»   » ಕನ್ನಡದ ಹಿರಿಯ ನಟ ಚೇತನ್ ರಾಮರಾವ್ ನಿಧನ

ಕನ್ನಡದ ಹಿರಿಯ ನಟ ಚೇತನ್ ರಾಮರಾವ್ ನಿಧನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ, ಹಿರಿಯ ನಟ ಚೇತನ್ ರಾಮರಾವ್ ಅವರ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ರಾಮರಾವ್, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ.

76 ವರ್ಷದ ರಾಮರಾವ್ ಅವರು ಕಳೆದ ಕೆಲ ತಿಂಗಳುಗಳಿಂದ ಮಂಡಿ, ಸೊಂಟ ಮತ್ತು ಪಕ್ಕೆಲುಬುನಲ್ಲಿನ ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮೈಸೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚೇತರಿಸಿಕೊಳ್ಳಲಾಗದ ಕಾರಣ ಮೂವರು ಹೆಣ್ಣು ಮಕ್ಕಳು, ಪತ್ನಿಯನ್ನ ಅಗಲಿದ್ದಾರೆ.

Kannada Veteran Artist Chetan Rama Rao Passed Away

ಪೋಷಕ ಪಾತ್ರಗಳಿಗೆ ಹೆಚ್ಚು ಹೊಂದಿಕೊಂಡಿದ್ದ ರಾಮರಾವ್ ಅವರು ಸುಮಾರು 350ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವರನಟ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಸೇರಿ ಸ್ಯಾಂಡಲ್​ವುಡ್​ನ ಅನೇಕ ದಿಗ್ಗಜ ನಟರ ಜತೆ ಅಭಿನಯಿಸಿದ್ದಾರೆ. 1968ರಲ್ಲಿ ಡಾ.ರಾಜ್ ಕುಮಾರ್ ಜತೆ 'ಮಾರ್ಗದರ್ಶಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿದರು. 

ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಸುದೀರ್ಘ ಸೇವೆ ಸಲ್ಲಿಸಿರುವ ರಾಮರಾವ್ ಅವರು 'ಆಪರೇಷನ್ ಡೈಮಂಡ್ ರಾಕೆಟ್', 'ಬಾಳು ಬೆಳಗಿತು', 'ರಾಜ ನನ್ನ ರಾಜ', 'ಲಗ್ನ ಪತ್ರಿಕೆ', 'ಹುಲಿಯ ಹಾಲಿನ ಮೇವು', 'ಒಲವೇ ಗೆಲುವು' 'ಆಪ್ತರಕ್ಷಕ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿಕೊಂಡಿದ್ದರು. ರಾಮರಾವ್ ಅವರ ಪ್ರತಿಭೆಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕಲಾದ್ರೋಣ, ನಟ ಚತುರ, ಕಲಾಭೀಷ್ಮ, ಕಲಾ ರತ್ನ ಪ್ರಶಸ್ತಿಗಳು ಅವರ ಮುಡಿಗೇರಿವೆ.

English summary
Kannada Veteran Artist Chetan Rama Rao Passed Away on Friday Night (December 23rd). He was aged 76 and was Not well from last couple of years
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada