For Quick Alerts
  ALLOW NOTIFICATIONS  
  For Daily Alerts

  ಇಲ್ಲಿ ಹೀಗೆ, ಅಲ್ಲಿ ಹಾಗೆ.. ರಶ್ಮಿಕಾ ಯಾಕ್ಹೀಗೆ.? ಕಡುಕೋಪ ಕನ್ನಡಿಗರಿಗೆ.!

  By Harshitha
  |
  ರಶ್ಮಿಕಾ ಮಂದಣ್ಣ ನಮ್ಮ ಇಂಡಸ್ಟ್ರಿಗೆ ಕಪ್ಪು ಚುಕ್ಕೆ ಅಂತಿದ್ದಾರೆ ನೆಟ್ಟಿಗರು..! | Filmibeat Kannada

  'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಬೆಡಗಿ ರಶ್ಮಿಕಾ ಮಂದಣ್ಣ. 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಹರೆಯದ ಹುಡುಗರ ಡ್ರೀಮ್ ಗರ್ಲ್ ಆದ ರಶ್ಮಿಕಾ ಮಂದಣ್ಣ ಇದೀಗ 'ಕಿರಿಕ್'ಗಳಿಂದಲೇ ಹೆಚ್ಚು ಸದ್ದು ಮಾಡ್ತಿದ್ದಾರೆ.

  ಸದ್ಯ ಟಾಲಿವುಡ್ ನಲ್ಲಿ ಬಿಜಿಯಾಗಿರುವ ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡಿಗರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. 'ಗೀತ ಗೋವಿಂದಂ' ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿ ನೋಡಿ ನೆಟ್ಟಿಗರು ಫುಲ್ ಗರಂ ಆಗಿದ್ದರು.

  ರಶ್ಮಿಕಾ-ರಕ್ಷಿತ್ ನಿಶ್ಚಿತಾರ್ಥ ಆಗಿರುವ ಕಾರಣ, ವಿಜಯ್ ದೇವರಕೊಂಡ-ರಶ್ಮಿಕಾ ನಡುವಿನ ಕೆಮಿಸ್ಟ್ರಿ ಕೆಲವರಿಗೆ ಕಿರಿಕಿರಿ ತಂದಿತ್ತು. ಇದೀಗ ರಶ್ಮಿಕಾರ ಮತ್ತೊಂದು ವಿಚಾರಕ್ಕೆ ಕನ್ನಡಿಗರು ಕೆರಳಿದ್ದಾರೆ.

  ಕನ್ನಡ ಸಿನಿಮಾದ ಪ್ರೆಸ್ ಮೀಟ್ ಒಂದರಲ್ಲಿ ಕನ್ನಡಕ್ಕಿಂತ ಇಂಗ್ಲೀಷ್ ಹೆಚ್ಚು ಬಳಸಿರುವ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾವೊಂದರ ಪ್ರೆಸ್ ಮೀಟ್ ನಲ್ಲಿ ಮಾತ್ರ ಸರಾಗವಾಗಿ ತೆಲುಗು ಭಾಷೆಯಲ್ಲಿ ಮಾತನಾಡಿರುವುದು ಕನ್ನಡಿಗರಿಗೆ ಕಡು ಕೋಪ ತರಿಸಿದೆ. ಮುಂದೆ ಓದಿರಿ...

  ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

  ಕರ್ನಾಟಕದ ಪತ್ರಿಕಾಗೋಷ್ಟಿಯಲ್ಲಿ ರಶ್ಮಿಕಾ ಮಂದಣ್ಣ ಮಾತನಾಡಿರುವ ಬಗೆ ಹಾಗೂ ತೆಲುಗು ಸಿನಿಮಾದ ಫಂಕ್ಷನ್ ವೊಂದರಲ್ಲಿ ರಶ್ಮಿಕಾ ಆಡಿರುವ ಮಾತುಗಳನ್ನ ಒಟ್ಟುಗೂಡಿಸಿ ತಯಾರು ಮಾಡಿರುವ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.! ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.!

  ನೆಟ್ಟಿಗರ ಮುನಿಸು

  ನೆಟ್ಟಿಗರ ಮುನಿಸು

  ಕನ್ನಡದ ಹುಡುಗಿಯಾಗಿ, ಕೊಡಗಿನ ಬೆಡಗಿಯಾಗಿ, ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ರಶ್ಮಿಕಾ, ಸ್ಯಾಂಡಲ್ ವುಡ್ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡದೆ, ಟಾಲಿವುಡ್ ನಲ್ಲಿ ಸುಲಲಿತವಾಗಿ ತೆಲುಗು ಮಾತನಾಡಿರುವುದು ನೆಟ್ಟಿಗರ ಮುನಿಸಿಗೆ ಕಾರಣವಾಗಿದೆ. ಹೀಗಾಗಿ ಫೇಸ್ ಬುಕ್ ನಲ್ಲಿ ರಶ್ಮಿಕಾ ವಿರುದ್ಧ ಕನ್ನಡಿಗರು ಕಾಮೆಂಟ್ ಮಾಡುತ್ತಿದ್ದಾರೆ.

  ರೀಲ್ ಅಲ್ಲ ರಿಯಲ್: ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ ರೀಲ್ ಅಲ್ಲ ರಿಯಲ್: ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ

  ಏನ್ರೀ ನಿಮ್ಮ ಕಥೆ ರಶ್ಮಿಕಾ.?

  ಏನ್ರೀ ನಿಮ್ಮ ಕಥೆ ರಶ್ಮಿಕಾ.?

  ತೆಲುಗಿನಲ್ಲಿ ಸದ್ಯ ಎರಡು ಸಿನಿಮಾಗಳನ್ನು ಕಂಪ್ಲೀಟ್ ಮಾಡಿ, ಚೆನ್ನಾಗಿ ತೆಲುಗು ಮಾತನಾಡಲು ಕಲಿತಿರುವ ರಶ್ಮಿಕಾ ಮೊದಲು ಕನ್ನಡ ಮಾತನಾಡುವುದನ್ನು ಕಲಿಯಲಿ ಅನ್ನೋದು ಕನ್ನಡಿಗರ ಆಗ್ರಹ.

  ವೈರಲ್ ಆಗಿದೆ ತೆಲುಗು ನಟನ ಜೊತೆಗೆ ರಶ್ಮಿಕಾ ಲಿಪ್-ಲಾಕ್ ವಿಡಿಯೋ.!ವೈರಲ್ ಆಗಿದೆ ತೆಲುಗು ನಟನ ಜೊತೆಗೆ ರಶ್ಮಿಕಾ ಲಿಪ್-ಲಾಕ್ ವಿಡಿಯೋ.!

  ಇಂತಹ ಹೀರೋಯಿನ್ ಬೇಡ.!

  ಇಂತಹ ಹೀರೋಯಿನ್ ಬೇಡ.!

  ''ಕನ್ನಡಕ್ಕೆ ಗೌರವ ಕೊಡದೆ, ತೆಲುಗಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿರುವ ರಶ್ಮಿಕಾ ಅಂತಹ ಹೀರೋಯಿನ್ ನಮಗೆ ಬೇಡ'' ಅಂತಿದ್ದಾರೆ ಕನ್ನಡಿಗರು.

  ಅನ್ ಫಾಲೋ ಮಾಡಿ...

  ಅನ್ ಫಾಲೋ ಮಾಡಿ...

  ''ರಶ್ಮಿಕಾ ರನ್ನ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿ'' ಎಂಬ ಕೂಗು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

  ಕನ್ನಡ ಕಲಿಸಿಕೊಡಿ...

  ಕನ್ನಡ ಕಲಿಸಿಕೊಡಿ...

  ಬರೀ ರಶ್ಮಿಕಾಗೆ ಮಾತ್ರ ಅಲ್ಲ, ರಕ್ಷಿತ್ ಶೆಟ್ಟಿಗೂ ಸೇರಿಸಿ ಕನ್ನಡಿಗರು ಫೇಸ್ ಬುಕ್ ನಲ್ಲಿ ಬೆಂಡೆತ್ತುತ್ತಿದ್ದಾರೆ.

  ಯಾರಿಗೂ ಅಧಿಕಾರ ಇಲ್ಲ.!

  ಯಾರಿಗೂ ಅಧಿಕಾರ ಇಲ್ಲ.!

  ''ನಾವಿರುವುದು ಪ್ರಜಾಪ್ರಭುತ್ವದಲ್ಲಿ. ಯಾರು ಯಾವ ಭಾಷೆ ಮಾತನಾಡಬೇಕು ಅಂತ ನಿರ್ಧಾರ ಮಾಡುವ ಅಧಿಕಾರ ಯಾರಿಗೂ ಇಲ್ಲ'' ಅಂತ ಹೇಳ್ತಾ ರಶ್ಮಿಕಾ ಪರ ಬ್ಯಾಟಿಂಗ್ ಮಾಡುವವರೂ ಫೇಸ್ ಬುಕ್ ನಲ್ಲಿ ಇದ್ದಾರೆ.

  ಮತ್ತೊಂದು ವಿಡಿಯೋ ವೈರಲ್

  ಇನ್ನೂ ಪರಭಾಷಾ ನಟಿಯರಾದ ಪಾರ್ವತಿ ಮೆನನ್ ಹಾಗೂ ನಿತ್ಯ ಮೆನನ್ ಸರಾಗವಾಗಿ ಕನ್ನಡ ಮಾತನಾಡಿರುವುದು ಕನ್ನಡಿಗರಿಗೆ ಹೆಮ್ಮೆ ತಂದಿದೆ.

  English summary
  Kannadigas are annoyed with Kannada Actress Rashmika Mandanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X