ಆಮಿ, ಮಹೇಶ್ ಬಾಬು ಮಾಡಿದ ತಪ್ಪಿಗೆ ಕೋಪಗೊಂಡ ಕನ್ನಡಿಗರು
ಕರ್ನಾಟಕದಲ್ಲಿ ಎಲ್ಲ ಭಾಷೆಯ ಸಿನಿಮಾಗಳು ಓಡುತ್ತವೆ. ಬೆಂಗಳೂರು ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಎಲ್ಲ ಭಾಷೆಯ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಒದಗಿಸಿಕೊಡುತ್ತದೆ.
ಒಳ್ಳೆಯ ಸಿನಿಮಾ ಯಾವುದೇ ಭಾಷೆಯಲ್ಲಿ ಬಂದಿದ್ದರೂ ನೋಡುವ ಒಳ್ಳೆಯ ಹೃದಯ ಕನ್ನಡಿಗರಿಗೆ ಇದೆ. ಆದರೆ, ಇದನ್ನು ಮರೆತಿರುವ ಬೇರೆ ಭಾಷೆಯ ದೊಡ್ಡ ದೊಡ್ಡ ನಟ, ನಟಿಯರು ಕೆಲವು ಬಾರಿ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ.
ಪದೇ ಪದೇ ಈ ರೀತಿಯ ಘಟನೆಗಳು ತಿಳಿದೊ ತಿಳಿಯದೆಯೋ ನಡೆಯುತ್ತಿದೆ. ಸದ್ಯ ನಟಿ ಆಮಿ ಜಾಕ್ಸನ್ ಹಾಗೂ ನಟ ಮಹೇಶ್ ಬಾಬು ಮಾಡಿರುವ ಟ್ವೀಟ್ ಗಳು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಮುಂದೆ ಓದಿ.....

ಸ್ಯಾಂಡಲ್ ವುಡ್ ಅನ್ನು ಮರೆತ ಆಮಿ
ನಟಿ ಆಮಿ ಜಾಕ್ಸನ್ 'ದಿ ವಿಲನ್' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಈ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಅವರು 'ಸ್ಯಾಂಡಲ್ ವುಡ್' ಎಂದು ಬರೆಯುವ ಬದಲು 'ಕಾಲಿವುಡ್' ಎಂದು ಬರೆದುಕೊಂಡಿದ್ದಾರೆ.

ಆಮಿ ಜಾಕ್ಸನ್ ಟ್ವೀಟ್
ಇಂದು ವಿಶೇಷ ದಿನ. ಇವತ್ತು 'ದಿ ವಿಲನ್' ಚಿತ್ರತಂಡ ಬಿಡುಗಡೆಯ ಸಂಭ್ರಮದಲ್ಲಿ ಇದೆ. 'ಕಾಲಿವುಡ್' ನಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದ ನಿರ್ದೇಶಕ ಪ್ರೇಮ್ ಅವರಿಗೆ ಧನ್ಯವಾದ ಹೇಳುತ್ತಿದ್ದೇನೆ.'' ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಮರೆತ ಮಹೇಶ್ ಬಾಬು
ದಸರಾ ಹಬ್ಬಕ್ಕೆ ತೆಲುಗು ನಟ ಮಹೇಶ್ ಬಾಬು ಶುಭಾಶಯ ಕೋರಿದ್ದಾರೆ. ಹಬ್ಬದ ಶುಭಾಶಯವನ್ನು ಟ್ವೀಟ್ ಮಾಡಿದ ಅವರು ಕನ್ನಡ ಬಿಟ್ಟು ಬೇರೆಲ್ಲ ಭಾಷೆಗಳಲ್ಲಿ ಬರೆದುಕೊಂಡಿದ್ದರು. ಈ ಹಿಂದೆ 'ಭರತ್ ಅನೇ ನೇನು' ಸಿನಿಮಾದ ವೇಳೆ ಕೂಡ ಮಹೇಶ್ ಇದೇ ರೀತಿ ಮಾಡಿದ್ದರು.

ಕೊನೆಗೆ ಬದಲಾಯಿಸಿದರು
ಕನ್ನಡವನ್ನು ಕಡೆಗಣಿಸಿದ ಆಮಿ ಜಾಕ್ಸನ್ ಹಾಗೂ ಮಹೇಶ್ ಬಾಬು ವಿರುದ್ಧ ಕನ್ನಡಿಗರು ಅಸಮಾಧಾನಗೊಂಡಿದ್ದರು. ಈ ಬಗ್ಗೆ ಕಮೆಂಟ್ಸ್ ಗಳು ಬಂದ ನಂತರ ಕೊನೆಗೆ ಇಬ್ಬರೂ ತಮ್ಮ ಟ್ವೀಟ್ ಗಳಲ್ಲಿನ ತಪ್ಪುಗಳನ್ನು ಬದಲಿಸಿದರು.


Click it and Unblock the Notifications