ಕಮಲ್ ಸರ್ ಅಂದರೆ ಲೆಜೆಂಡ್ ಅಂತ ಎಲ್ಲರಿಗೆ ಗೊತ್ತು, ಆದರೆ ; ಕನ್ನಡತಿ ರಂಜನಿ ರಾಘವನ್..!

ಒಂದಲ್ಲ.. ಎರಡಲ್ಲ.. ಹತ್ ಹತ್ರ ಐದು ವರ್ಷ ಪ್ರಸಾರವಾದ ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಖ್ಯಾತಿಯ ಶಿಖರಕ್ಕೇರಿದವರು ರಂಜಿನಿ ರಾಘವನ್. ಆರಂಭದಿಂದ ಇಲ್ಲಿವರೆಗೆ ಬಹುತೇಕ ಸಾಂಪ್ರದಾಯಿಕ ಕಾಸ್ಟೂಮ್‌ಗಳಲ್ಲಿಯೇ ಕಾಣಿಸಿಕೊಂಡ ರಂಜನಿ ರಾಘವನ್ ಹೆಂಗಳೆಯರ ಪಾಲಿಗೆ ಮನೆ ಮಗಳು. ಕೇವಲ ನಾಯಕಿಯಾಗಿಯಷ್ಟೇ ಅಲ್ಲದೇ ಕಥೆಗಾರ್ತಿಯಾಗಿರುವ ರಂಜನಿ ಕಥೆ ಡಬ್ಬಿ ಎಂಬ ಕಥಾಸಂಕಲನದ ರೂವಾರಿ ಕೂಡ ಹೌದು. ಯುವ ಸಾಹಿತ್ಯ ರತ್ನ ಕೂಡ ಹೌದು.

ಇಂಥಾ ರಂಜನಿ ರಾಘವನ್ ಮೊನ್ನೆ ಫೋಟೊವೊಂದನ್ನು ಹಂಚಿಕೊಂಡಿದ್ದರು. ಕಮಲ್ ಹಾಸನ್ ಅವರಿಗೆ ಪುಸ್ತಕ ನೀಡಿರುವ ಫೋಟೊ ಅದು. ಸಹಜವಾಗಿ ಈ ಫೋಟೊಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಭಾಷೆಯ ಕಿಡಿ ಹೊತ್ತಿಸಿದ ಕಮಲ್ ಹಾಸನ್ ಅವರನ್ನು ಈ ಸಮಯದಲ್ಲಿ ಭೇಟಿಯಾಗುವ ಅವಶ್ಯಕತೆ ಇತ್ತಾ ಎನ್ನುವ ಪ್ರಶ್ನೆಯನ್ನು ಮಾಡಿದ್ದರು. ಮತ್ತೂ ಕನ್ನಡ ಇತಿಹಾಸವನ್ನೊಂದಿರುವ ಪುಸ್ತಕವನ್ನಾದರೂ ನೀಡಬಾರದಿತ್ತೆ ಎಂದು ಪ್ರಶ್ನೆ ಮಾಡಿದ್ದರು. ಇದೆಲ್ಲದಕ್ಕೂ ರಂಜನಿ ರಾಘವನ್ ಈಗ ಉತ್ತರ ನೀಡಿದ್ದಾರೆ. ವಿಡಿಯೋ ಮೂಲಕ ಸ್ಪಷನೆ ನೀಡಿದ್ದಾರೆ.

Kannadathi Famae Ranjani Raghavan Shares Reason for Gifting Books to Kamal Haasan

ಈ ಕುರಿತು ಮಾತನಾಡಿರುವ ರಂಜನಿ, ಕಮಲ್ ಸರ್‌ಗೆ ಕನ್ನಡ ಪುಸ್ತಕ ಅಂತ ಕ್ಯಾಪ್ಷನ್ ಕೊಟ್ಟು ಒಂದು ಫೋಟೋ ಅಪ್ಲೋಡ್ ಮಾಡಿದ್ದೆ. ಅದರ ಉದ್ದೇಶ ಬಹುತೇಕರಿಗೆ ಅರ್ಥ ಆಗಿದೆ. ಆದರೆ ಸುಮಾರಷ್ಟು ಜನಕ್ಕೆ ನನ್ನ ಮನೆ ಮಾತು, ಜಾತಿ ಅದು ಇದು ಅಂತ ಬೇರೆ ಬೇರೆ ಆಯಾಮಗಳಿಂದ ಇದು ಕಾಣಿಸ್ತಾ ಇರುವುದರಿಂದ ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮುಂದುವರೆದು ಇವತ್ತಿನ ಸ್ಥಿತಿಯಲ್ಲಿ ಕಮಲ್ ಸರ್ ಅವರನ್ನು ಭೇಟಿಯಾಗಿ, ಅವರಿಗೆ ಕನ್ನಡ ಪುಸ್ತಕ ಕೊಡಬೇಕು ಎಂದರೆ, ಅವರು ನನ್ನನ್ನೂ ಭೇಟಿಯಾಗಲು ಅವರು ತಮ್ಮ ಸಮಯ ಕೊಡ್ತಾರೆ ಎಂದು ನನಗೆ ಖಾತ್ರಿ ಇಲ್ಲ ಎಂದಿರುವ ರಂಜನಿ ರಾಘವನ್, ಎಲ್ಲರಿಗೆ ಗೊತ್ತಿರುವಂತೆ ರಂಜನಿ ನಾನು ''ಡಿ ಡಿ ಡಿಕ್ಕಿ'' ಸಿನಿಮಾ ಮಾಡಿದ್ದೇನೆ ಆ ಚಿತ್ರದ ಪ್ರಚಾರಕ್ಕೆ ಕಮಲ್ ಹಾಸನ್ ಅವರ ನೆರವು ಪಡೆಯುವ ಉದ್ದೇಶದಿಂದ ನಾನು ನಮ್ಮ ನಿರ್ಮಾಪಕರು ಸೇರಿ ತುಂಬಾ ಕಷ್ಟ ಪಟ್ಟು ಅವರನ್ನು ಭೇಟಿ ಮಾಡಿದ್ದೆವು ಅದು ಈಗಲ್ಲ ಬದಲಿಗೆ 3 -4 ತಿಂಗಳ ಹಿಂದೆ ಎಂದು ರಂಜನಿ ರಾಘವನ್ ಹೇಳಿದ್ದಾರೆ.

ನಮ್ಮ ಚಿತ್ರದ ಕಥಾವಸ್ತು ಕೇಳಿ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು ಎಂದು ಹೇಳಿದ್ದಾರೆ. ಆ ನಂತರ ಖುಷಿಯಿಂದ ನಮ್ಮ ಚಿತ್ರದ ಪೋಸ್ಟರ್‌ನ ಹಿಡ್ಕೊಂಡು ನಮ್ಮ ಜೊತೆ ಫೋಟೊಗೆ ಫೋಸ್ ಕೂಡ ನೀಡಿದ್ದರು ಎಂದು ರಂಜನಿ ರಾಘವನ್ ಹೇಳಿದ್ದಾರೆ.

ಕಮಲ್ ಹಾಸನ್ ಜೊತೆ ತೆಗೆಸಿಕೊಂಡ ಫೋಟೊವನ್ನು ಮುಂಬರುವ ದಿನಗಳಲ್ಲಿ ಬಳಸಿಕೊಂಡು ದೊಡ್ಡದಾಗಿ ನಮ್ಮ ಚಿತ್ರದ ಟೀಸರ್ ಲಾಂಚ್ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು, ಯಾಕೆಂದರೆ ಇದು ನನ್ನ ಮೊದಲ ಚಿತ್ರ ನನಗೆ ತುಂಬಾ ದೊಡ್ಡ ವಿಷಯ ಎಂದು ಹೇಳಿರುವ ರಂಜನಿ, ಕಮಲ್ ಸರ್ ಲೆಜೆಂಡ್ ಎನ್ನುವುದು ಎಲ್ಲರಿಗೆ ಗೊತ್ತು ಆದರೆ ಈ ವಿವಾದ ನಮ್ಮೆಲ್ಲರಿಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

ಭಾಷಾ ಜಾತ್ಯತೀತತೆ ನಮ್ಮೆಲ್ಲರಿಗೂ ಇದೆ ಆದರೆ ಕನ್ನಡ ವಿರೋಧಿ ಹೇಳಿಕೆಯನ್ನು ನೀಡಿ ಕ್ಷಮೆ ಕೇಳುವುದಿಲ್ಲ ಎನ್ನುವ ಅವರ ಧೋರಣೆಗೆ ನಮ್ಮ ಬೆಂಬಲ ಇಲ್ಲ ಎಂದು ಹೇಳಿರುವ ರಂಜನಿ ಇದೆಲ್ಲದರಿಂದ ನಾವು ನಮ್ಮ ಚಿತ್ರದ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಅವತ್ತು ಅವರನ್ನು ಭೇಟಿಯಾಗಿದ್ದಾಗ ಕೊನೆ ಕ್ಷಣದಲ್ಲಿ ನಾನು ಬರೆದ ಕನ್ನಡ ಪುಸ್ತಕ ನೀಡಿದ್ದೆ, ಅದೊಂದು ಅಭಿಮಾನದ ಕ್ಷಣವಾಗಿತ್ತು ಎಂದಿರುವ ರಂಜನಿ ಅವರಾಡಿದ ಮಾತುಗಳಿಗೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ನಾನು ಆ ಫೋಟೊವನ್ನು ಹಂಚಿಕೊಂಡಿದ್ದೆ ಎಂದು ಹೇಳಿರುವ ರಂಜನಿ,
ನಾನು ಫೋಟೊ ಹಂಚಿಕೊಂಡ ಉದ್ದೇಶ ಏನಾಗಿತ್ತು ಎನ್ನುವುದು ಈಗ ಎಲ್ಲರಿಗೂ ತಲುಪಿದೆ ಎಂದು ನಾನು ಅಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಆದರೆ ಸತ್ಯಕ್ಕೆ ಹತ್ತಿರವಾದ ವಿಚಾರಗಳನ್ನು ಹೇಳಿದಾಗ ಮಾತ್ರ ನಾವು ಪವರ್‌ಫುಲ್ ಎಂದು ಹೇಳುವುದಕ್ಕೆ ನಾನು ಇಷ್ಟ ಪಡುತ್ತೇನೆ, ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ನಾವು ಸ್ಟ್ರಾಂಗ್ ಆಗಬೇಕು ಎಂದರೆ ನಮ್ಮ ಆಲೋಚನೆಗಳು ಸತ್ಯಕ್ಕೆ ಹತ್ತಿರವಾಗಿರಬೇಕು ಎಂದಿರುವ ರಂಜನಿ ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವುದನ್ನು ನಾವ್ಯಾರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Kannadathi actress Ranjani Raghavan recently clarified why she chose to gift Kannada books to veteran actor Kamal Haasan. She explained that the gesture was a way of honoring the Kannada language and literature, and sharing her culture with someone she deeply respects.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X