'ದೇವರ' ವಿಚಾರದಲ್ಲಿ ಜ್ಯೂ. ಎನ್‌ಟಿಆರ್ ಕನ್ನಡ ಪ್ರೀತಿ; ಕೆವಿಎನ್ ಸಂಸ್ಥೆ ಇದನ್ನು ಅನುಸರಿಸುತ್ತಾ?

ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರ್ತಿದೆ. ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದಲ್ಲಿ ತಾರಕ್ ಡಬಲ್ ರೋಲ್ ಪ್ಲೇ ಮಾಡಿದ್ದಾರೆ. ತಂದೆ ಮಗನಾಗಿ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದು ಸೈಫ್ ಅಲಿಖಾನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಹಾಗೂ ಯುವಸುಧಾ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ.

kannadigas demanding jr ntr starrer devara more kannada shows in karnataka

ಕರಾವಳಿ ಭಾಗದ ಒಂದು ಊರು. ಆ ಊರಿನಲ್ಲಿ ದುಷ್ಠರ ಉಪಟಳ. ಆ ಊರಿನ ರಕ್ಷಣೆಗೆ ದೇವರ ಹಾಗೂ ಆತನ ಮಗ ನಿಲ್ಲುವುದೇ ಚಿತ್ರದ ಒನ್‌ಲೈನ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದೆ. 'ಆರ್‌ಆರ್‌ಆರ್' ಬಳಿಕ ತಾರಕ್ ನಟಿಸಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ. ಸೂಪರ್ ಸಿನಿಮಾಗಳ ಸರದಾರ ಕೊರಟಾಲ ಶಿವ ಕೊನೆಯದಾಗಿ ಫ್ಲಾಪ್ ಸಿನಿಮಾ ಕೊಟ್ಟಿದ್ದರು. ಇದೀಗ ಆ ಸೋಲಿನ ಸುಳಿಯಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ.

ಜ್ಯೂ. ಎನ್‌ಟಿಆರ್ ಕನ್ನಡ ಪ್ರೀತಿ ಗೊತ್ತೇಯಿದೆ. ಅವರ ತಾಯಿ ಕುಂದಾಪುರ ಮೂಲದವರು. ತಾರಕ್ ಕನ್ನಡ ಮಾತನಾಡಲು ಕಲಿತಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ಸಮೇತ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಈ ವೇಳೆ ಸಾಥ್ ಕೊಟ್ಟಿದ್ದರು. ಕೆಲ ವೇದಿಕೆಗಳಲ್ಲಿ ಕೂಡ ಕನ್ನಡ ಪ್ರೇಮವನ್ನು ತಾರಕ್ ಸಾರಿದ್ದಾರೆ. 'ಆರ್‌ಆರ್‌ಆರ್' ಚಿತ್ರಕ್ಕೆ ತಾರಕ್ ಹಾಗೂ ರಾಮ್‌ಚರಣ್ ಕನ್ನಡದಲ್ಲಿ ತಾವೇ ಡಬ್ ಮಾಡಿದ್ದರು.

kannadigas demanding jr ntr starrer devara more kannada shows in karnataka

'ದೇವರ' ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಹಿಂದಿ ಭಾಷೆಗಳಲ್ಲಿ ಜ್ಯೂ. ಎನ್‌ಟಿಆರ್ ತಾವೇ ಡಬ್ ಮಾಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಕನ್ನಡ ವರ್ಷನ್ ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತದೆ ಎನ್ನುವ ಚರ್ಚೆ ಶುರುವಾಗುತ್ತಿದೆ. ಡಬ್ಬಿಂಗ್ ಸಿನಿಮಾಗಳನ್ನು ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ತಲುಪಿಸಲು 'ದೇವರ' ರೀತಿಯ ಸಿನಿಮಾಗಳು ಕನ್ನಡದಲ್ಲಿ ದೊಡ್ಡದಾಗಿ ರಿಲೀಸ್ ಆಗಬೇಕು.

ಕರ್ನಾಟಕದಲ್ಲಿ ಡಬ್ಬಿಂಗ್‌ಗೆ ಅವಕಾಶ ಸಿಕ್ಕಮೇಲೆ ಸಾಕಷ್ಟು ಸಿನಿಮಾಗಳು ಡಬ್ ಆಗಿ ರಿಲೀಸ್ ಆಗಿವೆ. ಆದರೆ ಹೆಸರಿಗೆ ಡಬ್ ಮಾಡಿದರೂ ಕನ್ನಡಕ್ಕಿಂತ ಒರಿಜಿನಲ್ ಭಾಷೆಯಲ್ಲಿ ಹೆಚ್ಚು ಶೋ ಕೊಡಲಾಗುತ್ತದೆ. ಆದರೆ ಕನ್ನಡಕ್ಕೆ ಡಬ್ ಆಗಿ ಬರುವ ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. 'ದೇವರ' ರೀತಿಯ ಚಿತ್ರವನ್ನು ಅದರಲ್ಲೂ ತಾರಕ್ ತಾವೇ ಕನ್ನಡದಲ್ಲಿ ಡಬ್ ಮಾಡಿರುವ ಚಿತ್ರವನ್ನು ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

'ಆರ್‌ಆರ್‌ಆರ್' ಚಿತ್ರದ ಕನ್ನಡ ವರ್ಷನ್‌ಗೆ ಸಾಕಷ್ಟು ಶೋಗಳು ಸಿಕ್ಕಿತ್ತು. 'ದೇವರ' ಚಿತ್ರಕ್ಕೂ ಹೆಚ್ಚು ಕನ್ನಡ ಶೋ ಕೊಡಿ ಎಂದು ಕೆಲವರು ಸೋಶಿಯಲ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದೆ. ಹಾಗಾಗಿ ಕೆವಿಎನ್ ಸಂಸ್ಥೆ ಹೆಚ್ಚು ಕನ್ನಡ ಶೋಗಳನ್ನು ಕೊಡ್ತಾರಾ ಕಾದು ನೋಡಬೇಕಿದೆ.ಸ

More from Filmibeat

English summary
Jr NTR dubbed in Kannada for Devara, kannadigas asking more shows;
Read more about: filmibeat original ntr tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X