''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ' ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.?
Recommended Video

ಆರ್.ಕೆ.ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನವೇ 'ಮಾಲ್ಗುಡಿ ಡೇಸ್'. ಇದೇ ಸಂಕಲನವನ್ನು ಆಧಾರಿಸಿ ಕನ್ನಡ ನಟ, ನಿರ್ದೇಶಕ ಶಂಕರ್ ನಾಗ್ ಟಿವಿ ಸೀರೀಸ್ ನಿರ್ದೇಶಿಸಿದರು.
1986 ರಲ್ಲಿ ಟಿ.ಎಸ್.ನರಸಿಂಹನ್ ನಿರ್ಮಾಣದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ 'ಮಾಲ್ಗುಡಿ ಡೇಸ್' ಸರಣಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಹಿಂದಿ ಭಾಷೆಯಲ್ಲಿ ತಯಾರಾಗಿರುವ 'ಮಾಲ್ಗುಡಿ ಡೇಸ್' ಧಾರಾವಾಹಿ ಇದೀಗ ಕನ್ನಡಕ್ಕೂ ಬರಲಿ ಎಂಬ ಕೂಗು ಕೇಳಿ ಬರುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ. ಹಲವು ಖ್ಯಾತನಾಮರು ಡಬ್ಬಿಂಗ್ ವಿರುದ್ಧ ಇರುವ ಕಾರಣ, ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ಸಿನಿಮಾ/ಕಾರ್ಯಕ್ರಮಗಳಿಗೆ ಅಷ್ಟು ಪ್ರೋತ್ಸಾಹ ಸಿಗುತ್ತಿಲ್ಲ.
ವಿರೋಧದ ನಡುವೆಯೂ 'ಧೀರ', 'ವೇಗ ಮತ್ತು ಉದ್ವೇಗ', 'ಸತ್ಯದೇವ್ ಐಪಿಎಸ್' ಸೇರಿದಂತೆ ಹಲವು ಡಬ್ಬಿಂಗ್ ಸಿನಿಮಾಗಳು ಕನ್ನಡದಲ್ಲಿ ತೆರೆಕಂಡಿದೆ. ಇದೀಗ ಪ್ರಖ್ಯಾತ ಟಿವಿ ಸೀರೀಸ್ 'ಮಾಲ್ಗುಡಿ ಡೇಸ್' ಕೂಡ ಕನ್ನಡಕ್ಕೆ ಡಬ್ ಆಗಿ ಬರಲಿ ಎಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ಮುಂದೆ ಓದಿರಿ...
ನಾಳೆ ಅಭಿಯಾನ
''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ'' ಎಂಬ ಅಭಿಯಾನ ನಾಳೆ (ಆಗಸ್ಟ್ 8) ಸಂಜೆ 6 ರಿಂದ 8 ರವರೆಗೆ ಟ್ವಿಟ್ಟರ್ ನಲ್ಲಿ ನಡೆಯಲಿದೆ. #MalgudiDaysInKannada ಬಳಸಿ, ನಿಮ್ಮ ಬೆಂಬಲ ಇದ್ದರೆ ಸೂಚಿಸಿ ಟ್ವೀಟ್ ಮಾಡಿ...
ಕನ್ನಡಿಗರಿಗೆ ಭಾಗ್ಯ ಸಿಗಲಿಲ್ಲ.!
''ಶಂಕರ್ ನಾಗ್ ನಿರ್ದೇಶಿಸಿದ 'ಮಾಲ್ಗುಡಿ ಡೇಸ್' ಜಗತ್ತಿನ ಎಷ್ಟೋ ಭಾಷೆಗಳಿಗೆ ಡಬ್ ಆಗಿ ಪ್ರಸಾರ ಆಗಿತ್ತು. ಆದ್ರೆ, ಕನ್ನಡಿಗರಿಗೆ ಕನ್ನಡದಲ್ಲಿ ನೋಡುವ ಭಾಗ್ಯ ಮಾತ್ರ ಸಿಗಲಿಲ್ಲ. ಹೀಗಾಗಿ, 'ಮಾಲ್ಗುಡಿ ಡೇಸ್' ಕನ್ನಡಕ್ಕೆ ಬರಲಿ'' ಎಂಬುದು ಕನ್ನಡಿಗರ ಆಗ್ರಹ.
ಕನ್ನಡಿಗರ ದುರಾದೃಷ್ಟ
''ಭಾರತದ ಮಹಾನ್ ಧಾರಾವಾಹಿಗಳಲ್ಲಿ 'ಮಾಲ್ಗುಡಿ ಡೇಸ್' ಒಂದು ಅನ್ನೋದಕ್ಕೆ ಬಹಳ ಹೆಮ್ಮೆ ಆಗುತ್ತೆ. ಏಕೆಂದರೆ, ಇದು ಕನ್ನಡಿಗರು ನಿರ್ಮಿಸಿ ನಟಿಸಿದ ಧಾರಾವಾಹಿ. ದುರಾದೃಷ್ಟವೆಂದರೆ, ಕನ್ನಡದಲ್ಲಿ ನೋಡುವ ಭಾಗ್ಯ ಕನ್ನಡಿಗರೇ ಕಳೆದುಕೊಂಡರು. ಈ ಬಾರಿ ಹಾಗಾಗಬಾರದು'' ಅಂತಿದ್ದಾರೆ ಕನ್ನಡಿಗರು.
ಇಷ್ಟ ಪಟ್ಟು ವೀಕ್ಷಿಸುತ್ತೇವೆ
''ಶಂಕರ್ ನಾಗ್ ನಿರ್ದೇಶಿಸಿದ್ದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ 'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಬಂದರೆ ಇಷ್ಟ ಪಟ್ಟು ವೀಕ್ಷಿಸುವ ಕನ್ನಡಿಗರಲ್ಲಿ ನಾನೂ ಒಬ್ಬಳು'' ಎಂದು ಟ್ವೀಟ್ ಮಾಡಿದ್ದಾರೆ ಕನ್ನಡಿಗರು. ಈ ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.? ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ...


Click it and Unblock the Notifications











