Kantara- 1 Premiere: ಇವತ್ತೇ 'ಕಾಂತಾರ- 1' ಹವಾ ಶುರು; ಎಲ್ಲೆಲ್ಲಿ ಶೋ, ಇಲ್ಲಿದೆ ಮಾಹಿತಿ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳು ಕನ್ಫರ್ಮ್ ಆಗಿದೆ. ಒಂದು ದಿನ ಮೊದಲೇ ಸಿನಿಮಾ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗುತ್ತಿದೆ. ಕೆಲವೇ ಆಯ್ದ ಚಿತ್ರಮಂದಿರಗಳಲ್ಲಿ ಕೊನೆ ಕ್ಷಣದಲ್ಲಿ ಸ್ಪೆಷಲ್ ಶೋಗಳನ್ನು ಆಯೋಜಿಸಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

ಬುಕ್‌ಮೈ ಶೋನಲ್ಲಿ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಶುರು ಮಾಡಿದ್ದಾರೆ. ಪ್ರೀಮಿಯರ್ ಶೋ ಇರಲ್ಲ ಎಂದು ಭಾವಿಸಿ ನಾಳೆ ಬೆಳಗ್ಗೆ 6 ಗಂಟೆಗೆ ಸಾಕಷ್ಟು ಜನ ಟಿಕೆಟ್ ಬುಕ್ ಮಾಡಿದ್ದರು. ಅಚ್ಚರಿ ಎನ್ನುವಂತೆ ಇಂದು ಸಂಜೆ 6.45ಕ್ಕೆ ಶೋಗಳು ಕೆಲವೆಡೆ ಆಯೋಜಿಸಲಾಗಿದೆ. ಈಗಲೇ ನೀವು ಟಿಕೆಟ್ ಬುಕ್ ಮಾಡಿ ಸಂಜೆ ಸಿನಿಮಾ ವೀಕ್ಷಿಸಬಹುದು.

Kantara-1 Premiere Shows Begin Today Evening Tickets Selling Fast Across Karnataka

ಬನ್ನೇರುಘಟ್ಟ ರಸ್ತೆ ವೇಗ ಸಿಟಿ ಮಾಲ್, ಅಗರದ ತಿರುಮಲ, ರಾಜಾಜಿ ನಗರದ ಒರಾಯನ್ ಮಾಲ್, ಕೋರಮಂಗಲದ ನೆಕ್ಸಸ್ ಮಾಲ್, ವೈಟ್‌ಫೀಲ್ ವಿಆರ್ ಮಾಲ್, ಯಲಹಂಕದ ಗೆಲರಿಯಾ ಮಾಲ್, ಮಾಗಡಿ ರಸ್ತೆಯ ಜಿಟಿ ಮಾಲ್ ಇನ್ನು ಗೋಪಾಲನ್ ಮಾಲ್ ಸೇರಿ ಹಲವು ಕಡೆಗಳಲ್ಲಿ ಪ್ರೀಮಿಯರ್‌ ಶೋಗಳು ಏರ್ಪಡಿಸಲಾಗಿದೆ.

ಸಂಜೆ 6. 45 ಹಾಗೂ 7 ಗಂಟೆಗೆ ಕೆಲವೆಡೆ ಶೋಗಳು ಇದ್ದು ಬಳಿಕ 10 ಗಂಟೆಗೆ ಇನ್ನು ಕೆಲವು ಶೋಗಳನ್ನು ನಿಗದಿ ಪಡಿಸಲಾಗಿದೆ. ಪ್ರೀಮಿಯರ್ ಶೋಗಳಿಗೆ ಕೂಡ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಹಲವು ಶೋಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿದ್ದು ಹೌಸ್‌ಫುಲ್ ಶೋಗಳು ಪಕ್ಕಾ ಎನ್ನುವಂತಾಗಿದೆ.

ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಭಾಗಗಳಲ್ಲಿ ಪ್ರೀಮಿಯರ್ ಶೋಗಳು ನಡೆಯಲಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ 'ಕೆಜಿಎಫ್- 2' ಚಿತ್ರಕ್ಕಿಂತ 'ಕಾಂತಾರ- 1' ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿದೆ. ಸಿನಿಮಾ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ಅಂದಾಜಿದೆ. ಮೊದಲ ದಿನ ಕರ್ನಾಟಕದಲ್ಲೇ ಸಿನಿಮಾ 30 ಕೋಟಿ ರೂ. ಬಾಚುವ ಸುಳಿವು ಸಿಗುತ್ತಿದೆ.

ಆಸ್ಟ್ರೇಲಿಯಾ, ಅಮೇರಿಕಾ, ಜರ್ಮನಿ ಸೇರಿದಂತೆ 30 ದೇಶಗಳಲ್ಲಿ 'ಕಾಂತಾರ'-1 ಸಿನಿಮಾ ಬಿಡುಗಡೆ ಆಗುತ್ತಿದೆ. ಮೊದಲ ದಿನ 100 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಗೆದ್ದು ಬೀಗುವ ಸಾಧ್ಯತೆಯಿದೆ. ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಬಹುಕೇತ ಕನ್ನಡ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷ.

3 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ 'ಕಾಂತಾರ' ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಅಂದಾಜು 15 ಕೋಟಿ ರೂ. ಬಜೆಟ್ ಸಿನಿಮಾ 30 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿರುವ ಅಂದಾಜಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಪ್ರೀಕ್ವೆಲ್ ನಿರ್ಮಾಣವಾಗಿದೆ. ಅದಕ್ಕೆ ತಕ್ಕಂತೆ ರಿಲೀಸ್ ಪ್ಲ್ಯಾನ್ ನಡೀತಿದೆ.

ಈಗಾಗಲೇ 'ಕಾಂತಾರ- 1' ಚಿತ್ರದ ಟ್ರೈಲರ್ ಹಾಗೂ 2 ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಇತ್ತೀಚೆಗೆ ಬಿಡುಗಡೆಯಾದ ರೆಬಲ್ ಸಾಂಗ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕನ್ನಡ ಬಿಟ್ಟು ನಾಲ್ಕು ಭಾಷೆಗಳಲ್ಲಿ ದಿಲ್ಜಿತ್ ಈ ಹಾಡನ್ನು ಹಾಡಿದ್ದಾರೆ. ಕನ್ನಡದಲ್ಲಿ ರಾಮ್‌ದಾಸ್ ಕಂಠದಲ್ಲಿ ಹಾಡು ಸದ್ದು ಮಾಡ್ತಿದೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

More from Filmibeat

English summary
Fans Thrill as ‘Kantara-1’ Premiere Shows Begin Today Evening Across Karnataka
Read more about: kantara rishab shetty kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X