ನ್ಯಾಷನಲ್ ಸಿನಿ ಅಕಾಡೆಮಿ ಪ್ರಶಸ್ತಿ ಘೋಷಣೆ; 'ಕಾಂತಾರ- 1' ಚಿತ್ರಕ್ಕೆ ಸಿಂಹಪಾಲು

ಕಳೆದ ವರ್ಷ ಬಿಡುಗಡೆಯಾಗಿದ್ದ ಭಾರತೀಯ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಇಂಡಿಯನ್ ನ್ಯಾಷನಲ್ ಸಿನಿ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿ ಒಟ್ಟು 12 ಭಾಷೆಗಳ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಚಿತ್ರಗಳಲ್ಲಿ ಬಹುತೇಕ ಪ್ರಶಸ್ತಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ-1' ಸಿನಿಮಾ ಪಾಲಾಗಿದೆ.

ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ರಿಷಬ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ. 'ಕಾಂತಾರ- 1' ಚಿತ್ರದ ನಟನೆಗಾಗಿ ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಅತ್ಯುತ್ತಮ ಸಿನಿಮಾ ನಿರ್ಮಾಣಕ್ಕೆ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಯುವರಾಜ್‌ಕುಮಾರ್(ಎಕ್ಕ), ಸುದೀಪ್(ಮಾರ್ಕ್), ನವೀನ್ ಶಂಕರ್(ನೋಡಿದವರು ಏನಂತಾರೆ), ದುಷ್ಯಂತ್(ಗತವೈಭವ), ಪ್ರಣಾಮ್ ದೇವರಾಜ್(S/o ಮುತ್ತಣ್ಣ) ಹೆಸರುಗಳು ನಾಮಿನೇಟ್ ಆಗಿತ್ತು. ಅಂತಿಮವಾಗಿ ರಿಷಬ್ ಪ್ರಶಸ್ತಿ ಗೆದ್ದಿದ್ದಾರೆ.

Kantara-1 Dominates INCA Awards Rishabh Shetty Wins Best Actor and Director

ಏಪ್ರಿಲ್ 15 ಹಾಗೂ 16ರಂದು ಮುಂಬೈನಲ್ಲಿ ನ್ಯಾಷನಲ್ ಸಿನಿ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ತೆಲುಗು ಚಿತ್ರರಂಗದಲ್ಲಿ 'ತಂಡೇಲ್' ಚಿತ್ರಕ್ಕಾಗಿ ನಾಗಚೈತನ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 'ದಿ ಗರ್ಲ್‌ಫ್ರೆಂಡ್' ಚಿತ್ರದ ನಟನೆಗಾಗಿ ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೇ ಚಿತ್ರಕ್ಕಾಗಿ ತೆಲಂಗಾಣ ರಾಜ್ಯ ಸರ್ಕಾರ ನೀಡುವ ಗದ್ದರ್ ಪ್ರಶಸ್ತಿ ಕೊಡಗಿನ ಚೆಲುವೆಗೆ ಸಿಕ್ಕಿತ್ತು.

ತಮಿಳಿನಲ್ಲಿ 'ಕಾಂತ' ಚಿತ್ರದ ನಟನೆಗಾಗಿ ದುಲ್ಕರ್ ಸಲ್ಮಾನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 'ಟೂರಿಸ್ಟ್ ಫ್ಯಾಮಿಲಿ' ಚಿತ್ರಕ್ಕಾಗಿ ಸಿಮ್ರನ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾರಿ ಸೆಲ್ವರಾಜ್ ಅತ್ಯುತ್ತಮ ನಿರ್ದೇಶಕ(ಬಿಸಾನ್) ಹಾಗೂ 'ಟೂರಿಸ್ಟ್ ಫ್ಯಾಮಿಲಿ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ.

ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್(ಧುರಂಧರ್) ಅತ್ಯುತ್ತಮ ನಟ ನ್ಯಾಷನಲ್ ಸಿನಿ ಅಕಾಡೆಮಿ ಪ್ರಶಸ್ತಿ ಪಡೆಯುವುದು ಖಚಿತವಾಗಿದೆ. 'ಹಕ್' ಚಿತ್ರಕ್ಕಾಗಿ ಯಾಮಿ ಗೌತಮ್ ಅತ್ಯುತ್ತಮ ನಟಿ, ಆದಿತ್ಯಧರ್ ಅವರಿಗೆ ಅತ್ಯುತ್ತಮ ನಿರ್ದೇಶಕ(ಧುರಂಧರ್) ಪ್ರಶಸ್ತಿ ಪ್ರಕಟವಾಗಿದೆ. 'ಛಾವ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ.

More from Filmibeat

Read more about: award rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X