twitter
    For Quick Alerts
    ALLOW NOTIFICATIONS  
    For Daily Alerts

    ನಾಳೆ ನಡೆಯಲಿದೆ 'ಅವಳ ಹೆಜ್ಜೆ' ಸಂಸ್ಥೆಯ 'ಕನ್ನಡತಿ ಉತ್ಸವ'

    |

    ಕನ್ನಡತಿ ಉತ್ಸವ 2018 ಕಾರ್ಯಕ್ರಮ ನವೆಂಬರ್ 3, ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ನಡೆಯಲಿದೆ. ಖ್ಯಾತ ಚಿತ್ರ ನಿರ್ಮಾಪಕಿ ಕವಿತಾ ಲಂಕೇಶ್ ಮುಖ್ಯ ಅತಿಥಿಯಾಗಿದ್ದು, ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ಬೆಂಗಳೂರಿನ ಗಾಂಧಿ ಭವನದ ಕುಮಾರ ಪಾರ್ಕ್ ಈಸ್ಟ್ ನಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮದಲ್ಲಿ ಮಹಿಳೆಯರು ನಿರ್ಮಿಸಿದ, ಚಿತ್ರಕಥೆ ಬರೆದ 7 ಕಿರುಚಿತ್ರಗಳ ಪ್ರದರ್ಶನವಿರುತ್ತದೆ. ಈ ಮಹಿಳೆಯರಲ್ಲಿ ಕೆಲವರು ಅನುಭವಿ ನಿರ್ಮಾಪಕರಿದ್ದರೆ ಇತರರು ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈಯಿಟ್ಟಿದ್ದಾರೆ. ಚಿತ್ರ ವೀಕ್ಷಣೆಯ ಜೊತೆಗೆ ನಿರ್ಮಾಪಕರೊಡನೆ ಪ್ರಶ್ನೋತ್ತರ'ಕ್ಕೆ ಪ್ರೇಕ್ಷಕರಿಗೆ ಅವಕಾಶವಿದೆ.

    ಕಬ್ಬನ್ ಪಾರ್ಕ್‌ಗೆ ಕೃತಕ ಉಸಿರಾಟ ವ್ಯವಸ್ಥೆ: ಏನಿದು ಅವಸ್ಥೆ?

    ಕಥೆಯಿಂದ ಪರದೆಯವರೆಗೆ ಚರ್ಚೆಯಲ್ಲಿ ಚಲನಚಿತ್ರ ನಿರ್ಮಾಪಕಿಯರಾದ ಅನನ್ಯಾ ಕಾಸರವಳ್ಳಿ, ರೂಪಾ ರಾವ್, ಸಂಜ್ಯೋತಿ ವಿ ಕೆ ಮತ್ತು ಪದ್ಮಲತಾ ರವಿ ಭಾಗವಹಿಸಿ, ಚಿತ್ರ ನಿರ್ಮಾಣದ ಸಾಹಸೋದ್ಯಮದಲ್ಲಿ ತಾಂತ್ರಿಕತೆ, ತಂಡ ರಚನೆ ಇತ್ಯಾದಿ ಹಂತಗಳಲ್ಲಿ ಮಹಿಳೆಯರು ಎದುರಿಸಬೇಕಾದ ವಿಶಿಷ್ಟ ಸವಾಲುಗಳ ಬಗ್ಗೆ ಚರ್ಚಿಸಲಿದ್ದಾರೆ.

    kannadathi uthsava 2018 program will be held tomorrow

    ಪ್ರತಿ ವರ್ಷ ಕರ್ನಾಟಕದ ರಾಜ್ಯೋತ್ಸವದ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಮರೆಯದೇ ಸ್ಮರಿಸಲು 'ಅವಳ ಹೆಜ್ಜೆ' ಸಂಸ್ಥೆ 2017 ರಲ್ಲಿ ಪ್ರಾರಂಭಿಸಿದ ವಿನೂತನ ವಾರ್ಷಿಕ ಹಬ್ಬ 'ಕನ್ನಡತಿ ಉತ್ಸವ'.

    ಅಂದಹಾಗೆ, ಕಳೆದ ವರ್ಷದ ಕನ್ನಡತಿ ಉತ್ಸವದಲ್ಲಿ 40ಕ್ಕೂ ಹೆಚ್ಚು ಕಲಾವಿದರ ಸ್ತ್ರೀಕೇಂದ್ರಿತ ಕೃತಿಗಳನ್ನು ಅಂದರೆ ಚಿತ್ರಕಲಾಕೃತಿ, ಕವಿತೆ, ಲೇಖನ, ಕಿರುಚಿತ್ರಗಳು, ಪ್ರದರ್ಶನ ಕಲೆ ಇತ್ಯಾದಿ ಪ್ರದರ್ಶಿಸಲಾಗಿತ್ತು. ಮೊದಲ ವರ್ಷದ ಯಶಸ್ಸಿನಿಂದ ಉತ್ತೇಜನ ಹೊಂದಿ, ಈ ಬಾರಿ ಇನ್ನೆರಡು ಹೆಜ್ಜೆ ಮುಂದಿಟ್ಟು, ಮಹಿಳೆಯರು ತಯಾರಿಸಿದ ಕಿರುಚಿತ್ರಗಳನ್ನು "ಕನ್ನಡತಿ ಉತ್ಸವ" ದಲ್ಲಿ ಪ್ರದರ್ಶಿಸಲು ಆಯೋಜಿಸಿದೆ 'ಅವಳ ಹೆಜ್ಜೆ' ತಂಡ.

    English summary
    'Kannadathi Uthsava 2018' program will be held tomorrow (November 3rd) at Gandhi Bhavan, Bengaluru.
    Friday, November 2, 2018, 16:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X