''ನನ್ನ ಹುಡುಗನ ಜೊತೆ ಓಡಾಡುವುದನ್ನ ಕೆಲವರು ನೋಡಿದ್ದರು,ಅದಕ್ಕೆ ಲವ್ ವಿಚಾರ ಹಂಚಿಕೊಂಡೆ''- ರಂಜನಿ ರಾಘವನ್ !
ಬಣ್ಣದ ಪ್ರಪಂಚದಲ್ಲಿ ಬದುಕು ಕಟ್ಟಿಕೊಂಡ ನಾಯಕಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅವರ ಅಭಿಮಾನಿಗಳು ತಲೆ ಕೆದರಿಕೊಂಡು ಹುಡುಕಾಟ ಶುರುವಿಟ್ಟುಕೊಳ್ಳುತ್ತಾರೆ. ಆ ಹುಡುಗನ ಕುಲ, ಗೋತ್ರ, ಜನ್ಮ ಜಾಲಾಡೋ ವರೆಗೂ ಅವರಿಗೆ ನೆಮ್ಮದಿಯಿರುವುದಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ರಂಜನಿ ರಾಘವನ್ ಅವರ ಲವ್ ಮ್ಯಾಟರ್.
ಹೌದು. ಮೊನ್ನೆ ರಂಜನಿ ರಾಘವನ್ ತಮ್ಮ ಕೈ ಹಿಡಿಯುವ ಕನಸಿನ ಹುಡುಗನ ಫೋಟೋ ಹಂಚಿಕೊಂಡ ಬೆನ್ನಲ್ಲಿಯೇ ಅನೇಕರು ಯಾರು ಈ ಅದೃಷ್ಟವಂತ ಎಂದು ಸಾಗರ್ ಭಾರದ್ವಾಜ್ ಅವರ ಹಿನ್ನೆಲೆ ಹುಡುಕಲು ಶುರುಮಾಡಿದ್ದರು. ಪ್ರೀತಿಯ ಸಾಗರದಲ್ಲಿ ಕನ್ನಡತಿ ಬಿದ್ದಿದ್ಹೇಗೆ ಎಂಬ ಪ್ರಶ್ನೆಯನ್ನೂ ಕೂಡ ರಂಜನಿಗೆ ಕೇಳಲು ಶುರುಮಾಡಿದ್ದರು.

ಹೀಗಾಗಿಯೇ ಇದೀಗ ತಮ್ಮ ಲವ್ ಸ್ಟೋರಿಯನ್ನು ರಂಜನಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ. ನಾವೂ ಇಬ್ಬರು ಓಡಾಡುವುದನ್ನು ಅನೇಕರು ನೋಡಿದ್ದರು ಆದರೂ ಯಾಕೆ ಕೆಲವರಿಗೆ ಅಚ್ಚರಿಯಾಗಿದೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ನನ್ನ ಮತ್ತು ಸಾಗರ್ ಭಾರದ್ವಾಜ್ ಸ್ನೇಹ ಇಂದು ನಿನ್ನೆಯದ್ದಲ್ಲ. ತುಂಬಾ ಹಳೆಯದ್ದು ಎಂದಿರುವ ರಂಜನಿ ನಾವು ಇಬ್ಬರು ಕಾಲೇಜ್ ದಿನಗಳಿಂದನೇ ಸ್ನೇಹಿತರು ಅಂದಿದ್ದಾರೆ. ಇನ್ನೂ ನಾನು ಮತ್ತು ಸಾಗರ್ ಜೊತೆ ಜೊತೆಯಾಗಿ ಓಡಾಡುವುದನ್ನು ತುಂಬ ಜನ ನೋಡಿದ್ದಾರೆ ಎಂದಿರುವ ರಂಜನಿ ರಾಘವನ್, ಈ ಕಾರಣಕ್ಕೆ ಕದ್ದು ಮುಚ್ಚಿ ಓಡಾಡುವುದಕ್ಕಿಂತ ಸಂಬಂಧವನ್ನು ಅಧಿಕೃತವಾಗಿ ಹೇಳಿಕೊಂಡರೆ ನೆಮ್ಮದಿಯಾಗಿ ಓಡಾಡಬಹುದು ಎಂದು ಪ್ರೀತಿಯ ವಿಚಾರವನ್ನು ಬಹಿರಂಗ ಮಾಡಿರುವುದಾಗಿ ಹೇಳಿದ್ದಾರೆ.

ಇನ್ನೂ ಮದುವೆಯ ವಿಚಾರಕ್ಕೆ ಬಂದರೆ, ಸದ್ಯಕ್ಕೆ ಮದುವೆಯಾಗುವ ಯಾವ ಯೋಚನೆಯೂ ಇಲ್ಲ ಎಂದಿರುವ ರಂಜನಿ ಸದ್ಯಕ್ಕೆ ವೃತ್ತಿಯ ಕಡೆ ಇಬ್ಬರು ಗಮನ ಕೊಡುತ್ತಿದ್ದೇವೆ ಎಂದಿದ್ದಾರೆ. ಸರಿಯಾದ ಸಮಯ ಬಂದಾಗ ಮದುವೆಯಾಗುವುದಾಗಿ ಕೂಡ ಹೇಳಿದ್ದಾರೆ. ಮುಂದುವರೆದು ನನ್ನ ಬದುಕಿನಲ್ಲಿ ನಡೆದ ಒಳ್ಳೇಯ ಘಟನೆ ಅಂದರೆ ನನಗೆ ಸಾಗರ್ ಸಿಕ್ಕಿರುವುದು ಎಂದು ಹೇಳಿರುವ ರಂಜನಿ ರಾಘವನ್, ಸಾಗರ್‌ಗೆ ಸೈಕ್ಲಿಂಗ್ ಮತ್ತು ಬೈಕ್ ರೈಡಿಂಗ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.
ಅಂದ್ಹಾಗೇ ಸಾಗರ್ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಸಿಕಲಿ ಅಥ್ಲೇಟ್ ಆಗಿರುವ ಸಾಗರ್ ಭಾರದ್ವಾಜ್ ಇಲ್ಲಿಯವರೆಗೆ 20.000KM ಸೈಕಲ್ ಸವಾರಿ ಮಾಡಿದ್ದಾರೆ. 2000 KM ಓಡಿದ್ದಾರೆ. 100000KM ನಷ್ಟು ಬೈಕ್‌ನಲ್ಲಿ ಪ್ರಯಾಣವನ್ನು ಮಾಡಿದ್ದಾರೆ ಸಾಗರ್ ಭಾರದ್ವಾಜ್. ಉಳಿದಂತೆ ಕನ್ನಡದ ಕನ್ನಡದ ಬಗ್ಗೆ ತುಂಬು ಅಭಿಮಾನ ಹೊಂದಿರುವ ಬೆಂಗಳೂರಿನ ಅಚ್ಚ ಕನ್ನಡತಿ ರಂಜನಿ ರಾಘವನ್ಅತ್ಯುತ್ತಮ ಸ್ನೇಹಿತನಾದವನು, ಬಾಳ ಸಂಗಾತಿಯಾದರೆ ಚೆನ್ನಾಗಿರುತ್ತೆ ಎಂದು ಹಿಂದೆ ಹೇಳಿದ್ದರು. ಈಗ ಸಮಾಜದಲ್ಲಿ ಹಾಗೇ ಇರೋದು. ಮುಂಚೆ ಗಂಡನಿಗೆ ಸ್ವಲ್ಪ ಚೆಕ್ ಲಿಸ್ಟ್ ಕೊಟ್ಟಿದ್ದರು. ಇವತ್ತು ಅದೆಲ್ಲ ಬಿಟ್ಟು ನಮಗೆ ಯಾರಾದರೂ ಬೆಸ್ಟ್ ಫ್ರೆಂಡ್ ಇದ್ದರೆ ನಮ್ಮ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ. ನಮಗೆ ಬೆಸಿಕ್ ಬೇಕಿರುವುದು ಫ್ರೆಂಡ್ ಶಿಪ್ ಮತ್ತು ಒಡನಾಟ. ಮಿಕ್ಕಿದ್ದೆಲ್ಲ ನಂತರ ಅಡ್ಜಸ್ಟ್ ಮಾಡಿಕೊಳ್ಳಬಹುದು. ಆ ತರ ಇದ್ದರೆ ಚೆನ್ನಾಗಿರುತ್ತೆ ಎಂದು ತಮ್ಮ ಮನದ ಮಾತುಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದರು. ಅದ್ರಂತೆ ತಮ್ಮ ಸ್ನೇಹಿತನ ಜೊತೆ ಹೊಸ ಬದುಕಿಗೆ ಮುನ್ನುಡಿ ಬರೆಯಲು ರಂಜನಿ ರಾಘವನ್ ಈಗ ಸಿದ್ಧರಾಗಿದ್ದಾರೆ.


Click it and Unblock the Notifications











