India
  For Quick Alerts
  ALLOW NOTIFICATIONS  
  For Daily Alerts

  SRK ಅಂದ್ರೆ ಶಿವಣ್ಣ ಒಬ್ಬರೇ: ಶಾರುಖ್ ಖಾನ್‌ಗೆ ಶಾಕ್ ಕೊಟ್ಟ ಕನ್ನಡಿಗರು!

  |

  ನಟ ಶಾರುಖ್ ಖಾನ್ ಈಗಾಗಲೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾಕೆಂದರೆ ಶಾರುಖ್ ಖಾನ್ ಮುಂದಿನ ಸಿನಿಮಾ ಕನ್ನಡದಲ್ಲಿ ಬರುತ್ತಿಲ್ಲ. ಆದರೆ ಬೇರೆ ಭಾಷೆಯಲ್ಲಿ ಕರ್ನಾಟಕದಲ್ಲಿ ರಿಲೀಸ್ ಆಗಲಿದೆ. ಹಾಗಾಗಿ ಈಗಲೂ ಕನ್ನಡವನ್ನು ಕಡೆಸಲಾಗುತ್ತಿದೆ ಎಂದು ಕನ್ನಡಿಗರು ರೊಚ್ಚಿಗೆದ್ದಿದ್ದಾರೆ.

  ಇದೇ ಬೆನ್ನಲ್ಲೇ ನಟ ಶಾರುಖ್ ಖಾನ್‌ಗೆ ಮತ್ತೊಂದು ತಲೆ ನೋವು ಎದುರಾಗಿದೆ. ಯಾಕೆಂದರೆ ಶಾರುಖ್ ಖಾನ್ ಹೆಸರನ್ನೇ ಬದಲಿ ಮಾಡುವ ಸಂದರ್ಭ ಹಾಗೆ ಇದೆ. ಹೌದು, ಶಾರುಖ್ ಖಾನ್‌ರನ್ನು SRK ಅಂತ ಕರೀತಾರೆ. ಆದರೆ ಕನ್ನಡಿಗರು ಇದನ್ನು ಬಿಲ್‌ಖುಲ್ ಒಪ್ಪುವುದಿಲ್ಲ.

  ಶಿವಣ್ಣಗೆ ಭಿನ್ನ ಕತೆ ಮಾಡಿಕೊಂಡಿರುವ ಭಟ್ಟರು: ಜನ ನೀರು ಕುಡಿದಾಗೆಲ್ಲ ಸಿನಿಮಾ ನೆನಪಾಗುತ್ತಂತೆ!ಶಿವಣ್ಣಗೆ ಭಿನ್ನ ಕತೆ ಮಾಡಿಕೊಂಡಿರುವ ಭಟ್ಟರು: ಜನ ನೀರು ಕುಡಿದಾಗೆಲ್ಲ ಸಿನಿಮಾ ನೆನಪಾಗುತ್ತಂತೆ!

  ಯಾಕೆಂದರೆ ಕನ್ನಡಿಗರ ಪಾಲಿಗೆ SRK ಎಂದರೆ ಕನ್ನಡದ ಸ್ಟಾರ್ ನಟ ಶಿವಣ್ಣ. ಈ ಚರ್ಚೆ ಈಗಾಗಲೇ ಶುರುವಾಗಿದ್ದು ಯಾಕೆ? ಎಲ್ಲಿ ಎನ್ನುವುದನ್ನು ಮುಂದೆ ಓದಿ...

  SRK ಅಂದ್ರೆ ಯಾರು?

  SRK ಅಂದ್ರೆ ಯಾರು?

  ಶಾರುಖ್ ಖಾನ್‌ರನ್ನು SRK ಎಂದು ಬಾಲಿವುಡ್‌ನಲ್ಲಿ ಕರೆಯಲಾಗುತ್ತದೆ. ಹಲವು ಕಡೆಗಳಲ್ಲೂ ಇದು ಚಾಲ್ತಿಯಲ್ಲಿ ಇದೆ. ಅದರೆ ಕನ್ನಡಿಗರು ಮತ್ತು ಕನ್ನಡ ಸಿನಿಮಾರಂಗ ಅಂತ ಬಂದಾಗ, SRK ಅಂದರೆ ಅದು ಶಾರುಖ್ ಖಾನ್ ಅಲ್ಲ. ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್. ಹೌದು ನಟ ಶಿವರಾಜ್ ಕುಮಾರ್ ಅವರನ್ನು SRK ಎಂದು ಪ್ರೀತಿಯಿಂದ ಎಲ್ಲರೂ ಕರೆಯುತ್ತಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟೊಕೊಂಡಿದೆ.

  ಅಮೆಜಾನ್ SRK ಅಭಿಯಾನ!

  ಅಮೆಜಾನ್ SRK ಅಭಿಯಾನ!

  ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋ ಟ್ವಿಟ್ಟರ್‌ನಲ್ಲಿ ಅಭಿಯಾನ ಒಂದನ್ನು ನಡೆಸಿದೆ. SRK ಅವರ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂದು ಪ್ರಶ್ನೆ ಕೇಳಿದೆ. ಇದಕ್ಕೆ ಬಂದ ಹೆಚ್ಚಿನ ಕಮೆಂಟ್‌ಗಳಲ್ಲಿ ಕನ್ನಡ ಸಿನಿಮಾದ ಹೆಸರುಗಳೇ ಇವೆ. ಅದು ಕೂಡ ನಟ ಶಿವರಾಜ್ ಕುಮಾರ್ ಸಿನಿಮಾಗಳ ಹೆಸರು. ಜನುಮದ ಜೋಡಿ, ಚಿಗುರಿದ ಕನಸು, ಆನಂದ್, ರಣರಂಗ, ಟಗರು, ಜೋಗಿ, ದೊರೆ ಹೀಗೆ ಸಾಕಷ್ಟು ಸಿನಿಮಾಗಳನ್ನು ಹೆಸರಿಸಲಾಗದೆ.

  SRK ಅಂದ್ರೆ ಒನ್ ಅಂಡ್ ಒನ್ಲೀ ಶಿವಣ್ಣ!

  SRK ಅಂದ್ರೆ ಒನ್ ಅಂಡ್ ಒನ್ಲೀ ಶಿವಣ್ಣ!

  ಅಷ್ಟಕ್ಕೂ ಅಮೆಜಾನ್ ಕೇಳಿದ್ದು ನಟ ಶಾರುಖ್ ಖಾನ್ ಸಿನಿಮಾಗಳ ಬಗ್ಗೆ. ಆದರೆ ಇದಕ್ಕೆ ಕಮೆಂಟ್ ಮಾಡಿದ ಕನ್ನಡಿಗರು, ನಮಗೆ SRK ಎಂದೆರೆ ಎಂದಿಗೂ ಶಿವರಾಜ್ ಕುಮಾರ್ ಅವರೇ ಎಂದು ಉತ್ತರ ಕೊಟ್ಟಿದ್ದಾರೆ. ಅಲ್ಲದೇ ಈ ಅಭಿಯಾನದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ಕನ್ನಡ ನಟ ಶಿವರಾಜ್‌ಕುಮಾರ್ ಅವರ ಸಿನಿಮಾಗಳೇ. ಶಾರುಖ್ ಖಾನ್ ಸಿನಿಮಾಗಳನ್ನು ಯಾರೋ ಕೆಲವರು ಮಾತ್ರವೇ ನಮೂದಿಸಿದ್ದಾರೆ. ಶಿವರಾಜ್ ಕುಮಾರ್ ಸಿನಿಮಾಗಳನ್ನು ಮೆಚ್ಚಿರುವವರ ಸಂಖ್ಯೆ ಹೆಚ್ಚಿದ್ದರೆ ಅಮೆಜಾನ್ ಇದನ್ನೇ ಪರಿಗಣಿಸಬೇಕಾಗುತ್ತದೆ.

  ಕನ್ನಡದಲ್ಲಿ ಇಲ್ಲ 'ಪಠಾಣ್'!

  ಕನ್ನಡದಲ್ಲಿ ಇಲ್ಲ 'ಪಠಾಣ್'!

  ನಟ ಶಾರುಖ್ ಖಾನ್ 'ಪಠಾಣ್' ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಬಳಿಕ, ಕನ್ನಡಿಗರು ಈ ಚಿತ್ರದ ವಿರುದ್ಧ ಗರಂ ಆಗದ್ದಾರೆ. ಕನ್ನಡದಲ್ಲಿ ಈ ಚಿತ್ರದ ರಿಲೀಸ್ ಯಾಕೆ ಇಲ್ಲ ಎಂದು ಕೇಳುತ್ತಿದ್ದಾರೆ. ಕನ್ನಡದಲ್ಲಿ ದೊಡ್ಡ ಮಾರ್ಕೆಟ್ ಸೃಷ್ಟಿ ಆಗಿದೆ. ಆದರೂ ಈ ಚಿತ್ರ ಕನ್ನಡವನ್ನು ಕಡೆಗಣಿಸಿದೆ. ಹಾಗಾಗಿ ಈ ಚಿತ್ರವನ್ನು ಕನ್ನಡಿಗರು ನೋಡುವುದಿಲ್ಲ. ಕರ್ನಾಟಕದಲ್ಲಿ ಈ ಚಿತ್ರದ ಬ್ಯುಸಿನೆಸ್ ಆಗುವುದಿಲ್ಲ ಎನ್ನುತ್ತಿದ್ದಾರೆ.

  English summary
  Kannadigas Troll Shah Rukh Khan, SRK Is Not Shah Rukh Khan, SRK Means Shiva Rajkumar, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X