'ಕಾಂತಾರ 1' ವಿಸ್ಮಯಕ್ಕೆ ಬೆರಗಾದ ಸುಮಲತಾ ಅಂಬರೀಶ್, ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಎಂದ ಹಿರಿಯ ನಟಿ!

ಬೆಳ್ಳಿತೆರೆಯಲ್ಲಿ ''ಕಾಂತಾರ-ಚಾಪ್ಟರ್ 1'' ಧಗಧಗಿಸುತ್ತಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯಲ್ಲಿ ಕೂಡ ಕಾಂತಾರದ ಮೆರವಣಿಗೆ ಸಾಂಗವಾಗಿ ನಡೆಯುತ್ತಿದೆ. ದೈವದ ರೌದ್ರ ನರ್ತನಕ್ಕೆ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುತ್ತಿದೆ. ಇನ್ನು ''ಕಾಂತಾರ-ಚಾಪ್ಟರ್ 1'' ಕೇವಲ ಪ್ರೇಕ್ಷಕರ ಹೃದಯವನ್ನು ಮಾತ್ರ ಗೆದ್ದಿಲ್ಲ. ಬದಲಿಗೆ ಕನ್ನಡ ಚಿತ್ರರಂಗವೂ ಒಳಗೊಂಡು ಬೇರೆ ಬೇರೆ ಭಾಷೆಯ ಸೂಪರ್ ಸ್ಟಾರ್‌ಗಳ ಹೃದಯವನ್ನು ಕೂಡ ''ಕಾಂತಾರ''ದ ಮೊದಲ ಅಧ್ಯಾಯ ಗೆದ್ದಿದೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ ಪ್ರಭಾಸ್.. ಸಂದೀಪ್ ರೆಡ್ಡಿ ವಂಗಾ.. ರಾಮ್ ಗೋಪಾಲ್ ವರ್ಮಾ.. ಸುನಿಲ್ ಶೆಟ್ಟಿ ಸೇರಿ ಹಲವರು ಕಾಂತಾರ ಎಂಬ ವಿಸ್ಮಯ ಕಂಡು ಬೆರಗಾಗಿದ್ದಾರೆ. ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಿರ್ದೇಶಕ ಮತ್ತು ಚಿತ್ರದ ನಾಯಕ ರಿಷಬ್ ಶೆಟ್ಟಿ ಅವರ ಧೈರ್ಯ ಶ್ರದ್ದೆ ಮತ್ತು ಭಕ್ತಿಯನ್ನು ಕೊಂಡಾಡಿದ್ದಾರೆ.

Kantara 1 Makes History Sumalatha Ambareesh Declares Film A Special Place in Kannada Cinema

ಈ ಸಾಲಿಗೆ ಈಗ ಮಾಜಿ ಸಂಸದೆ ಮತ್ತು ಕನ್ನಡ ಚಿತ್ರರಂಗದ ಹಿರಿಯ ನಟಿ ಸುಮಲತಾ ಅಂಬರೀಷ್ ಕೂಡ ಸೇರಿಕೊಂಡಿದ್ದಾರೆ. ಹೌದು, ಸುಮಲತಾ ಅಂಬರೀಷ್ ''ಕಾಂತಾರ-1'' ಚಿತ್ರವನ್ನು ಬೆಳ್ಳಿಪರದೆಯ ಮೇಲೆ ಕಣ್ತುಂಬಿಕೊಂಡಿದ್ದಾರೆ. ಬೆಳಕಿನ ದರ್ಶನದಿಂದ ಬೆರಗಾಗಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುಮಲತಾ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ''ಕಾಂತಾರ'' ಚಿತ್ರಕ್ಕೆ ವಿಶೇಷ ಸ್ಥಾನ ಸಿಗಲಿದೆ ಎಂದು ಹೇಳಿದ್ದಾರೆ. ಕಾಂತಾರ-ಚಾಪ್ಟರ್ 1 ಚಿತ್ರದ ಕುರಿತು ಸುಮಲತಾ ಅಂಬರೀಶ್ ಅವರು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ಕಾಂತಾರ ಚಿತ್ರದ ಕುರಿತು ಸುಮಲತಾ ಅಂಬರೀಷ್ ಮನದ ಮಾತು

ಆತ್ಮೀಯ ರಿಷಭ್ ಅವರೇ, ನಿನ್ನೆ ಕಾಂತಾರ 1 ನೋಡಿದೆ! ಕಾಂತಾರದ ಅದ್ಭುತ ಯಶಸ್ಸಿಗೆ ಅಭಿನಂದನೆಗಳು. ನಿಮ್ಮ ನಿರ್ದೇಶನ ಹಾಗೂ ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ ಪರಿ ನನ್ನನ್ನು ಮೂಕವಿಸ್ಮಿತಗೊಳಿಸಿದೆ. ಈ ದೃಶ್ಯ ವೈಭವವನ್ನು ತೆರೆಯ ಮುಂದೆ ತರಲು ಹಾಕಿದ ಪರಿಶ್ರಮ ಹಾಗೂ ಕರ್ನಾಟಕದ ಜಾನಪದ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸೌಂದರ್ಯವನ್ನು ಪ್ರದರ್ಶಿಸಲು ನಿಮ್ಮ ಶ್ರಮವನ್ನು ಅತ್ಯಂತ ಗೌರವ ಹಾಗೂ ಹೆಮ್ಮೆಯಿಂದ ಶ್ಲಾಘಿಸುತ್ತೇನೆ.

ಅಕ್ಷರಶಃ ಇದೊಂದು ಸಿನಿಮಾಟಿಕ್ ಮಾಸ್ಟರ್‌ಪೀಸ್‌! ಕಾಂತಾರ -1 ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕಲೆಯ ಬಗ್ಗೆ ನಿಮಗಿರುವ ಉತ್ಸಾಹ ಮತ್ತು ಶ್ರದ್ಧೆ ಯುವ ಕಲಾವಿದರು ಹಾಗೂ ಚಿತ್ರರಂಗಕ್ಕೆ ಸ್ಫೂರ್ತಿಯಾಗಿದೆ.

Kantara 1 Makes History Sumalatha Ambareesh Declares Film A Special Place in Kannada Cinema

ಇಡೀ ಕಾಂತಾರ ತಂಡವು ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಂಸೆಗೆ ಅರ್ಹವಾಗಿದೆ. ಕನ್ನಡ ಚಿತ್ರರಂಗದ ಪಯಣಕ್ಕೆ ಹೊಸ ಆಯಾಮವನ್ನು ಹಾಕಿಕೊಟ್ಟಿರುವ ಈ ದಂತಕಥೆ ಕನ್ನಡ ಚಿತ್ರರಂಗದ ಇತಿಹಾಸ ಪುಟದಲ್ಲಿ ವಿಶೇಷ ಸ್ಥಾನ ಪಡೆಯಲಿದೆ.

ನಮ್ಮ ಚಿತ್ರರಂಗಕ್ಕೆ ವಿಶ್ವದಾದ್ಯಂತ ಗೌರವ ಮತ್ತು ಕೀರ್ತಿಯನ್ನು ತಂದಿರುವ ನಿಮ್ಮ ಮುಂದಿನ ಎಲ್ಲಾ ಯೋಜನೆಗಳು ಇನ್ನಷ್ಟು ಯಶಸ್ಸನ್ನು ತಂದುಕೊಡಲಿ ಎಂದು ಶುಭ ಹಾರೈಸುವೆ.

ಹೀಗೆ ''ಕಾಂತಾರ - ಚಾಪ್ಟರ್ 1'' ಚಿತ್ರವನ್ನು ಸುಮಲತಾ ಅಂಬರೀಷ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬಣ್ಣಿಸಿದ್ದಾರೆ. ಇನ್ನುಳಿದಂತೆ ಸದ್ಯ ''ಕಾಂತಾರ-ಚಾಪ್ಟರ್ 1'' 500 ಕೋಟಿಯ ಗಡಿಯನ್ನು ಬಾಕ್ಸಾಫೀಸ್‌ನಲ್ಲಿ ದಾಟಿದೆ. ಚಿತ್ರ ನಿರ್ಮಾಣ ಸಂಸ್ಥೆಯಾದ ''ಹೊಂಬಾಳೆ'' ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಒಂದು ಸಾವಿರ ಈ ಚಿತ್ರ ಅನಾಯಾಸವಾಗಿ ಗಳಿಸುತ್ತೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಈ ಮಾತು ನಿಜಾ ಆಗುತ್ತಾ ? ಎನ್ನುವುದನ್ನುಸದ್ಯ ಕಾದು ನೋಡಬೇಕಿದೆ.

More from Filmibeat

English summary
Kantara Chapter 1 continues its historic run! Get the inside scoop as Sumalatha Ambareesh lauds Rishab Shetty's film for its unparalleled contribution to Kannada cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X