For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾಗೆ ಅವ್ರದ್ದೇ ಸ್ಟೈಲ್‌ನಲ್ಲಿ "......." ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ!

  |

  ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದಿದ್ದು, ಮುಂದೆ ಸ್ಟಾರ್ ನಟಿಯಾಗಿದ್ದು ಗೊತ್ತೇಯಿದೆ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರಶ್ಮಿಕಾ 'ಪರಂವ ಸ್ಟುಡಿಯೋಸ್' ಸಂಸ್ಥೆ ಹೆಸರು ಹೇಳಲು ಹಿಂದೇಟು ಹಾಕಿದ್ದರು. ಈಗ ಅವ್ರದ್ದೇ ಶೈಲಿಯಲ್ಲಿ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

  'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಾನ್ವಿ ಆಗಿ ರಶ್ಮಿಕಾ ಮಂದಣ್ಣ ಮೋಡಿ ಮಾಡಿದ್ದರು. ಅಲ್ಲಿಂದ ಮುಂದೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕೊಡಗಿನ ಕುವರಿ ನಟಿಸಿದ್ದರು. ತೆಲುಗಿನ 'ಗೀತಾ ಗೋವಿಂದಂ' ರೋಶ್ ನಸೀಬು ಬದಲಾಗಿ ಹೋಗಿತ್ತು. ನೋಡ ನೋಡುತ್ತಲೇ ನ್ಯಾಷನಲ್ ಕ್ರಶ್ ಪಟ್ಟ ಅಲಂಕರಿಸಿಬಿಟ್ಟರು. ಆದರೆ ಆಕೆಯ ಒಂದಷ್ಟು ಹೇಳಿಕೆಗಳು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಕೆಲ ದಿನಗಳ ಹಿಂದೆ 'ಕರ್ಲಿ ಟೇಲ್ಸ್' ಯೂಟ್ಯೂಬ್‌ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದರು.

  ರಶ್ಮಿಕಾ ಮಂದಣ್ಣ ಮೊದಲ ಹಿಂದಿ ಚಿತ್ರ ಫ್ಲಾಪ್; ಎರಡನೇ ಚಿತ್ರಕ್ಕಿಲ್ಲ ಚಿತ್ರಮಂದಿರದ ಭಾಗ್ಯ!ರಶ್ಮಿಕಾ ಮಂದಣ್ಣ ಮೊದಲ ಹಿಂದಿ ಚಿತ್ರ ಫ್ಲಾಪ್; ಎರಡನೇ ಚಿತ್ರಕ್ಕಿಲ್ಲ ಚಿತ್ರಮಂದಿರದ ಭಾಗ್ಯ!

  ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಆ ಸಮಯದಲ್ಲಿ 'ಕಿರಿಕ್ ಪಾರ್ಟಿ' ತಂಡ ನನ್ನ ಹಿಂದೆ ದುಂಬಾಲು ಬಿದ್ದು ನಟಿಸುವಂತೆ ಕೇಳಿಕೊಂಡಿದ್ದರು ಎಂದು ಹೇಳಿದ್ದರು. ಸಂದರ್ಶಶನಗಳಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, 'ಪರಂವಹ್ ಸ್ಟುಡಿಯೋಸ್' ಹೆಸರು ಹೇಳಲು ಹಿಂದುಮುಂದು ನೋಡಿದ್ದರು. ಇದಕ್ಕೆ ಪರೋಕ್ಷವಾಗಿ ರಿಷಬ್ ಶೆಟ್ಟಿ ಟಾಂಗ್ ಕೊಟ್ಟಿದ್ದಾರೆ.

  ಅಂದು ರಶ್ಮಿಕಾ ಹೇಳಿದ್ದೇನು?

  ಅಂದು ರಶ್ಮಿಕಾ ಹೇಳಿದ್ದೇನು?

  'ನಾನು ಆಗಷ್ಟೆ 'ಫ್ರೆಶ್ ಫೇಸ್' ಕಾಂಟೆಸ್ಟ್ ಗೆದ್ದಿದ್ದೆ. ನನ್ನ ಒಂದು ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಬಹಳ ಕೆಟ್ಟದಾಗಿ ನಾನು ಕಾಣುತ್ತಿದೆ. ಅದೇ ಸಮಯಕ್ಕೆ 'ಕಿರಿಕ್ ಪಾರ್ಟಿ' ತಂಡದವರು ನಾಯಕಿಗಾಗಿ ಹುಡುಕುತ್ತಿದ್ದರು. ನನ್ನ ಫೋಟೊ ನೋಡಿ ಕರೆ ಮಾಡಿದ್ದರು. ನಾನು ಒಪ್ಪಿರಲಿಲ್ಲ. ನಂತರ ನನ್ನ ಹಿಂದೆ ನಟಿಸುವಂತೆ ದುಂಬಾಲು ಬಿದ್ದಿದ್ದರು. 'ಪರಂವಹ್ ಸ್ಟುಡಿಯೋಸ್' ಹೆಸರು ಹೇಳದೇ ವ್ಯಂಗ್ಯವಾಗಿ ಬೆರಳು ತೋರಿಸುತ್ತಾ ಆ ಸಂಸ್ಥೆಯಿಂದ ಕರೆ ಬಂದಿತ್ತು. ನಾನು ನಟಿಸೋಕೆ ಇಷ್ಟ ಇಲ್ಲ ಎಂದು ಹೇಳಿ ಫೋನ್ ಇಟ್ಟಿದ್ದೆ ಎಂದಿದ್ದರು.

  ಸತತ ಟ್ರೋಲ್: ನಟಿಯಾಗಿದ್ದಕ್ಕೆ ಬೆಲೆ ತೆರುತ್ತಿದ್ದೇನೆ ಎಂದ ರಶ್ಮಿಕಾ ಮಂದಣ್ಣಸತತ ಟ್ರೋಲ್: ನಟಿಯಾಗಿದ್ದಕ್ಕೆ ಬೆಲೆ ತೆರುತ್ತಿದ್ದೇನೆ ಎಂದ ರಶ್ಮಿಕಾ ಮಂದಣ್ಣ

  ಟ್ರೋಲ್ ಆಗಿದ್ದ ರಶ್ಮಿಕಾ ಮಂದಣ್ಣ

  ಟ್ರೋಲ್ ಆಗಿದ್ದ ರಶ್ಮಿಕಾ ಮಂದಣ್ಣ

  ಕೊಡಗಿನ ಚೆಲುವೆ ಹೀಗೆ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, 'ಪರಂವಹ್ ಸ್ಟುಡಿಯೋಸ್' ಹೆಸರು ಹೇಳದೇ ಇದ್ದಿದ್ದು ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಮೊದಲ ಸಿನಿಮಾದಲ್ಲಿ ಅವಕಾಶ ಕೊಟ್ಟವರನ್ನು, ಸಂಸ್ಥೆಯನ್ನು ಮರೆತರೇ ಹೆಂಗೆ? ಬೇಕು ಎಂತಲೇ ಕಿರಿಕ್ ಬೆಡಗಿ ಹೀಗೆ ಮಾಡುತ್ತಿದ್ದಾರೆ. ಹತ್ತಿದ ಏಣಿಯನ್ನು ಒದೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು.

  ರಶ್ಮಿಕಾ ಸ್ಟೈಲ್‌ನಲ್ಲಿ ರಿಷಬ್ ತಿರುಗೇಟು

  ರಶ್ಮಿಕಾ ಸ್ಟೈಲ್‌ನಲ್ಲಿ ರಿಷಬ್ ತಿರುಗೇಟು

  ಗುಲ್ಟಿ ಡಾಟ್ ಕಾಮ್ ಯೂಟ್ಯೂಬ್ ಸಂದರ್ಶನದಲ್ಲಿ ಪರೋಕ್ಷವಾಗಿ ರಶ್ಮಿಕಾಗೆ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ. ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ? ಯಾರೊಟ್ಟಿಗೆ ನಟಿಸ್ತೀರಾ? ಎನ್ನುವ ಪ್ರಶ್ನೆಗೆ ರಿಷಬ್ ಉತ್ತರಿಸಿದ್ದಾರೆ. ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ನಾನು ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡುತ್ತೀನಿ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ) ನಟಿಯರು ನನಗೆ ಇಷ್ಟ ಇಲ್ಲ" ಎಂದಿದ್ದಾರೆ. ಇದನ್ನು ನೋಡಿ ರಿಷಬ್ ಶೆಟ್ಟಿ ಸರಿಯಾಗಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

  ಉಡುಪಿಯಲ್ಲಿ ಜೂ.ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್: ಸೆಲ್ಫಿ ಕೊಡ್ತಾರಾ 'ಕಾಂತಾರ' ಹೀರೊ?ಉಡುಪಿಯಲ್ಲಿ ಜೂ.ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್: ಸೆಲ್ಫಿ ಕೊಡ್ತಾರಾ 'ಕಾಂತಾರ' ಹೀರೊ?

  ಸಮಂತಾ, ಸಾಯಿ ಪಲ್ಲವಿ ನಟನೆ ಇಷ್ಟ

  ಸಮಂತಾ, ಸಾಯಿ ಪಲ್ಲವಿ ನಟನೆ ಇಷ್ಟ

  ಮಾತು ಮುಂದುವರೆಸಿದ ರಿಷಬ್ ಶೆಟ್ಟಿ, "ಸಮಂತಾ ಹಾಗೂ ಸಾಯಿ ಪಲ್ಲವಿ ಅಭಿನಯ ಬಹಳ ಇಷ್ಟ ಎಂದು ಹೇಳಿದ್ದಾರೆ". ಇನ್ನು ಸಮಂತಾ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ವಿಚಾರ ಗೊತ್ತಾದಾಗ ಏನು ಅನ್ನಿಸಿತು ಎನ್ನುವ ಪ್ರಶ್ನೆಗೆ "ಬಹಳ ಬೇಸರ ಆಯಿತು. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

  English summary
  Kantara Actor Rishab Shetty's Indirect Counter to Rashmika Mandanna. She said Kirik Party team desperate to cast her into the movie. now Rishab Shetty Indirectly Hits Back In her Style. Know More.
  Monday, November 21, 2022, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X