8 ಭಾಷೆಗಳಲ್ಲಿ 'ಕಾಂತಾರ ಚಾಪ್ಟರ್'-1 ಸಿನಿಮಾ ಬಿಡುಗಡೆಗೆ ಸಜ್ಜು; ಹೊಸ ದಾಖಲೆ

ವರ್ಷದ ಬಹುನಿರೀಕ್ಷಿತ 'ಕಾಂತಾರ-1' ಸಿನಿಮಾ ತೆರೆಗಪ್ಪಳಿಸಲು 22 ದಿನಗಳು ಮಾತ್ರ ಬಾಕಿಯಿದೆ. ಆದರೂ ಚಿತ್ರತಂಡ ಪ್ರಚಾರ ಆರಂಭಿಸಿಲ್ಲ. ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಯಾವ ಭಾಗದ ವಿತರಣೆ ಹಕ್ಕು ಯಾರಿಗೆ ಮಾರಾಟವಾಗಿ ಎನ್ನುವ ಬಗ್ಗೆ ಚಿತ್ರತಂಡ ಮಾಹಿತಿ ನೀಡುತ್ತಿದೆ. ಇನ್ನು ಒಂದಲ್ಲ ಎರಡಲ್ಲ 8 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗುವುದು ಸರ್ವೇ ಸಾಧಾರಣ ಎನ್ನುವಂತಾಗಿದೆ. ಕೆಲವರು ಸುಖಾ ಸುಮ್ಮನೆ ಅಷ್ಟು ಭಾಷೆಯಲ್ಲಿ ನಮ್ಮ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ 'ಕಾಂತಾರ' ಸಿನಿಮಾ ಕನ್ನಡದಲ್ಲಿ ಮಾತ್ರ ಮೊದಲಿಗೆ ರಿಲೀಸ್ ಆಗಿತ್ತು, ಬಳಿಕ ಒತ್ತಾಯದ ಮೇರೆಗೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿತ್ತು. ಎಲ್ಲಾ ಭಾಷೆಗಳಲ್ಲಿ ಸಿನಿಮಾ ಹಿಟ್ ಆಗಿತ್ತು.

Kantara-1 Gears Up for Grand Global Release in 8 Languages Fans Await Promotions

ಇಂಗ್ಲೀಷ್ ಹಾಗೂ ತುಳು ಭಾಷೆಗೂ ಕೂಡ 'ಕಾಂತಾರ' ಸಿನಿಮಾ ಡಬ್ ಆಗಿದ್ದು ವಿಶೇಷ. ಇಂಗ್ಲೀಷ್ ವರ್ಷನ್ ಓಟಿಟಿಗೆ ಬಂದಿತ್ತು. ಅಂದಹಾಗೆ ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಪ್ರೀಕ್ವೆಲ್ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ 'ಕಾಂತಾರ' ಸಿನಿಮಾ ಹಿಟ್ ಆಗಿ ಸಾಕಷ್ಟು ಜನರನ್ನು ತಲುಪಿದೆ. ಅವರೆಲ್ಲರೂ ಸೀಕ್ವೆಲ್ ನೋಡಲು ಕಾಯುವಂತಾಗಿದೆ. ಹಾಗಾಗಿ ಬಹಳ ದೊಡ್ಡಮಟ್ಟದಲ್ಲೇ ಈ ಬಾರಿ ಸಿನಿಮಾ ತೆರೆಗಪ್ಪಳಿಸಲಿದೆ.

'ಕಾಂತಾರ' ಚಿತ್ರವನ್ನು ಇಟಾಲಿಯನ್​ ಹಾಗೂ ಸ್ಪ್ಯಾನಿಶ್​ ಭಾಷೆಗಳಿಗೆ ಡಬ್ ಮಾಡಿ ಯೂರೋಪ್ ದೇಶಗಳಲ್ಲಿ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಆದರೆ ಬಳಿಕ ಆ ಬಗ್ಗೆ ಮಾಹಿತಿ ಸಿಗಲಿಲ್ಲ. ಆದರೆ ಪ್ರೀಕ್ವೆಲ್ ಅನ್ನು ಏಕಕಾಲಕ್ಕೆ ಸ್ಪ್ಯಾನಿಶ್ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಓವರ್‌ಸೀಸ್‌ನಲ್ಲಿ Phars Film Co LLC ಸಂಸ್ಥೆ 'ಕಾಂತಾರ-1' ಸಿನಿಮಾ ವಿತರಣೆ ಮಾಡಲಿದೆ.

Kantara-1 Gears Up for Grand Global Release in 8 Languages Fans Await Promotions

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬೆಂಗಾಲಿ ಜೊತೆಗೆ ಇಂಗ್ಲೀಷ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ ಏಕಕಾಲಕ್ಕೆ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ. 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುವುದು ಖಚಿತ. ಇಂಗ್ಲೀಷ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ದಕ್ಷಿಣ ಅಮೆರಿಕಾದಲ್ಲಿ ಸ್ಪ್ಯಾನಿಶ್ ವರ್ಷನ್ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ.

ಈ ಬಾರಿ ಉತ್ತರ ಅಮೆರಿಕಾ, ಮಧ್ಯಪ್ರಾಚ್ಯ, ಯೂರೋಪ್, ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಗ್ನೇಯ ಏಷ್ಯಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಏಕಕಾಲಕ್ಕೆ 'ಕಾಂತಾರ-1' ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಸದ್ಯಕ್ಕೆ ಚೀನಾಗೆ ಸಿನಿಮಾ ಕೊಂಡೊಯ್ಯುವ ಬಗ್ಗೆ ತಂಡ ಯೋಚಿಸಿಲ್ಲ. ಇತ್ತೀಚೆಗೆ ಚೀನಾ ಹಾಗೂ ಜಪಾನ್ ದೇಶಗಳಲ್ಲಿ ದಕ್ಷಿಣ ಭಾರತ ಸಿನಿಮಾಗಳು ಬಿಡುಗಡೆ ಆಗಿ ಸದ್ದು ಮಾಡ್ತಿವೆ.

20 ದಿನ ಬಾಕಿಯಿದ್ದರೂ ಚಿತ್ರತಂಡ ಪ್ರಮೋಷನ್ ಯಾಕೆ ಶುರು ಮಾಡಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಟೀಸರ್, ಸಾಂಗ್, ಟ್ರೈಲರ್ ಯಾವುದು ಕೂಡ ಈವರೆಗೆ ಬಿಡುಗಡೆ ಆಗಿಲ್ಲ. ಸಿನಿಮಾ ಪ್ರಚಾರ ಮಾಡ್ತಾರಾ? ಇಲ್ವಾ? ಎಂದು ತಲೆ ಕೆಡಿಸಿಕೊಂಡಿದ್ದಾರೆ. 'KGF'-2 ಸಿನಿಮಾ ವಿಚಾರದಲ್ಲಿ ಕೂಡ ಹೊಂಬಾಳೆ ಇದೇ ಐಡಿಯಾ ಮಾಡಿತ್ತು. ಮೊದಲ ಭಾಗಕ್ಕೆ ಭಾರೀ ಪ್ರಚಾರ ಮಾಡಿದ್ದ ಸಿನಿಮಾ ಸೀಕ್ವೆಲ್‌ಗೆ ಹೆಚ್ಚು ಪ್ರಚಾರ ಮಾಡಿರಲಿಲ್ಲ. ಆದರೆ ಜನ ಸಿನಿಮಾ ಗೆಲ್ಲಿಸಿದ್ದರು.

ನಿರೀಕ್ಷೆ ಭಾರಕ್ಕೆ ಕೆಲ ಸಿನಿಮಾಗಳು ಇತ್ತೀಚೆಗೆ ಸೋಲುತ್ತಿವೆ. ಹಾಗಾಗಿ ಹೆಚ್ಚು ಹೇಳುವುದು ಬೇಡ, ಪ್ರೇಕ್ಷಕರೇ ಬಂದು ಸಿನಿಮಾ ನೋಡಿ ನಿರ್ಧರಿಸಲಿ ಎಂದು ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದಂತೆ ಕಾಣ್ತಿದೆ. ರಿಷಬ್ ಜೊತೆ ಈ ಬಾರಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ನಟಿಸಿದ್ದಾರೆ. ಇನ್ನುಳಿದ ತಾರಾಗಣದ ಬಗ್ಗೆಯೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಟ್ರೈಲರ್ ಬಿಡುಗಡೆಯಾದರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

More from Filmibeat

English summary
Rishab Shetty’s Kantara-1 to Hit Screens Globally in 8 Languages, Promotions Yet to Begin
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X