'ಕಾಂತಾರ- 2' ಲೋಡಿಂಗ್: ದುಬೈನಲ್ಲಿ ರಿಷಬ್ ಶೆಟ್ಟಿ ಫ್ಯಾಮಿಲಿ ಸಾಹಸ, ಸಂಭ್ರಮ

ಕೊನೆಗೂ ನಿರ್ದೇಶಕ, ನಟ ರಿಷಬ್ ಶೆಟ್ಟಿ 'ಕಾಂತಾರ' ಗುಂಗಿನಿಂದ ಹೊರಬಂದಿದ್ದಾರೆ. ನಾಲ್ಕೈದು ತಿಂಗಳಿನಿಂದ ಸಿನಿಮಾ ಪ್ರಚಾರ, ರಿಲೀಸ್, ವಿಜಯಯಾತ್ರೆ ಅಂತೆಲ್ಲಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಶೆಟ್ರು ಬಿಡುವಯ ಮಾಡಿಕೊಂಡು ಫ್ಯಾಮಿಲಿ ಸಮೇತ ದುಬೈಗೆ ಹಾರಿದ್ದಾರೆ.

'ಕಾಂತಾರ' ಸಕ್ಸಸ್ ನಂತರ ಹೋದಲ್ಲಿ ಬಂದಲ್ಲಿ ವಾಟ್ ನೆಕ್ಸ್ಟ್? ಯಾವಾಗ ಹೊಸ ಸಿನಿಮಾ ಶುರು? ಏನ್ ಕಥೆ? ಅನ್ನುವ ಪ್ರಶ್ನೆಗಳು ಎದುರಾಗುತ್ತಲೇ ಇತ್ತು. ಆಗ ರಿಷಬ್ ಶೆಟ್ಟಿ ಕೊಡುತ್ತಿದ್ದ ಉತ್ತರ ಒಂದೇ, ಕೊಂಚ ಬಿಡುವು ಬೇಕು. ಫ್ಯಾಮಿಲಿ ಜೊತೆ ಒಂದೆರಡು ತಿಂಗಳು ಕಾಲ ಕಳೆಯಬೇಕು. ಕೊಂಚ ರಿಲ್ಯಾಕ್ಸ್ ಮಾಡಿ ನಂತರ ಮುಂದಿನ ಪ್ರಾಜೆಕ್ಟ್, ಕಥೆ ಬಗ್ಗೆ ಯೋಚಿಸುತ್ತೇನೆ ಎಂದಿದ್ದರು. ಹೇಳಿದಂತೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಡುತ್ತಿದ್ದಾರೆ. ಪತ್ನಿ, ಮಕ್ಕಳ ಸಮೇತ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ.

ಪ್ರೈವೆಟ್ ಜೆಟ್ ಏರಿ ರಿಷಬ್ ಶೆಟ್ಟಿ ಫ್ಯಾಮಿಲಿ ದುಬೈನಲ್ಲಿ ಲ್ಯಾಂಡ್ ಆಗಿದೆ. ಅದರ ಎಕ್ಸ್‌ಕ್ಲೂಸಿವ್ ವಿಡಿಯೋವನ್ನು ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಪ್ಪ ಅಮ್ಮನ ಜೊತೆ ಪುತ್ರ ರಣ್ವಿತ್ ಶೆಟ್ಟಿ, ಪುತ್ರಿ ರಾದ್ಯಾ ಕೂಡ ಎಂಜಾಯ್ ಮಾಡಿರುವುದನ್ನು ನೋಡಬಹುದು.

ದುಬೈನಲ್ಲಿ ರಿಷಬ್ ಫ್ಯಾಮಿಲಿ

ದುಬೈನಲ್ಲಿ ರಿಷಬ್ ಫ್ಯಾಮಿಲಿ

ಒಂದೂವರೆ ವರ್ಷದಿಂದ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾದಲ್ಲಿ ಮುಳುಗಿಬಿಟ್ಟಿದ್ದರು. ಪತ್ನಿ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್‌ ಡಿಸೈನರ್ ಆಗಿ ಚಿತ್ರಕ್ಕೆ ಕೆಲಸ ಮಾಡಿದ್ದರು. ದಂಪತಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತ್ತು. ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿದೆ. ಸ್ವತಃ ರಿಷಬ್ ಶೆಟ್ಟಿ ಕೂಡ ಈ ಮಟ್ಟಿಗಿನ ಸಕ್ಸಸ್ ನಿರೀಕ್ಷಿಸಿರಲಿಲ್ಲ. ಸಿನಿಮಾ ರಿಲೀಸ್ ಆಗಿ 4 ತಿಂಗಳ ನಂತರ ರಿಷಬ್ ಶೆಟ್ಟಿಗೆ ಬಿಡುವು ಸಿಕ್ಕಿದೆ. ಯಾಕಂದ್ರೆ ಸಿನಿಮಾ ತೆರೆಕಂಡ ಮೇಲೆ ದೇಶದ ವಿವಿಧ ನಗರಗಳಿಗೆ ಭೇಟಿ ಕೊಟ್ಟು ರಿಷಬ್ ಸಿನಿಮಾ ಬಗ್ಗೆ ಮಾತನಾಡಿ ಬಂದಿದ್ದರು. ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸಿದ್ದರು. ಇದೀಗ ಫ್ಯಾಮಿಲಿ ದುಬೈನಲ್ಲಿ ರಜೆಯ ಮಜೆ ಕಳೀತಿದೆ.

ದುಬೈನಲ್ಲಿ ಅದ್ಭುತ ಅನುಭವ

ದುಬೈನಲ್ಲಿ ಅದ್ಭುತ ಅನುಭವ

ಮರಳುಗಾಡಿನಲ್ಲಿ ಕ್ವಿಡ್ ಬೈಕ್ ಏರಿ ರಿಷಬ್, ಪ್ರಗತಿ, ರಣ್ವತ್ ಬೊಂಬಾಟ್ ರೈಡ್ ಮಾಡಿದ್ದಾರೆ. ಸುರಂಗ ಅಕ್ವೇರಿಯಂನಲ್ಲಿ ಮಗನೊಟ್ಟಿಗೆ ಸುತ್ತಾಡಿದ್ದಾರೆ. ಗಗನ ಚುಂಬಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಫ್ಯಾಮಿಲಿ ಇಡೀ ದುಬೈ ಮಹಾ ನಗರವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಇನ್ನು ಬೀಚ್‌ನಲ್ಲಿ ಸುತ್ತಾಡಿ ಚಿಲ್ ಆಗಿದ್ದು, ಪ್ಯಾರಾ ಗ್ಲೈಡಿಂಗ್ ಮಾಡಿ ಖುಷಿ ಪಟ್ಟಿದ್ದಾರೆ. ಡಾಲ್ಫಿನ್ ಶೋ ನೋಡಿ, ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಮಾಡಿ ಸಂಭ್ರಮಿಸಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ಅಭಿಮಾನಿಗಳ ಮೆಚ್ಚುಗೆ

ದುಬೈ ಪ್ರವಾಸದ ಝಲಕ್ ಅನ್ನು ಸ್ಪೆಷಲ್ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. "ದುಬೈ. ಸಾಟಿಯಿಲ್ಲದ ಅನುಭವ. ಅದ್ಭುತ, ಮನ ಮೋಹಕ. ಕೆಲವೊಮ್ಮೆ ಚಿಕ್ಕ ಮಕ್ಕಳಿಗೆ ಅಚ್ಚರಿ ಉಂಟುಮಾಡುವ ಅನುಭವ. ಇಲ್ಲಿನ ವಾತಾವರಣ ಮತ್ತು ಆತಿಥ್ಯ ಮನಮುಟ್ಟಿದೆ. ಕುಟುಂಬದೊಂದಿಗೆ ಅದ್ಭುತ ಸಮಯವನ್ನು ಕಳೆದೆ" ಎಂದು ಪ್ರಗತಿ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಿಷಬ್ ಮುಂದಿನ ಚಿತ್ರ ಯಾವ್ದು?

ರಿಷಬ್ ಮುಂದಿನ ಚಿತ್ರ ಯಾವ್ದು?

'ಕಾಂತಾರ' ನಂತರ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ ಇನ್ನು ಉತ್ತರ ಕೊಟ್ಟಿಲ್ಲ. 'ಕಾಂತಾರ' ಸೀಕ್ವೆಲ್ ಮಾಡುವಂತೆ ಸಾಕಷ್ಟು ಜನ ಹೇಳುತ್ತಿದ್ದಾರೆ. ಚಿತ್ರತಂಡ ಕೂಡ ಈ ಬಗ್ಗೆ ಉತ್ಸುಕವಾಗಿದೆ. ಈಗಾಗಲೇ 'ಕಾಂತಾರ'- 2 ಸಿನಿಮಾ ಮಾಡಲು ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಅನುಮತಿ ಕೂಡ ಕೇಳಿದ್ದಾರೆ ಎಂದು ವರದಿ ಆಗಿದೆ. ದೈವದ ಅನುಮತಿ ಕೂಡ ಸಿಕ್ಕಿದೆಯಂತೆ. ಹಾಗಾಗಿ ರಿಷಬ್ ಶೆಟ್ಟಿ ಮುಂದಿನ ಸಿನಿಮಾ 'ಕಾಂತಾರ'- 2 ಎನ್ನಲಾಗ್ತಿದೆ.

More from Filmibeat

English summary
Kantara Actor Rishab shetty and Family Dubai diaries are filled with Fun and Adventurous
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X