twitter
    For Quick Alerts
    ALLOW NOTIFICATIONS  
    For Daily Alerts

    ಮಹೇಶ್ ಬಾಬು 'ಮಹರ್ಷಿ' ವಿರುದ್ಧ ಕನ್ನಡಾಭಿಮಾನಿಗಳು ಆಕ್ರೋಶ

    |

    Recommended Video

    ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ಮಹೇಶ್ ಬಾಬು..! ಯಾಕೆ ಗೊತ್ತಾ | FILMIBEAT KANNADA

    ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 'ಮಹರ್ಷಿ' ಸಿನಿಮಾ ಇಂದು ದೇಶಾದ್ಯಂತ ತೆರೆಕಂಡಿದೆ. ಕರ್ನಾಟಕದಲ್ಲೂ ಭಾರಿ ದೊಡ್ಡ ಮಟ್ಟದಲ್ಲಿ ತೆಲುಗು ಬಿಡುಗಡೆಯಾಗಿದೆ. ಇದೀಗ ಈ ಚಿತ್ರದ ವಿರುದ್ಧ ಕೆಲವು ಕನ್ನಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪ್ರಿನ್ಸ್ ನಟನೆಯ 25ನೇ ಚಿತ್ರ ಇದಾಗಿದ್ದು, ಕರ್ನಾಟದಲ್ಲಿ ಸುಮಾರು 100 ಚಿತ್ರಮಂದಿರದಲ್ಲಿ 490ಕ್ಕೂ ಹೆಚ್ಚು ಶೋಗಳು ನಡೆಯುತ್ತಿದೆ. ಇದರ ವಿರುದ್ಧ ಕನ್ನಡ ಅಭಿಮಾನಿಗಳು ಮತ್ತು ಡಬ್ಬಿಂಗ್ ಪರ ಹೋರಾಟಗಾರರು ಕಿಡಿಕಾರಿದ್ದಾರೆ.

    'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು 'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು

    ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡ್ತಿರುವ ಚಿತ್ರಾಭಿಮಾನಿಗಳು ಮಹರ್ಷಿ ಸಿನಿಮಾ ಮತ್ತು ಕರ್ನಾಟಕ ವಿತರಕರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಡಬ್ಬಿಂಗ್ ವಿರೋಧಿಸುವವರ ವಿರುದ್ಧ ಕೆಂಡಕಾರುತ್ತಿದ್ದಾರೆ. ಮುಂದೆ ಓದಿ.....

    ಕನ್ನಡಿಗರ ಮೇಲೆ ದಬ್ಬಾಳಿಕೆ

    ಕನ್ನಡಿಗರ ಮೇಲೆ ದಬ್ಬಾಳಿಕೆ

    ''496 ಶೋ ಅಂದರೆ ಬೆಂಗಳೂರಿನಲ್ಲೇ 100 ಚಿತ್ರಮಂದಿರಗಳಲ್ಲಿ ಬಿಡುಗಡೆ. ಇದಕ್ಕಿಂತ ಕನ್ನಡಿಗರ ಮೇಲೆ ತೆಲುಗರ ದಬ್ಬಾಳಿಕೆಗೆ ಉದಾಹರಣೆ ಬೇಕೇ? ಕನ್ನಡಕ್ಕೆ ಡಬ್ ಮಾಡಲ್ಲ ಅಂತ ಹಠಕ್ಕೆ ಬಿದ್ದಿರುವ ಸ್ವಾಗತ್ ಎಂಟರ್ಪ್ರೈಸಸ್ ಅವರ ಮುಂದೆ ಲೆಕ್ಕಕ್ಕಿಲ್ಲದೆ ಹೋದವೇ ಕನ್ನಡ ಸಂಘಟನೆಗಳು'' ಎಂದು ಡಬ್ಬಿಂಗ್ ಹೋರಾಟಗಾರ ಗಣೇಶ್ ಚೇತನ್ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಲ್ಮಾನ್ ಖಾನ್ 'ಭಾರತ್' ಕನ್ನಡದಲ್ಲಿ ಬರಲೇಬೇಕುಸಲ್ಮಾನ್ ಖಾನ್ 'ಭಾರತ್' ಕನ್ನಡದಲ್ಲಿ ಬರಲೇಬೇಕು

    ಇದು ತೆಲುಗು ಹೇರಿಕೆ.!

    ಇದು ತೆಲುಗು ಹೇರಿಕೆ.!

    ಇಷ್ಟು ದೊಡ್ಡ ಸಂಖ್ಯೆಯಲ್ಲಿ ತೆಲುಗು ಸಿನಿಮಾ ಮಹರ್ಷಿ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದರ ಅವಶ್ಯಕತೆ ಏನಿತ್ತು? ಇದು ತೆಲುಗು ಹೇರಿಕೆ ಅಲ್ಲವೇ? ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು ಅಲ್ಲವೇ ಎಂದು ಮತ್ತೊಬ್ಬ ಡಬ್ಬಿಂಗ್ ಹೋರಾಟಗಾರ ಟ್ವೀಟ್ ಮಾಡಿದ್ದಾರೆ.

    ಎಲ್ಲಿ ಹೋಯ್ತು ನಿಮ್ಮ ಸ್ವಾಭಿಮಾನ?

    ಎಲ್ಲಿ ಹೋಯ್ತು ನಿಮ್ಮ ಸ್ವಾಭಿಮಾನ?

    ''ಮಾತೆತ್ತಿದರೆ ಸ್ವಾಭಿಮಾನ ಸ್ವಾಭಿಮಾನ ಎನ್ನುತ್ತಿದ್ದವರು ಈಗ ಎಲ್ಲಿ? ಎಲ್ಲೋಯ್ತ್ರಯ್ಯ ನಿಮ್ಮ ಸ್ವಾಭಿಮಾನ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕನ್ನಡ ನೆಲದಲ್ಲಿ ಹೆಚ್ಚು ಸಂಖ್ಯೆಯಲ್ಲಿ ತೆಲುಗು ಸಿನಿಮಾ ರಿಲೀಸ್ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

    ಕನ್ನಡದಲ್ಲಿ ಬರುತ್ತಿದೆ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರಕನ್ನಡದಲ್ಲಿ ಬರುತ್ತಿದೆ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರ

    ಡಬ್ಬಿಂಗ್ ವಿರೋಧಿಗಳು ಎಲ್ಲಿದ್ದೀರಾ?

    ಡಬ್ಬಿಂಗ್ ವಿರೋಧಿಗಳು ಎಲ್ಲಿದ್ದೀರಾ?

    ಡಬ್ಬಿಂಗ್ ಸಿನಿಮಾ ರಿಲೀಸ್ ಮಾಡಿದ್ರೆ ಪ್ರತಿಭಟನೆ ಮಾಡುವ ಹಾಗೂ ವಿರೋಧ ಮಾಡುವ ಡಬ್ಬಿಂಗ್ ವಿರೋಧಿಗಳು ಈಗ ಎಲ್ಲಿದ್ದೀರಾ ಎಂದು ಕೇಳುತ್ತಿದ್ದಾರೆ.

    ಕನ್ನಡಕ್ಕೆ ಡಬ್ ಆಗಿದೆ 'ರಂಗಸ್ಥಳಂ', ಯಾವಾಗ ಬಿಡುಗಡೆ ?ಕನ್ನಡಕ್ಕೆ ಡಬ್ ಆಗಿದೆ 'ರಂಗಸ್ಥಳಂ', ಯಾವಾಗ ಬಿಡುಗಡೆ ?

    ಡಬ್ಬಿಂಗ್ ಮಾಡಿ ರಿಲೀಸ್ ಮಾಡಲಿ

    ಡಬ್ಬಿಂಗ್ ಮಾಡಿ ರಿಲೀಸ್ ಮಾಡಲಿ

    ತೆಲುಗು ಭಾಷೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿನಿಮಾ ರಿಲೀಸ್ ಆದ್ರೆ ಕನ್ನಡ ಭಾಷೆ ಹೇಗೆ ಬೆಳೆಯುತ್ತೆ. ಅದರ ಬದಲು ಕನ್ನಡದಲ್ಲಿ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಿದ್ರೆ ಅದರಿಂದ ನೋಡುವವರಿಗೆ ಕನ್ನಡ ಭಾಷೆ ಕಲಿಯುವುದಕ್ಕೂ ಸಹಕಾರಿಯಾಗುತ್ತೆ. ಪರಭಾಷೆ ಚಿತ್ರಗಳನ್ನ ಡಬ್ ಮಾಡಿ ರಿಲೀಸ್ ಮಾಡುವುದು ಉತ್ತಮ ಎಂದು ಡಬ್ಬಿಂಗ್ ಪರ ಬೆಂಬಲಿಗರು ಬೇಡಿಕೆಯಾಗಿದೆ.

    English summary
    Kannadigas are expressing anger over maharshi film. because, this movie has released in around 100 theater and running 496 shows in karnataka.
    Thursday, May 9, 2019, 14:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X