ಸೀರೆಯುಟ್ಟು, ಮಲ್ಲಿಗೆ ಮುಡಿದು ದಸರಾ ಶುಭಾಶಯ ಹೇಳಿದ 'ಸಿಂಗಾರ ಸಿರಿ' ಸಪ್ತಮಿ ಗೌಡ

ದೇಶದೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲೂ ದಸರಾ ಕಳೆಗಟ್ಟಿದ್ದು, ನಟ ನಟಿಯರು ಕೂಡ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಇದರ ಜೊತೆಗೆ ನಾಡಿನ ಜನತೆಗೆ ದಸರಾ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾ ಕಾಂತಾರದ ಬೆಡಗಿ ಸಪ್ತಮಿ ಗೌಡ ಕೂಡ ದಸರಾ ಶುಭಾಶಯ ತಿಳಿಸಿದ್ದಾರೆ.

ಕಾಂತಾರ ಸಿನಿಮಾದಿಂದ ಖ್ಯಾತಿ ಗಳಿಸಿದ ನಟಿ ಸಪ್ತಮಿ ಗೌಡ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್‌ಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಇದರ ಜೊತೆಗೆ ತೆಲುಗು ಸಿನಿಮಾದಲ್ಲಿ ನಿತಿನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಟಾಲಿವುಡ್‌ನಲ್ಲಿಯೂ ಕಮಾಲ್ ಮಾಡಲು ಹೊರಟಿದ್ದಾರೆ.

Kantara Actress Sapthami Gowda Wished for Dasara Festival

ಸೀರೆಯಲ್ಲಿ ಮಿಂಚಿದ ಸಿಂಗಾರ ಸಿರಿ ಲೀಲಾ!

ನಟಿ ಸಪ್ತಮಿ ಗೌಡ ದಸರಾ ಹಬ್ಬದ ಶುಭಾಶಯಗಳು ಎಂದು ನಾಡಿನ ಜನತೆಗೆ ನಾಡ ಹಬ್ಬದ ಶುಭಾಶಯಗಳನ್ನು ಕೋರಿದ್ದು, ತಮ್ಮ ಚಂದನೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸೀರೆಯುಟ್ಟು, ಮಲ್ಲಿಗೆ ಮುಡಿದು ಕನ್ನಡಿ ಮುಂದೆ ನಿಂತು ಫೋಟೋಗಳನ್ನು ಕ್ಲಿಕ್ ಮಾಡಿರುವ ಇವರ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೆಂಪು ಸೀರೆ ಮತ್ತು ಗ್ರೇ ಕಲರ್ ಸಿಂಪಲ್ ಬ್ಲೌಸ್‌ ತೊಟ್ಟ ನಟಿಯ ಬಟ್ಟೆ ಸಿಂಪಲ್ ಆಗಿದ್ದರೂ ಕೂಡ ಸಪ್ತಮಿಯ ಅಂದ ಹೆಚ್ಚುತ್ತಿದೆ. ಇದಕ್ಕೆ ಮೆರುಗು ಕೊಟ್ಟಿರುವುದು ತಲೆಯಲ್ಲಿ ಮುಡಿದ ಮಲ್ಲಿಗೆ ಹೂ ಮತ್ತು ಕಿಯ ಜುಮುಕಿಗಳು. ಅಭಿಮಾನಿಗಳು ಫೋಟೋಗಳಿಗೆ ಲೈಕ್, ಕಾಮೆಂಟ್ ಮಾಡುತ್ತಾ ತಾವು ಕೂಡ ದಸರಾ ಶುಭಾಶಯಗಳನ್ನು ಕೂರಿದ್ದಾರೆ.

Kantara Actress Sapthami Gowda Wished for Dasara Festival

ಹೇ ಸಿಂಗಾರ ಸಿರೆಯೇ ಎಂದ ಫ್ಯಾನ್ಸ್!

ನಟಿಯ ಫೋಟೋಗಳಿಗೆ 84 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಹೇ ಸಿಂಗಾರ ಸಿರಿಯೇ ಎಂದು ಹಲವು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದು, ಮುದ್ದು ಮುದ್ದು ಸುಂದರಿ ಎಂದು ಹಾಡಿ ಹೊಗಳುತ್ತಿದ್ದಾರೆ. ಇಷ್ಟೇ ಅಲ್ಲದೇ ಅವರ ಮುಂದಿನ ಸಿನಿಮಾಗಳ ಅಪ್‌ಡೇಟ್ ಕೇಳುತ್ತಿದ್ದಾರೆ.

ಯುವ ಅಪ್‌ಡೇಟ್ ಕೇಳಿದ ಅಭಿಮಾನಿಗಳು

ನಟಿ ಸಪ್ತಮಿ ಗೌಡ ದೊಡ್ಮನೆ ಕುಡಿ ಯುವ ರಾಜ್​ ಕುಮಾರ್ ಜೊತೆಗೆ 'ಯುವ' ಸಿನಿಮಾಗೆ ನಾಯಕಿಯಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾ ಈಗಾಗಲೇ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಯುವ ರಾಜ್ ಕುಮಾರ್​ಗೆ ನಟಿ ಸಪ್ತಮಿ ಗೌಡ ಜೋಡಿಯಾಗಿದ್ದು, ನಟಿಯ ಬಳಿ ಸಿನಿಮಾದ ಅಪ್‌ಡೇಟ್ ಕೇಳ್ತಿದ್ದಾರೆ ಫ್ಯಾನ್ಸ್.

ಇನ್ನು, ಇತ್ತಿಚೇಗೆ ಸಪ್ತಮಿ ಗೌಡ ಅಭಿಷೇಕ್ ಅಂಬರೀಷ್‌ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಗಿದ್ದಾರೆ. ಅಭಿಷೇಕ್ ಅಂಬರೀಷ್ ಜೊತೆ ನಟಿ 'ಕಾಳಿ' ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ. ಕಾಳಿ ಚಿತ್ರಕ್ಕೆ ಎಸ್​ ಕೃಷ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ನಟ ಡಾಲಿ ಧನಂಜಯ್ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿದ್ದಾರೆ.

More from Filmibeat

English summary
Actress Sapthami gowda dasara look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X