'Boycott RRR': ದರ್ಶನ್, ಯಶ್‌ಗೆ ಸುತ್ತಿಕೊಂಡ 'RRR' ವಿವಾದ!
'RRR' ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವಂತೆ ಅಭಿಯಾನ ಶುರುವಾಗಿದೆ. ಇದಕ್ಕೆ ಕಾರಣ ಕನ್ನಡ ಅವತರಣಿಕೆಯಲ್ಲಿ ಕರ್ನಾಟಕದಲ್ಲಿ 'ಆರ್‌ಆರ್‌ಆರ್' ರಿಲೀಸ್ ಆಗುತ್ತಿಲ್ಲ ಎನ್ನುವುದು. ಕನ್ನಡದ ಅವತರಣಿಕೆಯ 'ಆರ್‌ಆರ್‌ಆರ್' ಪ್ರದರ್ಶನ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಕನ್ನಡದಲ್ಲಿ 'ಆರ್‌ಆರ್‌ಆರ್' ಚಿತ್ರವನ್ನು ನೋಡಬೇಕೆಂದು ಟಿಕೆಟ್ ಬುಕ್ ಮಾಡಲು ಮುಂದಾದವರಿಗೆ ಟಿಕೆಟ್ ಸಿಗುತ್ತಿಲ್ಲ.
Recommended Video

ಕನ್ನಡದಲ್ಲೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ ಎಂದು ಸಿನಿಮಾ ತಂಡ ಹೇಳಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ಹಾಗಾಗಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡದೇ ದ್ರೋಹ ಮಾಡಲಾಗುತ್ತಿದೆ ಎಂದು ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾವನ್ನು ಬೇರೆ ಭಾಷೆಯಲ್ಲಿ ರಿಲೀಸ್ ಮಾಡಲು ಬಿಡದೆ ಪ್ರತಿಭಟನೆ ಮಾಡುವುದಾಗಿ ಹಲವು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ.
ಈ ಬಗ್ಗೆ ಕಳೆದ ಒಂದು ದಿನದಿಂದ ದೊಡ್ಡದಾಗಿ ಗದ್ದಲ ಸೃಷ್ಟಿ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಾಟ್ 'ಆರ್‌ಆರ್‌ಆರ್' ಅಭಿಯಾನ ಶುರುವಾಗಿದೆ. ಆದರೆ ಈ ಬಗ್ಗೆ ಕನ್ನಡದ ನಟರು ಮಾತಾಡದೇ ಇರುವುದಕ್ಕೆ ಹಲವು ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಮತ್ತು ಯಶ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಡವನ್ನು ಹೀಗೆ ಕಡೆಗಣಿಸ ಬೇಡಿ ಎಂದು ಹೇಳುತ್ತಿದ್ದಾರೆ.
ದರ್ಶನ್, ಯಶ್‌ಗೆ ಕನ್ನಡಿಗರ ಪ್ರಶ್ನೆ!
ಸದ್ಯ 'ಆರ್‌ಆರ್‌ಆರ್' ಚಿತ್ರದ ವಿಚಾರದಲ್ಲಿ ವಿವಾದ ಸೃಷ್ಟಿ ಆಗಲು ಕಾರಣ ಭಾಷೆ. ಕನ್ನಡ ಭಾಷೆಯಲ್ಲಿ ಮಾತ್ರ 'ಆರ್‌ಆರ್‌ಆರ್' ಚಿತ್ರವನ್ನು ರಿಲೀಸ್ ಮಾಡದೇ ಇರುವ ಕಾರಣಕ್ಕೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಆದರೆ ಈ ಬಗ್ಗೆ ಕನ್ನಡದ ಸ್ಟಾರ್ ನಟರು ಮೌನ ವಹಿಸಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕನ್ನಡದ ಸ್ಟಾರ್ ನಟರಾದ ಯಶ್ ಮತ್ತು ದರ್ಶನ್ ಈ ವಿಚಾರದಲ್ಲಿ ಸುಮ್ಮನೆ ಯಾಕೆ ಇದ್ದೀರಾ?, ಕನ್ನಡದ ವಿಚಾರ ಬಂದಾಗ ನೀವೂ ಮಾತನಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಯಾವಾಗ ಈ ವಿಚಾರದಲ್ಲಿ ಮಾತಾಡುತ್ತಾರೆ ಕನ್ನಡ ಸ್ಟಾರ್ ನಟರು!
ಕನ್ನಡದ ನಟರು ಕನ್ನಡದ ವಿಚಾರ ಬಂದಾಗ ಯಾವಾಗಲೂ ಸುಮ್ಮನೆ ಕೂತಿಲ್ಲ. ಈ ಹಿಂದೆಯೂ ಹಲವು ಬಾರಿ ಡಬ್ಬಿಂಗ್ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೆ ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿ ನಿರ್ಮಾಣ ಆಗುತ್ತಿವೆ. ಕನ್ನಡದ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಟ್ಟಿಗೆ ನಿರ್ಮಾಣ ಆಗುತ್ತಿವೆ. ಕನ್ನಡದ ಜೊತೆಗೆ ಬೇರೆ, ಬೇರೆ ಭಾಷೆಗಳಲ್ಲಿ ಡಬ್ ಆಗಿ ಒಟ್ಟಿಗೆ ರಿಲೀಸ್ ಆಗುತ್ತಿವೆ. ಹಾಗಾಗಿ ಏಕಾಏಕಿ ಯಾವುದೇ ನಿರ್ಧಾರಕ್ಕೆ ಬಂದು, ಮಾತನಾಡುವುದು ಸರಿಯಲ್ಲ. ಹಾಗಾಗಿ ಈ ವಿಚಾರ ಏನೇ ಮಾಡಿದರು ಸರಿ ಹೋಗದೇ ಇದ್ದಾಗ ಮಾತ್ರ ಅವರ ಮಾತನಾಡುವ ಸಾಧ್ಯತೆ ಇದೆ.

ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ತಯಾರಿ!
ಇನ್ನು ಕನ್ನಡ ಪರ ಹೋರಾಟಗಾಗರು 'ಆರ್‌ಆರ್‌ಆರ್' ಚಿತ್ರದ ವಿರುದ್ಧ ಪ್ರತಿಭಟನೆ ಮಾಡಲು ಸಜ್ಜಾಗಿ ಬಿಟ್ಟಿದ್ದಾರೆ. ಇದು ಕನ್ನಡಕ್ಕೆ ಮಾಡುತ್ತಿರುವ ಅವಮಾನ ಎಂದು ಕರ್ನಾಟಕ ರಕ್ಷಣಾ ವೇದಿಕೆ ಇಂದು (ಮಾರ್ಚ್ 24) ಪ್ರತಿಭಟನೆಗೆ ಇಳಿಯುತ್ತಿದೆ. ತ್ರಿವೇಣಿ ಚಿತ್ರ ಮಂದಿರದ ಎದುರು ಪ್ರತಿಭಟನೆ ಮಾಡಲು ಮುಂದಾಗಿವೆ ಕನ್ನಡ ಪರ ಸಂಘಟನೆಗಳು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆತ್ತಲೇ ಇದೆ.

ಭರವಸೆ ನೀಡಿರುವ RRR ಚಿತ್ರತಂಡ!
'ಆರ್‌ಆರ್‌ಆರ್' ವಿರುದ್ಧ ಕೂಗು ಕೇಳಿ ಬರುತ್ತಿದ್ದ ಹಾಗೆ ಚಿತ್ರತಂಡ ಎಚ್ಚೆತ್ತು ಕೊಂಡಿದೆ. 'ಆರ್‌ಆರ್‌ಆರ್' ಕನ್ನಡ ಅವತರಣಿಕೆಯ ಪ್ರದರ್ಶನಗಳು ಹೆಚ್ಚು ಮಾಡುವಂತೆ ಹೇಳಿಕೊಂಡಿದೆ. ಕೆವಿಎನ್ ವಿತರಣೆ ಸಂಸ್ಥೆ ಅಧಿಕೃತವಾದ ಪ್ರಕಟಣೆಯನ್ನು ಹೊರಡಿಸಿತು. ಜೊತೆಗೆ ಮಾರ್ಚ್ 24ರಂದು ಕನ್ನಡ ಅವತರಣಿಕೆಯ ಪ್ರದರ್ಶನಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಬರವಸೆ ನೀಡಿದೆ.


Click it and Unblock the Notifications











