'ಅಯೋಧ್ಯೆಗೆ ಬರುವಂತೆ ಶ್ರೀರಾಮ ಕರೆ ಕಳಿಸಿದ್ದಾನೆ; ಇದು ನನ್ನ ಪೂರ್ವ ಜನ್ಮದ ಪುಣ್ಯ' ಎಂದ ನಟ ರಿಷಬ್ ಶೆಟ್ಟಿ

ಇಡೀ ದೇಶವೇ ಜನವರಿ 22 ರಂದು ನಡೆಯುವ ಐತಿಹಾಸಿಕ ಅಯೋಧ್ಯೆ ರಾಮಮಂದಿರ ಸಮಾರಂಭಕ್ಕಾಗಿ ಎದುರು ನೋಡುತ್ತಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಾಮನ ಮೂರ್ತಿಯ ಚಿತ್ರವನ್ನೂ ಈಗಾಗಲೇ ಔಕ್ತರು ಕಣ್ತುಂಬಿಕೊಂಡಿದ್ದು, ಬಾಲರಾಮನ್ನು ನೋಡಿ ಧನ್ಯರಾಗಿದ್ದಾರೆ. ಇದೇ ವೇಳೆ ಈ ಮಹೋನ್ನತ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ಹಲವು ಸೆಲಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.

ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಲವಾರು ಸೆಲೆಬ್ರಿಟಿಗಳಿಗೆ ಆಹ್ವಾನಗಳು ಬಮದಿದ್ದು, ಅದರಲ್ಲಿ ಪ್ಯಾನ್ ಇಂಡಿಯಾ ಸ್ಟಾರ್, ಕನ್ನಡದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೂ ಆಹ್ವಾನ ನೀಡಲಾಗಿದೆ. ಈ ಹಿಂದೆಯೇ ಅವರನ್ನು ಆಹ್ವಾನಿಸಲಾಗಿದ್ದೆ ಎಂಬ ಮಾಹಿತಿಯಿತ್ತು. ಈಗ ಅಧಿಕೃತವಾಗಿ ಆಹ್ವಾನ ಸ್ವೀಕರಿಸಿರುವ ಫೋಟೋವನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ.

Kantara Actor Rishab Shetty Reaction After Receiving Ram Mandir Pran Pratistha Invitation

'ಅಯೋಧ್ಯೆಗೆ ಬರುವಂತೆ ಶ್ರೀರಾಮ ಕರೆ ಕಳುಹಿಸಿದ್ದಾನೆ'

ಅಯೋಧ್ಯೆ ರಾಮಮಂದಿರದ ಸಮಾರಂಭದಲ್ಲಿ ಭಾಗವಹಿಸುವವರ ಪಟ್ಟಿಗೆ ನಟ ರಿಷಬ್ ಶೆಟ್ಟಿ ಸೇರಿಕೊಂಡಿದ್ದಾರೆ. ಈ ಸಂಭ್ರಮದ ಸುದ್ದಿಯನ್ನು ತನ್ನ ಫ್ಯಾನ್ಸ್‌ಗೆ ತಿಳಿಸಲು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋ ಮತ್ತು ಶ್ರೀರಾಮನ ಕರೆಯ ಬಗ್ಗೆ ಭಾವುಕರಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

"ಶ್ರೀರಾಮ ಜಯ ರಾಮ ಜಯ ಜಯ ರಾಮ... ಬಾಲ್ಯದಿಂದಲೂ ನಮ್ಮ ಮನೆಗಳಲ್ಲಿ ರಾಮನಾಮವ ಭಜಿಸುತ್ತಾ, ರಾಮ ಪ್ರೇಮವ ಭುಜಿಸುತ್ತಾ, ಆತನ ಆದರ್ಶಪ್ರಾಯ ಜೀವನದ ಕಥೆಗಳನ್ನು ಗುರು ಹಿರಿಯರಿಂದ ಕೇಳುತ್ತಾ ಬೆಳೆದವರು ನಾವು. ಇಂದು ಆ ಶ್ರೀರಾಮ ತಾನು ಮಗುವಾಗಿ ಆಡಿದ, ಪ್ರಭುವಾಗಿ ಆಳಿದ ಆ ಅಯೋಧ್ಯೆಗೆ ಬರುವಂತೆ ಕರೆ ಕಳಿಸಿದ್ದಾನೆ. ಇದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ! ಶ್ರೀರಾಮನಿಗೆ ಜಯವಾಗಲಿ, ಅಯೋಧ್ಯೆಗೆ ಜಯವಾಗಲಿ- ರಿಷಬ್​ ಶೆಟ್ಟಿ " ಎಂದು ಆಹ್ವಾನ ಸ್ವೀಕರಿಸಿರದ ಫೋಟೋ ಜೊತೆಗೆ ಪೋಸ್ಟರ್ ಒಂದನ್ನು ಶೇರ್ ಮಾಡಿದ್ದಾರೆ.

Kantara Actor Rishab Shetty Reaction After Receiving Ram Mandir Pran Pratistha Invitation

ನಟ ರಿಷಬ್ ಶೆಟ್ಟಿ ತಮ್ಮ ಬ್ಲಾಕ್ ಬ್ಲಸ್ಟರ್ ಕಾಂತಾರ ಸಿನಿಮಾದಿಂದ ಪ್ಯಾನ್ ಇಮಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಸದ್ಯ ಕಾಂತಾರ ಸಿನಿಮಾದ ಪ್ರಿಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ದೈವ, ದೇವರು ಎಂದರೇ ಆ ಕಾರ್ಯಕ್ಕಾಗಿ ತಮ್ಮೆಲ್ಲಾ ಕೆಲಸಗಳನ್ನು ಬದಿಗಿಟ್ಟು ಹೋಗುತ್ತಾರೆ ಎಂಬುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಅಂತಹದರಲ್ಲಿ ಅವತಿಗೆ ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ಬಂದಿರುವುದು ನಿಜಕ್ಕೂ ಭಾರಿ ಖುಷಿ ನೀಡಿದೆ.

ರಾಮಮಂದಿರ ಉದ್ಘಾಟನಾ ಸಮಾರಂಭ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ರಜನಿಕಾಂತ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣಬೀರ್ ಕಪೂರ್, ಪ್ರಭಾಸ್, ರಾಮ್ ಚರಣ್, ಯಶ್, ಕಂಗನಾ ರನೌತ್, ನಿಖಿಲ್ ಕುಮಾರಸ್ವಾಮಿ, ಆಯುಷ್ಮಾನ್​ ಖುರಾನಾ, ರಣದೀಪ್​ ಹೂಡಾ, ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ರಿಷಬ್ ಶೆಟ್ಟಿ ಮತ್ತು ಕಾಂತಾರ: ಅಧ್ಯಾಯ 1

ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರಸ್ತುತ ಕಾಂತಾರ- ಅಧ್ಯಾಯ 1 ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದು ಬ್ಲಾಕ್‌ಬಸ್ಟರ್ ಹಿಟ್ ಚಲನಚಿತ್ರ ಕಾಂತಾರದ ಹಿಂದಿನ ಅಧ್ಯಾಯ. ಹೀಗಾಗಿತೇ ಇದಕ್ಕೆ ಅಧ್ಯಾಯ ಒಂದು ಎಂದು ಇಡಲಾಗಿದೆ. ಕಾಂತಾರ ಸಿನಿಮಾದಲ್ಲಿನ ಕಥೆಗೂ ಮುನ್ನ ಏನಾಗಿತ್ತು ಎಂಬುದನ್ನು ಈ ಪ್ರಿಕ್ವೆಲ್ ವಿವರಿಸಲಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾಕ್ಕೂ ಬಂಡವಾಳ ಹಾಕುತ್ತಿದೆ. 'ಕಾಂತಾರ - ಅಧ್ಯಾಯ 1' ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಸೇರಿದಂತೆ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Actor Rishab Shetty receives Ram Mandir Pran Pratishtha invitation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X