುಡ್ ಇಂಡಸ್ಟ್ರಿ ಮತ್ತೊಬ್ಬ ಕಲಾವಿದೆಯನ್ನು ಕಳೆದುಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದ ಬಿ ಜಯಾ ಅವರು ಗುರುವಾರ (ಜೂನ್ 3) ಮಧ್ಯಾಹ್ನ ನಿಧನರಾದರು ಎಂದು ತಿಳಿದು ಬಂದಿದೆ.

  ಕನ್ನಡ ಚಿತ್ರರಂಗದ ಹಿರಿಯ ನಟಿ B Jayamma ವಿಧಿವಶ | Filmibeat Kannada

  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 75 ವರ್ಷದ ಬಿ ಜಯಾ ಕರುಣಾಶ್ರಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂಬ ವಿಚಾರ ಹೊರಬಿದ್ದಿದೆ.

  ಬಿ ಜಯಾ ಅವರು ಕಳೆದ ಆರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಖ್ಯಾತಿ ಗಳಿಸಿದ್ದರು.

  1958ರಲ್ಲಿ ಮೂಡಿ ಬಂದಿದ್ದ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಬಿ ಜಯಾ ಚೊಚ್ಚಲ ಬಾರಿಗೆ ನಟಿಸಿದರು. ಅಲ್ಲಿಂದ ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಸೇರಿದಂತೆ ಇಂದಿನ ನಟರ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

  ಪ್ರಮುಖ ಹಾಸ್ಯಕಲಾವಿದೆಯಾಗಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನರಸಿಂಹ ರಾಜು, ದ್ವಾರಕೀಶ್, ಬಾಲಕೃಷ್ಣ ಅಂತಹ ಮೇರು ಕಲಾವಿದರು ಜೊತೆ ಸಹನಟಿಯಾಗಿ ಕಾಣಿಸಿಕೊಂಡಿದ್ದರು.

  English summary
  Kannada Veteran actress B Jayamma Passes Away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X