»   » ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!

ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!

By: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕ ಹಾಗೂ ಕನ್ನಡಿಗರ ಕುರಿತು ತಮಿಳು ನಟ ಸತ್ಯರಾಜ್ ಬಾಯಿಗೆ ಬಂದ ಹಾಗೆ ಕೇವಲವಾಗಿ ಮಾತನಾಡಿದ್ದಾರೆ. ಹೀಗಾಗಿ ಬಹಿರಂಗ ಕ್ಷಮೆ ಕೇಳುವವರೆಗೂ, ಸತ್ಯರಾಜ್ ಅಭಿನಯದ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆಗಬಾರದು. ಅದರಲ್ಲೂ ಸತ್ಯರಾಜ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ರಿಲೀಸ್ ಆಗಲು ಬಿಡಬಾರದು ಅಂತ ಕನ್ನಡ ಪರ ಹೋರಾಟಗಾರರು ಈಗಾಗಲೇ ದನಿ ಎತ್ತಿದ್ದಾರೆ.

'ಬಾಹುಬಲಿ-ದಿ ಬಿಗಿನ್ನಿಂಗ್' ಮರು ಬಿಡುಗಡೆ ವೇಳೆಯೂ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಪರ ಚಳುವಳಿಗಾರರು ಮಾಡಿದ ರಾದ್ಧಾಂತ ನಿಮಗೆ ಗೊತ್ತಿರಬಹುದು.[ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ 'ಬಾಹುಬಲಿ-1' ಮರುಪ್ರದರ್ಶನ ರದ್ದು]

ಇದನ್ನೆಲ್ಲ ಗಮನಿಸಿರುವ ಟಾಲಿವುಡ್ ಮಂದಿ ಫೇಸ್ ಬುಕ್ ನಲ್ಲಿ ಕನ್ನಡ ಪರ ಹೋರಾಟಗಾರರ ಕುರಿತು ಲೇವಡಿ ಮಾಡಿದ್ದಾರೆ. ಸಾಲದಕ್ಕೆ, 'ಕಿಚ್ಚ ಸುದೀಪ್ ರವರ ಚಿತ್ರಗಳನ್ನೂ ಬ್ಯಾನ್ ಮಾಡಿ' ಎಂದು ಅಣಕಿಸಿದ್ದಾರೆ. ಮುಂದೆ ಓದಿ....

ಸತ್ಯರಾಜ್ ಚಿತ್ರಗಳನ್ನ ಬ್ಯಾನ್ ಮಾಡಿದ್ರೆ ಸಾಕಾ.?

''ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಆಡಿದ ಮಾತುಗಳ ಹಿನ್ನಲೆಯಲ್ಲಿ ನಟ ಸತ್ಯರಾಜ್ ರವರ ಚಿತ್ರಗಳನ್ನು ಬ್ಯಾನ್ ಮಾಡುವ ಹಾಗಿದ್ರೆ, ನಟ ಸತ್ಯರಾಜ್ ರವರ ಜೊತೆ 'ಬಾಹುಬಲಿ-ದಿ ಬಿಗಿನ್ನಿಂಗ್' ಚಿತ್ರದಲ್ಲಿ ಅಭಿನಯಿಸಿದ ಕಿಚ್ಚ ಸುದೀಪ್ ರವರ ಚಿತ್ರಗಳನ್ನೂ ಬ್ಯಾನ್ ಮಾಡಿ'' ಎಂದು ಟಾಲಿವುಡ್ ಮಂದಿ ಟ್ರೋಲ್ ಮಾಡುತ್ತಿದ್ದಾರೆ.['ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?]

'ಟ್ರೋಲ್ ಟಾಲಿವುಡ್' ನಲ್ಲಿ ವ್ಯಂಗ್ಯ

'ಟ್ರೋಲ್ ಟಾಲಿವುಡ್' ಎಂಬ ಫೇಸ್ ಬುಕ್ ಪೇಜ್ ನಲ್ಲಿ ಕನ್ನಡ ಪರ ಹೋರಾಟಗಾರರ ಕುರಿತು ವ್ಯಂಗ್ಯ ಮಾಡಲಾಗಿದೆ.['ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿನಲ್ಲೂ ಕಂಟಕ!]

ಕನ್ನಡಿಗರಿಗೆ ಹೊಟ್ಟೆಕಿಚ್ಚು.?

''ಬಾಹುಬಲಿ' ಚಿತ್ರದ ಬಗ್ಗೆ ಕನ್ನಡಿಗರಿಗೆ ಹೊಟ್ಟೆಕಿಚ್ಚಂತೆ.! 'ಬಾಹುಬಲಿ' ಚಿತ್ರದ ಕಲೆಕ್ಷನ್ ಕಮ್ಮಿ ಮಾಡಲು ಇದನ್ನೆಲ್ಲ ಮಾಡಲಾಗುತ್ತಿದ್ಯಂತೆ'' - ಹೀಗಂತ ತೆಲುಗು ಸಿನಿ ಪ್ರಿಯರು ಕಾಮೆಂಟ್ ಮಾಡಿದ್ದಾರೆ.

ಕಾಮೆಂಟ್ ಗಳ ಸಮರ.!

''ಕರ್ನಾಟಕದಲ್ಲಿ 'ಬಾಹುಬಲಿ' ಬ್ಯಾನ್ ಆಗಿರುವುದು ಕೇವಲ ಸತ್ಯರಾಜ್ ರವರಿಂದ. ಕನ್ನಡಿಗರ ಕುರಿತು ಟ್ರೋಲ್ ಮಾಡುವ ಮೊದಲು ನೀವು ಸಮಸ್ಯೆಯನ್ನ ಅರ್ಥೈಸಿ. ಕರ್ನಾಟಕದಲ್ಲಿ ಅನೇಕ ತೆಲುಗು ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಿವೆ. ನಾವು ತೆಲುಗು ಚಿತ್ರರಂಗದ ವಿರುದ್ಧ ಅಲ್ಲ. ಕಟ್ಟಪ್ಪ ಕ್ಷಮೆ ಕೇಳಲಿ'' ಅಂತ ಕನ್ನಡಿಗರು 'ಟ್ರೋಲ್ ಟಾಲಿವುಡ್' ಪೇಜ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

'ಸಾಮಾನ್ಯ ಕನ್ನಡಿಗ'ನ ಉತ್ತರ

ಕಟ್ಟಪ್ಪನ ಬಗ್ಗೆ ಕನ್ನಡಿಗರು ಸಿಡಿದೇಳಲು ಕಾರಣವೇನು ಎಂಬುದಕ್ಕೆ 'ಸಾಮಾನ್ಯ ಕನ್ನಡಿಗ' ಕೊಟ್ಟಿರುವ ಪ್ರತಿಕ್ರಿಯೆ ಇದು.

ಸುದೀಪ್ ಹಾಗೂ ಸತ್ಯರಾಜ್ ನಡುವೆ ಹೋಲಿಕೆ ಬೇಡ.!

''ಸುದೀಪ್ ಮತ್ತು ಸತ್ಯರಾಜ್ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ'' ಅಂತ ಕನ್ನಡಿಗರು ವಾದಕ್ಕೆ ಇಳಿದಿದ್ದಾರೆ.

ಕನ್ನಡಿಗರೇ ಇದಕ್ಕೆ ನೀವೇನ್ ಹೇಳ್ತೀರಾ.?

ಕನ್ನಡ ಪರ ಹೋರಾಟಗಾರರ ಕುರಿತು ಟಾಲಿವುಡ್ ಮಂದಿ 'ಟ್ರೋಲ್' ಮಾಡುತ್ತಿದ್ದಾರೆ. ಇದಕ್ಕೆ ನೀವೇನ್ ಹೇಳ್ತೀರಾ.? ನಿಮ್ಮ ಪ್ರತಿಕ್ರಿಯೆಯನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ....

English summary
Kannadiga protesters gets trolled in 'Troll Tollywood' Facebook page.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada