For Quick Alerts
  ALLOW NOTIFICATIONS  
  For Daily Alerts

  'ಕನ್ನಡತಿ' ಹರ್ಷನ ಹೊಸ ಸಿನಿಮಾ: ಕಿರಣ್ ರಾಜ್ ಗೆ ಜೋಡಿಯಾದ 'ಪದವಿ ಪೂರ್ವ' ಸುಂದರಿ

  |

  ಕಿರುತೆರೆಯ ಖ್ಯಾತ ನಟ ಕಿರಣ್ ರಾಜ್ ಸದ್ಯ ಕನ್ನಡತಿ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನೆಗಳಲ್ಲಿ ರಾರಾಜಿಸುತ್ತಿರುವ ಕಿರಣ್ ರಾಜ್ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿರುವ ಕಿರಣ್ ರಾಜ್ ಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  ಅಂದಹಾಗೆ ಕಿರಣ್ ರಾಜ್ ಹೊಸ ಸಿನಿಮಾಗೆ 'ಬಹದ್ದೂರ್ ಗಂಡು' ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ಕಿರಣ್ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಹರ್ಷ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಕಿರಣ್ ರಾಜ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  'ಬಿಗ್ ಬಾಸ್'ಗೆ ಹೋಗ್ತಾರಾ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಸುಕೃತಾ?

  ಚಿತ್ರದಲ್ಲಿ ಕಿರಣ್ ರಾಜ್ ಗೆ ನಾಯಕಿಯಾಗಿ ಯೋಗರಾಜ್ ಭಟ್ಟರ 'ಪದವಿ ಪೂರ್ವ' ಸಿನಿಮಾದ ನಾಯಕಿ ಯಶಾ ಶಿವಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶಾ ಪಕ್ಕ ಹಳ್ಳಿ ಹುಡುಗಿಯಾಗಿ ಮಿಂಚುತ್ತಿದ್ದಾರೆ ಎನ್ನಲಾಗಿದೆ. ಗೌಡ್ರು ಮನೆಯ ಹುಡುಗಿಯಾಗಿ ಲಂಗ ದಾವಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  ನವಗ್ರಹ ಸಿನಿಮಾ ಮಾಡೋಕೆ ವಿನೋದ್ ಪ್ರಭಾಕರ್ ಒಪ್ಪಿರ್ಲಿಲ್ಲ

  ಸದ್ಯ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಬಹುದ್ದೂರ್ ಗಂಡು ಮಾರ್ಚ್ ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಕಿರಣ್ ರಾಜ್ ಈ ಮೊದಲು ಮಾರ್ಚ್ 22 ಮತ್ತು ಅಸತೋಮ ಸದ್ಗಮಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ತೆಲುಗು ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ಕಿರಣ್ ಇದೀಗ ಬಹದ್ದೂರ್ ಗಂಡು ಮೂಲಕ ಮತ್ತೊಮ್ಮೆ ಮೋಡಿ ಮಾಡಲು ತಯಾರಾಗಿದ್ದಾರೆ. ಬಹದ್ದೂರ್ ಗಂಡಾಗಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾರಾ ಎಂದು ಕಾದು ನೋಡಬೇಕು.

  English summary
  Kannadathi fame actor Kiran Raj next film title Bahaddur Gandu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X