ಸದ್ಯದಲ್ಲೇ ತೆರೆಗೆ ಬರ್ತಿದೆ 'ಕನ್ನಡಕ್ಕಾಗಿ ಒಂದನ್ನು ಒತ್ತಿ'

By Bharath Kumar

ಬಿಗ್ ಬಾಸ್ ಖ್ಯಾತಿ ಕೃಷಿ ತಾಪಂಡ, ಚಿಕ್ಕಣ್ಣ, ಅವಿನಾಶ್ ಎಸ್ ಶತಮರ್ಷಣ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಚಿತ್ರ ಶೂಟಿಂಗ್, ಎಡಿಟಿಂಗ್ ಮುಗಿಸಿರುವ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ.

ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರದ ಹಾಡುಗಳನ್ನು ಯೂಟ್ಯೂಬ್ ನಲ್ಲೂ 5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಕುಶಾಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಿಷಿಕೇಶ್ ಅವರ ಛಾಯಾಗ್ರಹಣವಿದೆ. ಅರ್ಜುನ್ ಕಿಟ್ಟು ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್, ಯೋಗರಾಜ್ ಭಟ್, ಕುಶಾಲ್ ಬರೆದಿದ್ದಾರೆ. ಇನ್ನುಳಿದಂತೆ ದತ್ತಣ್ಣ, ಮಿಮಿಕ್ರಿ ಗೋಪಿ, ಸುಚೇಂದ್ರ ಪ್ರಸಾದ್, ಜಯಶ್ರೀ, ರಂಗಾಯಣ ರಘು, ಉಮೇಶ್, ಹೆಚ್.ಎಂ.ಟಿ ವಿಜಯ್, ರವಿ(ಟಾಮಿ) ಸತಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

kannadakkagi ondannu otti movie is ready to release

ಬೆಂಗಳೂರು ಸುತ್ತಮುತ್ತ 'ಸಿಗ್ನೇಚರ್'

ನವೀನ್ ಸರಸ್ವತ್ ಹಾಗೂ ಪೂರ್ಣಿಮಾ ಭಾಸ್ಕರ್ ಪೂಜಾರಿ ಅವರು ನಿರ್ಮಿಸುತ್ತಿರುವ ಸಿಗ್ನೇಚರ್ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಹದಿನೈದು ದಿನಗಳ ಕಾಲ ಈ ಹಂತದ ಚಿತ್ರೀಕರಣ ನಡೆಯಲಿದ್ದು, ಮಾತಿನ ಭಾಗದ ಹಾಗೂ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ.

ಪೂರ್ಣಿಮಾ ಭಾಸ್ಕರ್ ಪೂಜಾರಿ ಅವರು ಬರೆದಿರುವ ಕಥೆಗೆ ಗುರು ಮದ್ಲೇಸರ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಜೀವನ್ ಗೌಡ ಛಾಯಾಗ್ರಹಣ, ವಿಶ್ವ ಸಂಕಲನ ಹಾಗೂ ಗಣೇಶ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜೇಶ್ ಸಂಭಾಷಣೆ ಬರೆದಿದ್ದಾರೆ.

ವಿ.ಮನೋಹರ್, ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಹಾಡುಗಳನ್ನು ಬರೆದಿದ್ದಾರೆ. ಮಯೂರಿ, ಬೇಬಿ ಮಾನ್ಯ, ವಾಣಿಶ್ರೀ, ಬಚ್ಚನ್, ಸುನೀಲ್ ಪುರಾಣಿಕ್, ಸೂರ್ಯಕಿರಣ್(ರಾಧ ರಮಣ), ಆರ್ಯನ್, ಬೋಜರಾಜ್, ಕೋಣಿ ಶಿವಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

More from Filmibeat

English summary
Kannada actress krishi thapanada, chikkanna starrer kannadakkagi ondannu otti movie is ready to release. the Directed by Kushal Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X