ಉಪ್ಪಿ, ಸೂರಿ, ಶಶಾಂಕ್, ನಾಗಾಭರಣ ಅವ್ರ ಘನತೆ ಹೆಚ್ಚಿಸಿದ ಶಿಷ್ಯಂದಿರು

By Naveen

ಇವತ್ತು ಶಿಕ್ಷಕರ ದಿನಾಚರಣೆ. ಶಿಕ್ಷಣ ಎನ್ನುವುದು ನಾಲ್ಕು ಗೋಡೆಗೆ, ಶಾಲೆಗೆ, ಕಾಲೇಜಿಗೆ ಸಂಬಂಧಪಟ್ಟಿದ್ದು ಮಾತ್ರವಲ್ಲ. ಕಲಿಯುವ ಆಸಕ್ತಿ ಇದ್ದು, ವಿಶಾಲ ಮನೋಭಾವ ಹೊಂದಿದ್ದರೆ ಪ್ರತಿದಿನ ಕೂಡ ನಮಗೆ ಒಬ್ಬ ಗುರು ಸಿಗುತ್ತಾರೆ.

ಜೀವನದಲ್ಲಿ ಗುರು ಎಷ್ಟು ಮುಖ್ಯನೋ ಶಿಷ್ಯನು ಅಷ್ಟೇ ಮುಖ್ಯ. ಗುರುವಿನ ಘನತೆ ಹೆಚ್ಚಾಗುವುದು ಶಿಷ್ಯ ಮಾಡುವ ಒಳ್ಳೆಯ ಕೆಲಸಗಳ ಮೂಲಕ. ಅದೇ ರೀತಿ ಕನ್ನಡ ಚಿತ್ರರಂಗ ಯುವ ನಿರ್ದೇಶಕರು ತಮ್ಮ ಗುರುಗಳ ಹೆಸರನ್ನು ಉಳಿಸುತ್ತಿದ್ದಾರೆ.

ಉಪೇಂದ್ರ ಅವರ ಶಿಷ್ಯ ದೀಪಕ್ ಮಧುವನಹಳ್ಳಿ 'ಭಾಗ್ಯರಾಜ್' ಹಾಗೂ 'ಕಳ್ಬೆಟ್ಟದ ದರೋಡೆಕೋರರು' ಚಿತ್ರಗಳ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಕಾಂತ ಕನ್ನಲ್ಲಿ ಶಶಾಂಕ್ ಅವರ ಶಿಷ್ಯರಾಗಿದ್ದು, ಸದ್ಯ 'ಇರುವುದೆಲ್ಲವ ಬಿಟ್ಟು' ಚಿತ್ರದ ಸಾರಥಿ ಆಗಿದ್ದಾರೆ. 21 ವರ್ಷಕ್ಕೆ ಡೈರೆಕ್ಟರ್ ಕ್ಯಾಪ್ ತೊಟ್ಟ ಲೋಹಿತ್ ಅವರಿಗೆ ಸೂರಿ ಹಾಗೂ ವೆಟ್ರಿಮಾರನ್ ಗುರುಗಳು. ಟಿ ಎಸ್ ನಾಗಾಭರಣ ಗರಡಿಯಲ್ಲಿ ಪಳಗಿದ ಸತ್ಯ ಪ್ರಕಾಶ್ 'ರಾಮಾ ರಾಮಾ ರೇ' ಬಳಿಕ 'ಒಂದಲ್ಲಾ ಎರಡಲ್ಲಾ' ಎಂಬ ಅದ್ಬುತ ಸಿನಿಮಾ ಮಾಡಿದ್ದಾರೆ.

ಅಂದಹಾಗೆ, ಶಿಕ್ಷಕರ ದಿನಾಚರಣೆ ವಿಶೇಷವಾಗಿ ಸ್ಯಾಂಡಲ್ ವುಡ್ ನ ಈ ನಾಲ್ಕು ಯುವ ಹಾಗೂ ಉತ್ಸಾಯಿ ನಿರ್ದೇಶಕರು ತಮ್ಮ ಗುರುಗಳ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

'ಎ' ನೋಡಿ ಡೈರೆಕ್ಟರ್ ಆಗಬೇಕು ಅಂದುಕೊಂಡೆ

'ಎ' ನೋಡಿ ಡೈರೆಕ್ಟರ್ ಆಗಬೇಕು ಅಂದುಕೊಂಡೆ

''ಇವತ್ತು ಗುರುಗಳ ದಿನ. ನನ್ನ ಗುರುಗಳು ಉಪೇಂದ್ರ ಅವರು. ಅವರಿಗೆ ಗಣೇಶ ಮೆಚ್ಚಿನ ದೇವರು. ವಿಶೇಷ ಅಂದರೆ, ಇದೇ ಸಮಯದಲ್ಲಿ ನಮ್ಮ 'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಗಣೇಶನ ಹಾಡು ಕೂಡ ರಿಲೀಸ್ ಆಗಿದೆ. ಇದೆಲ್ಲ ಎಮೋಷನಲಿ ಕನೆಕ್ಟ್ ಆಗುತ್ತದೆ. ಅವರ 'ಎ' ಸಿನಿಮಾ ನೋಡಿ ನಾನು ಡೈರೆಕ್ಟರ್ ಆಗಬೇಕು ಅಂತ ನಿರ್ಧಾರ ಮಾಡಿದ್ದೆ.'' - ದೀಪಕ್ ಮಧುವನಹಳ್ಳಿ, ನಿರ್ದೇಶಕ

ನನ್ನ ಮೂರು ಗುರುಗಳು ಇವರು

ನನ್ನ ಮೂರು ಗುರುಗಳು ಇವರು

''ಸಿನಿಮಾ ನಿರ್ದೇಶಕನಾಗಬೇಕೆನ್ನುವ ನನ್ನ ಕನಸನ್ನು ಸಾಕಾರಗೊಳಿಸಲು ಮೊದಲು ಅವಕಾಶ ಮಾಡಿಕೊಟ್ಟಿದ್ದು 'ಸೈನೆಡ್' ಖ್ಯಾತಿಯ ರಮೇಶ್ ಸರ್. ನನ್ನ ಸಿನಿಮಾ ನಿರ್ದೇಶಕನಾಗುವ ಕನಸಿನ ರೂವಾರಿ ಉಪ್ಪಿ ಸರ್. ಕೆಲಸ ಮಾಡಿದರೆ ಅವರೊಟ್ಟಿಗೆ ಮಾಡಬೇಕೆನ್ನುವ ಹುಚ್ಚನ್ನು ಈಡೇರಿಸಿದ್ದು ಮನೋಹರ್ ಸರ್. ಎಷ್ಟೇ ಎತ್ತರಕ್ಕೆ ಬೆಳೆದರು ನಾವು ಬೆಳೆದು ಬಂದ ದಾರಿಯನ್ನು ಮರೆಯಬಾರದು!, ಸಿನಿಮಾದಲ್ಲಿ ಕಷ್ಟ ಪಡುವುದಕ್ಕಿಂತ ಹೆಚ್ಚಾಗಿ ಇಷ್ಟ ಪಟ್ಟು ಕೆಲಸ ಮಾಡಬೇಕೆನ್ನುವ ಮೌಲ್ಯವನ್ನು ತೋರಿಸಿಕೊಟ್ಟವರು ಉಪ್ಪಿ ಸರ್.'' - ದೀಪಕ್ ಮಧುವನಹಳ್ಳಿ, ನಿರ್ದೇಶಕ

ಶಶಾಂಕ್ ಸರ್ ಜೊತೆಗೆ ಕೆಲಸ ಮಾಡಿದ ನಾನು ಅದೃಷ್ಟವಂತ

ಶಶಾಂಕ್ ಸರ್ ಜೊತೆಗೆ ಕೆಲಸ ಮಾಡಿದ ನಾನು ಅದೃಷ್ಟವಂತ

''ಶಶಾಂಕ್ ಸರ್ ಜೊತೆಗೆ ಕೆಲಸ ಮಾಡಿದ ನಾನು ತುಂಬ ಅದೃಷ್ಟವಂತ. ಸಿನಿಮಾ ಕಲಿಬೇಕು ಎಂಬ ನನ್ನ ಕನಸನ್ನು ಅವರು ನನಸು ಮಾಡಿದರು. ಹೇಳಿಕೊಡೆದನೇ ನಮಗೆ ಎಲ್ಲವನ್ನು ಕಲಿಸುತ್ತಿದ್ದರು. ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳುತ್ತಿರಲಿಲ್ಲ.. ಸಿಕ್ಕಾಪಟ್ಟೆ ಬೈಯುತ್ತಿದ್ದರು. ಎಲ್ಲವನ್ನು ನಮ್ಮ ಕೈ ನಲ್ಲಿ ನಿಭಾಯಿಸುವಂತೆ ಮಾಡುತ್ತಿದ್ದರು.'' - ಕಾಂತ ಕನ್ನಲ್ಲಿ, ನಿರ್ದೇಶಕ

ನಿರ್ದೇಶಕ ಯಾರ ಮೇಲೆಯೂ ಡಿಪೆಂಡ್ ಆಗಬಾರದು

ನಿರ್ದೇಶಕ ಯಾರ ಮೇಲೆಯೂ ಡಿಪೆಂಡ್ ಆಗಬಾರದು

''ಒಬ್ಬ ನಿರ್ದೇಶಕ ಆದವನು ಯಾರ ಮೇಲೆಯೂ ಡಿಪೆಂಡ್ ಆಗಬಾರದು ಎಂದು ಹೇಳಿಕೊಟ್ಟ ಮಹಾನ್ ಗುರುಗಳು ಅವರು. ಕಲಾವಿದರ ಆಯ್ಕೆ, ಲೊಕೇಷನ್, ಬಜೆಟ್ ಹೀಗೆ ಪ್ರತಿ ವಿಷಯವನ್ನು ಹೇಳಿಕೊಟ್ಟರು. ಇಡೀ ತಂಡವನ್ನು ಹೇಗೆ ನಿಭಾಹಿಸಿ ಸಿನಿಮಾವನ್ನು ಚೆನ್ನಾಗಿ ತೆರೆ ಮೇಲೆ ತರಬೇಕು ಎನ್ನುವುದನ್ನು ಅವರಿಂದ ಕಲಿತಿದ್ದೇನೆ. ಈಗಲೂ ಹೊಸ ನಿರ್ಧಾರ ತೆಗೆದುಕೊಳ್ಳಬೇಕು ಅಂದರೆ ಅವರ ಬಳಿಗೆ ಹೋಗುತ್ತೇನೆ.'' - ಕಾಂತ ಕನ್ನಲ್ಲಿ, ನಿರ್ದೇಶಕ

ನನಗೆ ಇಬ್ಬರು ಡೈರೆಕ್ಟರ್ ಗಳು ಗುರುಗಳು

ನನಗೆ ಇಬ್ಬರು ಡೈರೆಕ್ಟರ್ ಗಳು ಗುರುಗಳು

''ನನಗೆ ಇಬ್ಬರು ಡೈರೆಕ್ಟರ್ ಗಳು ಗುರುಗಳು. ಅದರಲ್ಲಿ ಒಬ್ಬರು ಸೂರಿ ಸರ್. ಅವರ 'ದುನಿಯಾ' ಸಿನಿಮಾ ನೋಡಿ ನಾನು ನಿರ್ದೇಶಕ ಆದೆ. ಅದ್ದರಿಂದ ಅವರ ಜೊತೆಗೆ ಕೆಲಸ ಮಾಡಬೇಕು ಎಂಬುದು ತುಂಬ ಇತ್ತು. ಆದರೆ, ಆಗ ಅವರ ಸಂಪರ್ಕ ಸಿಗಲಿಲ್ಲ. ಅವರ 'ಕೆಂಡಸಂಪಿಗೆ' ಬಂದಾಗ ನನ್ನ 'ಮಮ್ಮಿ' ಸಿನಿಮಾ ಶುರು ಆಗಿತ್ತು. 'ಕೆಂಡಸಂಪಿಗೆ' ಚಿತ್ರೀಕರಣ ನಡೆಯುವ ಸಮಯದಲ್ಲಿ ಅವರ ಕೆಲಸದ ಶೈಲಿ ನೋಡಿಕೊಂಡು ಬಂದೆ.'' - ಲೋಹಿತ್ , ನಿರ್ದೇಶಕ

ವೆಟ್ರಿಮಾರನ್ ಸರ್ ಸ್ಫೂರ್ತಿ ನೀಡಿದ ನಿರ್ದೇಶಕರು

ವೆಟ್ರಿಮಾರನ್ ಸರ್ ಸ್ಫೂರ್ತಿ ನೀಡಿದ ನಿರ್ದೇಶಕರು

''ತಮಿಳಿನಲ್ಲಿ ವೆಟ್ರಿಮಾರನ್ ಸರ್ ನನ್ನ ಗುರುಗಳು. ಅವರ ಫಿಲ್ಮ್ಸ್ ಮೇಕಿಂಗ್ ಸ್ಟೈಲ್ ತುಂಬ ವಿಭಿನ್ನವಾಗಿರುತ್ತದೆ. ಅವರು ತುಂಬ ಸ್ಫೂರ್ತಿ ನೀಡಿದ ನಿರ್ದೇಶಕರು. ಅವರು ಇಂಡಸ್ಟ್ರಿಗೆ ಬಂದು 9 ವರ್ಷ ಆಗಿದ್ದೆ, ಆದರೆ, ಇದುವರೆಗೆ ಬರೀ 3 ಸಿನಿಮಾ ಮಾಡಿದ್ದಾರೆ. ಅವರ ಸ್ಕ್ರೀನ್ ರೈಟಿಂಗ್ ತುಂಬ ಚೆನ್ನಾಗಿ ಇರುತ್ತದೆ. ಆ ರೀತಿ ನಮಗೆ ಸಿನಿಮಾ ಆಗುವುದಿಲ್ಲ ಅನಿಸುತ್ತದೆ.'' - ಲೋಹಿತ್, ನಿರ್ದೇಶಕ

ನನ್ನ ನಿರ್ದೇಶಕದ ಪಯಣ ಶುರು ಆಗಿದ್ದು ನಾಗಾಭರಣ ಸರ್ ಜೊತೆಗೆ

ನನ್ನ ನಿರ್ದೇಶಕದ ಪಯಣ ಶುರು ಆಗಿದ್ದು ನಾಗಾಭರಣ ಸರ್ ಜೊತೆಗೆ

''ವಿ ಮನೋಹರ್ ಸರ್ ನನ್ನ ಮೊದಲ ಸಿನಿಮಾ ಗುರುಗಳು. ನನ್ನ ನಿರ್ದೇಶಕದ ಪಯಣ ಶುರು ಆಗಿದ್ದು, ಟಿ ಎಸ್ ನಾಗಾಭರಣ ಸರ್ ಅವರ ಜೊತೆಗೆ. ಒಂದು ಸಿನಿಮಾ ಎನ್ನುವುದು ಎಷ್ಟು ಸೀರಿಯಸ್ ಕೆಲಸ, ಕಥೆ ಆಯ್ಕೆ, ಚಿತ್ರಕಥೆ ಎನ್ನುವುದು ಎಷ್ಟು ಜವಾಬ್ದಾರಿಯ ಕೆಲಸ ಎನ್ನವುದನ್ನು ಅವರಿಂದ ಕಲಿತೆ.'' - ಸತ್ಯ ಪ್ರಕಾಶ್, ನಿರ್ದೇಶಕ

ನಾನು ಬರವಣಿಗೆ ಕಲಿತಿದ್ದು ಅವರಿಂದ

ನಾನು ಬರವಣಿಗೆ ಕಲಿತಿದ್ದು ಅವರಿಂದ

''ನಂಯಜಮಾನ್ರು' ಅಂತ ವಿಷ್ಣುವರ್ಧನ್ ಅವರ ಒಂದು ಸಿನಿಮಾದ ಮೂಲಕ ನಾಗಾಭರಣ ಸರ್ ಜೊತೆಗೆ ಕೆಲಸ ಶುರು ಮಾಡಿದೆ. ಅಲ್ಲಿಂದ ಐದು ವರ್ಷ ಅವರೊಂದಿಗೆ ಇದ್ದೇ. ಬರವಣಿಗೆ ಹಾಗೂ ಸಮಯ ಹಾಳು ಮಾಡದೆ ನಾನ್ ಸ್ಟಾಪ್ ಕೆಲಸ ಮಾಡಬೇಕು ಎನ್ನುವ ವಿಚಾರವನ್ನು ಅವರಿಂದ ಕಲಿತೆ. ಡೈರೆಕ್ಷನ್ ಎನ್ನುವುದು ಮೊದಲು ಬರವಣಿಗೆಯಲ್ಲಿ ಬರಬೇಕು ಎನ್ನುವ ಕಟುಸತ್ಯ ನನಗೆ ತಿಳಿದಿದ್ದು ಅಲ್ಲೇ''. - ಸತ್ಯ ಪ್ರಕಾಶ್, ನಿರ್ದೇಶಕ

More from Filmibeat

English summary
Teachers Day special : Kannada young director's spoke about their movie teachers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X