ಕ್ರಿಶ್ 3 ಚಿತ್ರದಲ್ಲಿ ಕನ್ನಡಿಗನ ಕೈ ಚಳಕ

ನಿನಿಪ್ರಿಯರಿಗೆ ದೀಪಾವಳಿ ಕೊಡುಗೆಯಾಗಿ ತೆರೆಗೆ ಬಂದ ಕ್ರಿಶ್ 3 ಚಿತ್ರ ತೆರೆಗೆ ಅಪ್ಪಳಿಸಿ ವಿಮರ್ಶಕರ ಮೆಚ್ಚುಗೆ ಗಳಿಸಿದೆ ಮತ್ತು ಬಾಕ್ಸ್ ಆಫೀಸ್ ನಲ್ಲಿಯೂ ಸಖತ್ ಸದ್ದು ಮಾಡುತ್ತಿದೆ. ಕ್ರಿಶ್ 3 ಚಿತ್ರದಲ್ಲಿ ಕನ್ನಡಿರೊಬ್ಬರ ಶ್ರಮವಿದೆ ಎಂದರೆ ನೀವು ನಂಬಲೇಬೇಕು. ಹೌದು ಚಿತ್ರದಲ್ಲಿ ಹೃತಿಕ್ ಮೇಕಪ್ ಮತ್ತು ಮುಖವಾಡ ಮಾಡಿದ್ದು, ದಾವಣರೆಗೆಯ ಹುಡುಗ.

ದಾವಣಗೆರೆಯ ರೂಪಕಲಾ ಬ್ಯೂಟಿ ಪಾರ್ಲರ್ ಮಾಲೀಕರಾದ ಶಶಿಕಲಾ ನಾಮದೇವ ಪಿಸೆ ಅವರ ಪುತ್ರ ನಹುಷ ನಾಲದೇವ ಪಿಸೆ ಕ್ರಿಶ್ 3 ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಹೃತಿಕ್ ರೋಷನ್ ಅವರಿಗೆ ಮೇಕಪ್ ಮಾಡಿದ್ದು, ಮಾತ್ರವಲ್ಲದೇ ಹೃತಿಕ್ ಧರಿಸುವ ಮುಖವಾಡ ಮಾಡಿಕೊಟ್ಟಿದ್ದಾರೆ.

Krrish 3

ಹಿಂದೆ ಕ್ರಿಶ್ ಚಿತ್ರದಲ್ಲೂ ಮೇಕಪ್ ಕಲಾವಿದರಾಗಿ ಕೆಲಸ ಮಾಡಿದ್ದ ನಹುಷ ಬಹುಜನರ ಮೆಚ್ಚುಗೆಗೆ ಪಾತ್ರವಾಗಿದ್ದರು ಹಾಗೂ ಉತ್ತಮ ಮೇಕಪ್ ಕಲಾವಿದ ಎಂಬ ಪ್ರಶಸ್ತಿಗೂ ಪಾತ್ರವಾಗಿದ್ದರು. ಸದ್ಯ ಕ್ರಿಶ್ 3 ಚಿತ್ರದಲ್ಲಿಯೂ ಕೆಲಸ ಮಾಡುವ ಮೂಲಕ ಕನ್ನಡನಾಡಿನ ಕೀರ್ತಿಯನ್ನು ಬಾಲಿವುಡ್ ಗೆ ತೆಗೆದುಕೊಂಡು ಹೋಗಿದ್ದಾರೆ.

ನಹುಷ ಅಮೆರಿಕಾದ ಹಾಲಿವುಡ್ ನಲ್ಲಿ ಮೇಕಪ್ ತರಬೇತಿ ಪಡೆದಿದ್ದಾರೆ. ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಐಶ್ವರ್ಯ ರೈ ಅವರಿಗೂ ಮೇಕಪ್ ಮಾಡಿರುವ ಕೀರ್ತಿಗೆ ನಹುಷ ಪಾತ್ರರಾಗಿದ್ದಾರೆ. ಹಲವಾರು ಹಿಂದಿ ಚಿತ್ರಗಳಲ್ಲಿ ಮೇಕಪ್ ಮ್ಯಾನ್ ಆಗಿ ಕೈ ಚಳಕ ತೋರಿರುವ ನಹುಷ ಇಂಡಿಯನ್ ಫೇಮಸ್ ಪಾಸ್ತೆಟಿಕ್ ಮೇಕ್ ಅಪ್ ಆರ್ಟಿಸ್ಟ್ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಾನೌತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಿಶ್ 3 ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬೆಳ್ಳಿತೆರೆಗೆ ಬಂದಿದೆ. ದುಷೃ ಶಿಕ್ಷಣ ಶಿಷ್ಟ ರಕ್ಷಣ ಥೀಮ್ ಹೊಂದಿರುವ ಈ ಚಿತ್ರ ಹಬ್ಬದ ಸಂದರ್ಭದಲ್ಲಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್ ನಲ್ಲಿಯೂ ತನ್ನ ಸದ್ದು ಮಾಡುತ್ತಿದ್ದು, ಸಾವಿರಾರು ಕೋಟಿ ಲಾಭ ಮಾಡುವ ನಿರೀಕ್ಷೆ ಇದೆ.

More from Filmibeat

English summary
Davanagere based Nahush Namdev Pise worked as makeup artist in the film Krrish 3. Nahush make up artist Hrithik Roshan and he prepared the mask that used in the film. Nahush also worked in Krrish 1 and get award for best makeup in film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X