»   » ತಮಿಳು ನಟ ಸಿಂಬು ಕರೆಗೆ ಓಗೊಟ್ಟು ತಮಿಳರಿಗೆ ನೀರು ಕೊಟ್ಟ ಕನ್ನಡಿಗರು.!

ತಮಿಳು ನಟ ಸಿಂಬು ಕರೆಗೆ ಓಗೊಟ್ಟು ತಮಿಳರಿಗೆ ನೀರು ಕೊಟ್ಟ ಕನ್ನಡಿಗರು.!

Posted By:
Subscribe to Filmibeat Kannada

''ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ. ಆಕ್ರೋಶ, ಹೋರಾಟದಿಂದಲ್ಲ'' ಎಂಬ ಮಾತು ಮತ್ತೆ ಸಾಬೀತಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ತಮಿಳು ನಾಡು ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟ ಇಂದು ನಿನ್ನೆಯದ್ದಲ್ಲ. 'ರಕ್ತ ಕೊಟ್ಟೇವು ನೀರು ಕೊಡೆವು' ಎನ್ನುತ್ತಿದ್ದ ಕನ್ನಡಿಗರೇ ಇಂದು ತಮಿಳರಿಗೆ ನೀರು ಕೊಡಲು ಮನಸ್ಸು ಮಾಡಿದ್ದಾರೆ. ಅದು ತಮಿಳು ನಟ ಸಿಂಬು ಅವರ ಹೃದಯಸ್ಪರ್ಶಿ ಮಾತುಗಳನ್ನ ಕೇಳಿದ್ಮೇಲೆ.!

ಇತ್ತೀಚೆಗಷ್ಟೇ ತಮಿಳು ನಟ ಸಿಂಬು ಪತ್ರಿಕಾಗೋಷ್ಟಿಯಲ್ಲಿ ಕಾವೇರಿ ವಿವಾದದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದರು. ತಮಿಳು ನಟ ಆಗಿ, ತಮಿಳರ ಪರ ವಹಿಸಲು ಹೋಗಿ ಕನ್ನಡಿಗರ ವಿರುದ್ಧ ಸಿಂಬು ಮಾತನಾಡಲಿಲ್ಲ. ಪರಿಸ್ಥಿತಿಯನ್ನ ಅರಿತು ಸಿಂಬು ಆಡಿದ ಮಾತುಗಳು ಕನ್ನಡಿಗರ ಮನ ಮುಟ್ಟಿತ್ತು.
''ನಾವೆಲ್ಲರೂ ಮನುಷ್ಯರು... ನಮಗೆ ಮನುಷ್ಯತ್ವ ಮುಖ್ಯ. ನೀವು (ಕನ್ನಡಿಗರು) ಬಳಸಿ ಉಳಿದ ನೀರನ್ನು ಮಾತ್ರ ನಮಗೆ ಕೊಡಿ'' ಎಂದಿದ್ದ ಸಿಂಬು ಏಪ್ರಿಲ್ 11 ರಂದು ಕನ್ನಡಿಗರಿಗೆ ಒಂದು ಕೆಲಸ ಮಾಡಲು ಹೇಳಿದ್ದರು.

''ಹನ್ನೊಂದನೇ ತಾರೀಖು, ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ಒಳಗೆ ಕರ್ನಾಟಕದಲ್ಲಿರೋಂಥ ನಮ್ಮ ತಾಯಿ, ತಂದೆ, ನಾನು ತಮ್ಮ ಅಂತ ಭಾವಿಸೋ, ನಾನು ಅಣ್ಣ ಅಂತ ಭಾವಿಸೋ, ನಾನು ಸ್ನೇಹಿತ ಅಂತ ಭಾವಿಸೋ...ಕರ್ನಾಟಕದ ಅಷ್ಟೂ ಜನ... "ನೀವು...ಒಂದು ಲೋಟದಲ್ಲಿ ನೀರು ತುಂಬಿ ಹಿಡಿದು...ನಾವು ತಮಿಳರಿಗೆ ನೀರು ಕೊಡ್ತೀವಿ ಅಂತ ವಿಡಿಯೋ ಮಾಡಿ #UniteForHumanity ಹಾಕಿ ತೋರಿಸಿ" ಎಂದು ಸಿಂಬು ಕೇಳಿಕೊಂಡಿದ್ದರು.

ಸಿಂಬು ಹೇಳಿದಂತೆ ನಿನ್ನೆ (ಬುಧವಾರ) ತಮಿಳುನಾಡಿಗೆ ನೀರು ಕೊಡಲು ಸಮ್ಮತಿ ಸೂಚಿಸುವಂತೆ ಕನ್ನಡಿಗರು ಕೈಯಲ್ಲಿ ನೀರು ತುಂಬಿದ ಲೋಟ ಹಿಡಿದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಹಜವಾಗಿ #UniteForHumanity ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಕನ್ನಡಿಗರು ಮಾಡಿರುವ ಕೆಲ ಟ್ವೀಟ್ ಗಳು ಇಲ್ಲಿವೆ ನೋಡಿ....

ಕನ್ನಡ ಪರ ಹೋರಾಟಗಾರರೇ ನೀರು ಕೊಡ್ತಿದ್ದಾರೆ.!

ಕನ್ನಡ, ಕನ್ನಡಿಗರ ಪರ ಹೋರಾಟ ಮಾಡುವ 'ಕರ್ನಾಟಕ ಸಂರಕ್ಷಣಾ ವೇದಿಕೆ'ಯ ಕಾರ್ಯಕರ್ತರು ಸಿಂಬು ಮಾತುಗಳನ್ನು ಕೇಳಿ ತಮಿಳರಿಗೆ ಬಾಟಲ್ ನೀರು ಕೊಟ್ಟಿದ್ದಾರೆ ಅಂದ್ರೆ ನೀವೇ ಊಹಿಸಿ ಸಿಂಬು ಮಾತಲ್ಲಿರುವ ತಾಕತ್ತು ಎಂಥದ್ದು ಅಂತ.!

ಏಪ್ರಿಲ್ 11 ರಂದು ಸಿಂಬು ಹೇಳಿದಂತೆ ನೀವು ಮಾಡ್ತೀರಾ? ತಮಿಳರಿಗೆ ನೀರು ಕೊಡ್ತೀರಾ?

ನೀರು ಕೊಟ್ಟ ಹೆಮ್ಮೆಯ ಕನ್ನಡತಿ

ಸಿಂಬು ಅವರ ಹೃದಯಸ್ಪರ್ಶಿ ಭಾಷಣ ಕೇಳಿದ್ಮೇಲೆ, ಹೆಮ್ಮೆಯ ಕನ್ನಡತಿ ಒಬ್ಬರು ಒಂದು ಬಾಟಲ್ ಕಾವೇರಿ ನೀರನ್ನು ತಮಿಳಿಗ ಮಹೇಶ್ ಎಂಬುವರಿಗೆ ನೀಡಿದ್ದಾರೆ.

''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ

ಒಗ್ಗಟ್ಟು ಪ್ರದರ್ಶನ

''ಬದುಕಲು ನೀರು ಮುಖ್ಯ. ಹಾಗೇ ಬದುಕು ಕೂಡ ಮುಖ್ಯ'' ಎಂಬ ಸಂದೇಶದೊಂದಿಗೆ ಕನ್ನಡಿಗರೊಬ್ಬರು ತಮಿಳರಿಗೆ ಬಾಟಲ್ ನೀರು ಕೊಟ್ಟಿದ್ದಾರೆ.

ಹೊಸ ಕ್ರಾಂತಿ

ಸಿಂಬು ಕೊಟ್ಟಿರುವ ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕ್ರಾಂತಿ ಸೃಷ್ಟಿ ಮಾಡಿದೆ ಅಂತ ಹೇಳಿದರೂ ತಪ್ಪಾಗಲ್ಲ. ತಮಿಳರಿಗೆ ಮನಸ್ಸು ಪೂರ್ವಕವಾಗಿ ನೀರು ಕೊಡ್ತಿದ್ದಾರೆ ಕನ್ನಡಿಗರು.

ಟ್ರೆಂಡಿಂಗ್ ಆಗುತ್ತಿದೆ

#UniteForHumanity ಟ್ರೆಂಡಿಂಗ್ ಆಗುತ್ತಿದೆ. ಕನ್ನಡಿಗರು ಹಾಗೂ ತಮಿಳರು ನೀರನ್ನ ಹಂಚಿಕೊಳ್ಳುತ್ತಿರುವ ನೂರಾರು ಫೋಟೋ, ವಿಡಿಯೋಗಳು ಟ್ವಿಟ್ಟರ್ ನಲ್ಲಿ ವೈರಲ್ ಆಗಿವೆ.

ಗ್ಲಾಸ್ ಯಾಕೆ ಜಗ್ ತಗೊಳ್ಳಿ...

ಸಿಂಬು ಭಾಷಣ ಕೇಳಿ ಇಂಪ್ರೆಸ್ ಆಗಿರುವ ಕನ್ನಡಿಗರೊಬ್ಬರು, ''ಒಂದು ಲೋಟ ನೀರು ಮಾತ್ರ ಯಾಕೆ.? ಒಂದು ಜಗ್ ನೀರು ತೆಗೆದುಕೊಳ್ಳಿ'' ಎನ್ನುತ್ತಾ ಮಾಡಿರುವ ವಿಡಿಯೋ ಇಲ್ಲಿದೆ.

ವಿತ್ ಲವ್

ಕಾವೇರಿ ನದಿ ನೀರು ಹಂಚಿಕೆ ಹೋರಾಟ ಈಗ ಹೊಸ ತಿರುವು ಪಡೆದುಕೊಂಡಿದೆ. ಶುದ್ಧ ಮನಸ್ಸಿನಿಂದ ಕನ್ನಡಿಗರೇ ನೀರು ಕೊಡಲು ಮುಂದಾಗಿದ್ದಾರೆ.

ಒಗ್ಗಟ್ಟಿನ ಮಂತ್ರ

ಸಿಂಬು ಮಾತು ಎಷ್ಟು ಪರಿಣಾಮಕಾರಿ ಆಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

ಪುಟ್ಟ ಹುಡುಗಿಯ ದೊಡ್ಡ ಸಂದೇಶ

ದೊಡ್ಡವರು ಮಾತ್ರ ಅಲ್ಲ, ಪುಟ್ಟ ಹುಡುಗಿ ಕೂಡ ತಮಿಳರಿಗೆ ನೀರು ಕೊಡಲು ತಯಾರಿದ್ದಾಳೆ. ಬೇಕಾದ್ರೆ, ವಿಡಿಯೋ ನೋಡಿ...

ಮಜ್ಜಿಗೆ ಕೊಟ್ಟ ಕನ್ನಡಿಗರು

ಸಿಂಬು ಮಾತುಗಳನ್ನ ಕೇಳಿದ್ಮೇಲೆ, ತಮಿಳರಿಗೆ ಬರೀ ನೀರು ಮಾತ್ರ ಅಲ್ಲ ಬಿಸಿಲಿನ ಬೇಗೆ ತಣಿಸುವ ಮಜ್ಜಿಗೆಯನ್ನೂ ಕೊಟ್ಟಿದ್ದಾರೆ ಕನ್ನಡಿಗರು.

ನಾವೆಲ್ಲ ಮೊದಲು ಭಾರತೀಯರು

'ನಾವೆಲ್ಲರೂ ಮನುಷ್ಯರು, ನಾವೆಲ್ಲರೂ ಭಾರತೀಯರು' ಎಂದ ಸಿಂಬು ಮಾತು ಎಲ್ಲರ ಮನ ಮುಟ್ಟಿದೆ. ಹೀಗಾಗಿ ಕನ್ನಡಿಗರು ಹಾಗೂ ತಮಿಳರು ಒಗ್ಗಟ್ಟಿನ ಮಂತ್ರ ಜಪಿಸುತ್ತಾ, ಒಟ್ಟೊಟ್ಟಿಗೆ ವಿಡಿಯೋ ಮಾಡಿದ್ದಾರೆ. ಇಂತಹ ಹಲವು ವಿಡಿಯೋಗಳು ಟ್ವಿಟ್ಟರ್ ನಲ್ಲಿ ವೈರಲ್ ಆಗಿವೆ.

English summary
Kannadigas have appreciated Tamil Actor Simbu by doing a video holding a glass of water and posting it on Social Media under #UniteForHumanity.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X