'ಕಾಂತಾರ- 1' ಚಿತ್ರಕ್ಕಾಗಿ ಸೂಪರ್ ಸ್ಟಾರ್‌ಗಳನ್ನು ಕಣಕ್ಕಿಳಿಸುತ್ತಿರುವ ಹೊಂಬಾಳೆ ಫಿಲ್ಮ್ಸ್
ವರ್ಷದ ಬಹುನಿರೀಕ್ಷಿತ ಸಿನಿಮಾ 'ಕಾಂತಾರ- 1' ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಟ್ರೈಲರ್ ಹೊರಬರಲು ಮುಹೂರ್ತ ಫಿಕ್ಸ್ ಆಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ನಡೀತಿದೆ. ಇಡೀ ಭಾರತೀಯ ಚಿತ್ರರಂಗವೇ 'ಕಾಂತಾರ' ಹೊಸ ಅಧ್ಯಾಯವನ್ನು ಸಂಭ್ರಮಿಸಲಿದೆ. ಅದಕ್ಕಾಗಿ ಸ್ಟಾರ್ ನಟರು ಹೊಂಬಾಳೆ ಜೊತೆ ಕೈ ಜೋಡಿಸುತ್ತಿದ್ದಾರೆ.
ಪಿತೃಪಕ್ಷ, ಅಮಾವಾಸ್ಯೆ, ಗ್ರಹಣ ಅಂತೆಲ್ಲಾ ಇಷ್ಟು ದಿನ 'ಕಾಂತಾರ- 1' ಚಿತ್ರದ ಪ್ರಚಾರ ಮಾಡದೇ ಚಿತ್ರತಂಡ ಸುಮ್ಮನಿತ್ತು. ಶೀಘ್ರದಲ್ಲೇ ಗ್ರಹಣ ಕಳೆದು ನವರಾತ್ರಿ ಸಂಭ್ರಮ ಶುರುವಾಗ್ತಿದೆ. ಅದೇ ಜೋಶ್‌ನಲ್ಲಿ ಚಿತ್ರದ ಪ್ರಚಾರಕ್ಕೆ ಚಾಲನೆ ಕೊಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಬರೀ ಮೇಕಿಂಗ್ ವೀಡಿಯೋ ಹಾಗೂ ಪೋಸ್ಟರ್‌ಗಳಿಂದಲೇ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟಾಕ್ಕಿದೆ. ಒಂದು ದಿನ ಮೊದಲೇ ದೊಡ್ಡಮಟ್ಟದಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಪ್ಲ್ಯಾನ್ ಮಾಡಲಾಗ್ತಿದೆ.

ಐಮ್ಯಾಕ್ಸ್ ವರ್ಷನ್‌ನಲ್ಲಿ ಕೂಡ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗ್ತಿದೆ. ವಿದೇಶಗಳಲ್ಲಿ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸೆಪ್ಟೆಂಬರ್ 25ಕ್ಕೆ ಭಾರತದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗುವ ನಿರೀಕ್ಷೆಯಿದೆ. 3 ವರ್ಷಗಳ ಬಳಿಕ 'ಕಾಂತಾರ' ಸಿನಿಮಾ ಪ್ರೀಕ್ವೆಲ್ ಬರ್ತಿದೆ. ಹಾಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ರೀರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಓಟಿಟಿ, ಸ್ಯಾಟಲೈಟ್ ಅಂತೆಲ್ಲಾ ನಾನ್ ಥ್ರಿಯೇಟ್ರಿಕಲ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ.
ಸೆಪ್ಟೆಂಬರ್ 22ರ ಸೋಮವಾರ ಮಧ್ಯಾಹ್ನ 12.45 ನಿಮಿಷಕ್ಕೆ 'ಕಾಂತಾರ- 1' ಸಿನಿಮಾ ಟ್ರೈಲರ್ ಬಿಡುಗಡೆ ಆಗಲಿದೆ. ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ದೊಡ್ಡದಾಗಿ ಈವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಇನ್ನು ಹೃತಿಕ್ ರೋಷನ್ ಹಿಂದಿ ವರ್ಷನ್ ಟ್ರೈಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ.
ಪ್ರಭಾಸ್ ತೆಲುಗು ವರ್ಷನ್ ಟ್ರೈಲರ್ ಶೇರ್ ಮಾಡಲಿದ್ದಾರೆ. ಜೊತೆಗೆ ಜ್ಯೂ. ಎನ್‌ಟಿಆರ್ ಕೂಡ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಅತ್ತ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಬಲ ರಿಷಬ್ ಶೆಟ್ಟಿಗೆ ಸಿಗುತ್ತಿದೆ. ತಮಿಳಿನಲ್ಲಿ ನಟ ಶಿವಕಾರ್ತಿಕೇಯನ್ ಟ್ರೈಲರ್ ಹಂಚಿಕೊಂಡು ತಂಡಕ್ಕೆ ಶುಭಾಶಯ ಕೋರುತ್ತಾರೆ. ಒಟ್ಟಾರೆ 'ಕಾಂತಾರ- 1' ಚಿತ್ರಕ್ಕಾಗಿ ಭಾರತೀಯ ಚಿತ್ರರಂಗದ ಸ್ಟಾರ್ ನಟರು ಸಾಥ್ ಕೊಡುತ್ತಿದ್ದಾರೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಕೂಡ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ರಾಮ್-ಲಕ್ಷ್ಮಣ್ ಮಾಸ್ಟರ್ಸ್ ಕೂಡ ಒಂದು ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. ಸಾವಿರಾರು ಸಹ ಕಲಾವಿದರನ್ನು ಬಳಸಿಕೊಂಡು ಕ್ಲೈಮ್ಯಾಕ್ಸ್ ಶೂಟ್ ಮಾಡಿದ್ದಾರೆ. ಈಗಾಗಲೇ ಮೇಕಿಂಗ್ ಝಲಕ್ ನೋಡಿ ಸಿನಿರಸಿಕರು ಹುಬ್ಬೇರಿಸಿದ್ದಾರೆ.
ಲೈವ್ ಲೊಕೇಶನ್‌ಗಳ ಜೊತೆಗೆ ಭಾರೀ ಸೆಟ್‌ಗಳನ್ನು ನಿರ್ಮಿಸಿ 'ಕಾಂತಾರ- 1' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹೃತಿಕ್ ರೋಷನ್ ಜೊತೆಗೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಘೋಷಿಸಿದೆ. ಪ್ರಭಾಸ್ ಜೊತೆ ಈಗಾಗಲೇ 'ಸಲಾರ್' ಸಿನಿಮಾ ಮಾಡಿದೆ. ಇನ್ನು 3 ಸಿನಿಮಾಗಳನ್ನು ಒಟ್ಟಿಗೆ ಮಾಡಲು ಒಪ್ಪಂದವಾಗಿದೆ. ಹಾಗಾಗಿ ಅವರೆಲ್ಲರೂ ಹೊಂಬಾಳೆ ಸಂಸ್ಥೆಯ ಮಹತ್ವಾಕಾಂಕ್ಷೆಯ 'ಕಾಂತಾರ- 1' ಚಿತ್ರಕ್ಕಾಗಿ ಕೈ ಜೋಡಿಸುತ್ತಿದ್ದಾರೆ. ಅಕ್ಟೋಬರ್ 2ರಂದು ಸಿನಿಮಾ ವಿಶ್ವದಾದ್ಯಂತ 30 ದೇಶಗಳಲ್ಲಿ ತೆರೆಗಪ್ಪಳಿಸಲಿದೆ.


Click it and Unblock the Notifications











