For Quick Alerts
  ALLOW NOTIFICATIONS  
  For Daily Alerts

  'ಶೇರ್' ಅವತಾರವೆತ್ತಿದ ಕಿರುತೆರೆ ನಟ ಕಿರಣ್ ರಾಜ್: 3ನೇ ಸಿನಿಮಾ ಶುರು!

  |

  ಕಿರಣ್ ರಾಜ್ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್. ಇತ್ತೀಚೆಗೆ ಅವರು ಕಿರುತೆರೆ ಜೊತೆ ಜೊತೆಗೆ ಸಿನಿಮಾದಲ್ಲಿಯೂ ಹೆಚ್ಚು ಸಕ್ರಿಯರಾಗಿದ್ದಾರೆ. ಒಂದ್ಕಡೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರೆ, ಇನ್ನೊಂದು ಕಡೆ ಸಿನಿಮಾಗೂ ಕಾಲ್ ಶೀಟ್ ನೀಡಿದ್ದಾರೆ.

  'ಕನ್ನಡತಿ' ಧಾರಾವಾಹಿ ಮೂಲಕ ಜನಪ್ರಿಯರಾಗಿರೋ ಕಿರಣ್ ರಾಜ್ ಅಭಿನಯದ 'ಬಡ್ಡೀಸ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೊಂದು ಸಿನಿಮಾ 'ಭರ್ಜರಿ ಗಂಡು' ಈಗಾಗ್ಲೇ ಶೂಟಿಂಗ್ ಮುಗಿದಿದ್ದು, ರಿಲೀಸ್‌ಗೆ ರೆಡಿಯಾಗಿದೆ. ಅಷ್ಟರಲ್ಲೇ ಮೂರನೇ ಸಿನಿಮಾ ಸೆಟ್ಟೇರಿದೆ.

  'ಶೇರ್' ಅವತಾರವೆತ್ತಿ ಮಾಸ್ ಲುಕ್ ಕೊಟ್ಟ ಕಿರಣ್ ರಾಜ್

  ಧಾರಾವಾಹಿಯಲ್ಲಿ ಕಿರಣ್ ರಾಜ್ ನೋಡಿದವರಿಗೆ ಇವರು ಪಕ್ಕಾ ಕ್ಲಾಸ್ ಹೀರೊ ಅಂತಿದ್ದರು. ಮಾಸ್ ಸ್ಟೋರಿಗಳಿಗೆ ಕಿರಣ್ ರಾಜ್ ಸೂಟ್ ಆಗಲ್ಲ ಅನ್ನೋ ಕಲ್ಪನೆ ಇತ್ತು. ಈ ಬೆನ್ನಲ್ಲೇ ಆ ಎಲ್ಲಾ ಅಭಿಪ್ರಾಯಗಳಿಗೆ ವಿರುದ್ಧವಾಗಿ ಕಿರಣ್ ರಾಜ್ 'ಶೇರ್' ಅವತಾರವೆತ್ತಿದ್ದಾರೆ.

  ಕಿರಣ್ ರಾಜ್ ಮೂರನೇ ಸಿನಿಮಾ ಸೆಟ್ಟೇರಿದೆ. ಆ ಸಿನಿಮಾ 'ಶೇರ್' ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟಿಡಿಯೋದಲ್ಲಿ ಸಿನಿಮಾಗೆ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. 'ಶೇರ್' ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ.

  ಸಿನಿಮಾದ ಕಥೆಯೇನು?

  ಕಿರಣ್ ರಾಜ್ ಅಭಿನಯದ 'ಶೇರ್' ಸಿನಿಮಾ ಅನಾಥಾಶ್ರಮದಲ್ಲಿ ನಡೆಯೋ ಕಥೆ. ಒಂದು ಒಳ್ಳೆಯ ಗುಂಪು. ಇನ್ನೊಂದು ಕೆಟ್ಟ ಗುಂಪು. ಕೆಟ್ಟ ಗುಂಪು ಈ ಅನಾಥಾಶ್ರಮವನ್ನು ಅಡ್ಡವನ್ನಾಗಿ ಮಾಡಿಕೊಂಡಿರುತ್ತೆ. ಇಲ್ಲಿ ಇವರಿಬ್ಬರ ನಡುವೆ ಏನೇನು ಕಡೆಯುತ್ತೆ ಅನ್ನೋವುದೇ ಕಥೆ.

  ಮಾಸ್ ಹೀರೊ ಆಗೋಕೆ ಬೇಕಾಗಿರೋ ತಯಾರಿಯನ್ನು ಕಿರಣ್ ರಾಜ್ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಸೇರಿದಂತೆ ಹಲವು ಕಲೆಗಳನ್ನು ಕಿರಣ್ ರಾಜ್ ಅಭ್ಯಾಸ ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ಪ್ರಸಿದ್ಧ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಜೋಡಿ 'ಭರ್ಜರಿ ಗಂಡು' ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದೆ.

   Kannadathi Serial Actor Kiran Raj Starrer Sher Movie Launched

  ಭರ್ಜರಿ ಗಂಡು ಬಿಡುಗಡೆಗೆ ರೆಡಿ

  ಕಿರಣ್ ರಾಜ್‌ ಅಭಿನಯದ ಮತ್ತೊಂದು ಸಿನಿಮಾ ಭರ್ಜರಿ ಗಂಡು ಬಿಡುಗಡೆಗೆ ರೆಡಿಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಬಹುತೇಕ ತಂಡವೇ ಶೇರ್ ಸಿನಿಮಾಗೂ ಕೆಲಸ ಮಾಡುತ್ತಿದೆ.

  Recommended Video

  ಹಾಟ್ ಆಗಿ ಎಂಟ್ರಿ ಕೊಟ್ರು ಶರ್ಮಿಳಾ | Gaalipata 2 | Sharmiela Mandre | Filmibeat Kannada

  ಬೀದರ್ ಸುದರ್ಶನ್ ಸುಂದರರಾಜ್ 'ಶೇರ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ತಿಂಗಳು 22 ರಿಂದ‌ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಕಿರಣ್ ರಾಜ್‌ಗೆ ನಾಯಕಿಯಾಗಿ ಸುರೇಖ ಹಾಗೂ ಪೊಲೀಸ್ ಅಧಿಕಾರಿಯಾಗಿ ತನೀಶಾ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannadathi Serial Actor Kiran Raj Starrer Sher Movie Launched, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X