ಈ ಬಾರಿ ದೀಪಾವಳಿಗೆ 'ಕಾಂತಾರ', 'KGF' ಶಾಟ್ಸ್ ಪಟಾಕಿಗಳ ಆರ್ಭಟ ಜೋರು

ಎಲ್ಲೆಡೆ ದೀಪಾವಳಿ ಸಂಭ್ರಮ ಶುರುವಾಗುತ್ತಿದೆ. ವಾರದ ಆರಂಭದಲ್ಲೇ ಹಬ್ಬ ಬರ್ತಿದ್ದು ಲಾಂಗ್ ವೀಕೆಂಡ್ ರಜೆ ಸಿಕ್ತಿದೆ. ಶಾಲಾ, ಕಾಲೇಜು ಮಕ್ಕಳಿಗೆ ಇದು ಸಂತಸ ಡಬಲ್ ಮಾಡಿದೆ. ಬೆಳಕಿನ ಹಬ್ಬದಲ್ಲಿ ಪಟಾಕಿ ಸದ್ದು ಇರಲೇಬೇಕು. ಈ ಬಾರಿ 'ಕಾಂತಾರ' ಹಾಗೂ 'KGF' ಪಟಾಕಿಗಳ ದರ್ಬಾರ್ ನಡೆಯಲಿದೆ.

ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಚಾಪ್ಟರ್-1 ಸದ್ದು ಜೋರಾಗಿದೆ. 'KGF' ಕ್ರೇಜ್ ಕೂಡ ಇನ್ನು ಕಮ್ಮಿ ಆಗಿಲ್ಲ. ದೀಪಾವಳಿಗೆ ಇದೇ ಹೆಸರಿನಲ್ಲಿ ಪಟಾಕಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಈಗಾಗಲೇ ಕೆಲವರು ಈ ಪಟಾಕಿಗಳನ್ನು ಹೊಡೆದು ಖುಷಿಪಟ್ಟಿದ್ದಾರೆ. ಮತ್ತೆ ಕೆಲವರು ಮಾರ್ಕೆಟ್‌ನಲ್ಲಿ ಇದನ್ನು ನೋಡಿ ಹುಬ್ಬೇರಿಸುತ್ತಿದ್ದಾರೆ.

Kantara and KGF Crackers Steal the Show This Diwali Fans Celebrate Kannada Cinema Craze

ಸೂಪರ್ ಹಿಟ್ ಸಿನಿಮಾ ಹೆಸರುಗಳು ಬ್ರ್ಯಾಂಡ್ ಆಗಿಬಿಡುತ್ತವೆ. ಆ ಹೆಸರನ್ನು ವ್ಯಾಪಾರಿಗಳು ತಮ್ಮ ಉತ್ಪನ್ನಗಳಿಗೆ ಇಟ್ಟು ಕ್ರೇಜ್ ಬಳಸಿಕೊಳ್ಳುವ ಪ್ರಯತ್ನ ಹೊಸದೇನು ಅಲ್ಲ. ಗಣೇಶ ಹಬ್ಬದ ಸಂಭ್ರಮದಲ್ಲಿ 'ಬಾಹುಬಲಿ' ಅವತಾರದ ಗಣೇಶ, 'KGF' ರಾಕಿಭಾಯ್ ಸ್ಟೈಲ್ ಗಣೇಶ, 'ಪುಷ್ಪ'ರಾಜ್ ಲುಕ್ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದ್ದು ಗೊತ್ತೇಯಿದೆ. ಈಗ ದೀಪಾವಳಿಗೆ 'ಕಾಂತಾರ', 'KGF' ಶಾಟ್ಸ್ ಪಟಾಕಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

'KGF' ಹಾಗೂ 'ಕಾಂತಾರ' ಚಿತ್ರಗಳು ಸರಣಿ ರೂಪದಲ್ಲಿ 2 ಭಾಗಗಳಲ್ಲಿ ತೆರೆಗೆ ಬಂದು ಪ್ರೇಕ್ಷಕರನ್ನು ರಂಜಿಸಿದ್ದವು. 'ಕಾಂತಾರ- 1' ಇನ್ನು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಲೇ ಇದೆ. ಅಂತಹ ಸಮಯದಲ್ಲೇ ದೀಪಾವಳಿ ಹಬ್ಬ ಕೂಡ ಬಂದಿದೆ. ಹಬ್ಬದ ರಜೆ ಚಿತ್ರದ ಗಳಿಕೆಗೆ ಪ್ಲಸ್ ಆಗುವ ಲೆಕ್ಕಾಚಾರ ಶುರುವಾಗಿದೆ. ಇನ್ನು 4 ದಿನಗಳಲ್ಲಿ ಸಿನಿಮಾ 200 ಕೋಟಿ ರೂ. ಗಳಿಕೆ ಕಾಣುವ ಅಂದಾಜಿದೆ. ಅದೇ ನಿಜವಾದರೆ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಅಭಿಮಾನಿಗಳ ಕನಸು ನನಸಾಗಬಹುದು.

Kantara and KGF Crackers Steal the Show This Diwali Fans Celebrate Kannada Cinema Craze

ತಮಿಳುನಾಡಿನ ಹೊಸೂರು ಪಟಾಕಿ ಅಂಗಡಿಗಳಲ್ಲಿ ಜನ ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ. ಅಲ್ಲಿ 'ಕಾಂತಾರ' 30 ಶಾಟ್ಸ್ ಹಾಗೂ 'KGF- 2' ಪಟಾಕಿ ಮಾರಾಟ ಜೋರಾಗಿದೆ. ಸಹಜವಾಗಿಯೇ ಜನರನ್ನು ಸೆಳೆಯುತ್ತಿದೆ. ಮಕ್ಕಳು ಹಠ ಮಾಡಿ ಇದನ್ನು ಖರೀದಿ ಮಾಡುತ್ತಿದ್ದಾರೆ. ಇನ್ನು ಎರಡು ವರ್ಷಗಳ ಹಿಂದೆಯೇ 'KGF- 2' ಚಿತ್ರದ ದೊಡ್ಡಮ್ಮ ಎಂದು ಟ್ರೆಂಡ್ ಆಗಿದ್ದ ಗನ್ ಡಿಸೈನ್‌ ಪಟಾಕಿ ಉತ್ತರ ಭಾರತದಲ್ಲಿ ಸದ್ದು ಮಾಡಿತ್ತು.

ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಅದರಲ್ಲೂ ಅವರು ಕಟ್ಟಿಕೊಟ್ಟ ಎಲಿವೇಷನ್ ಸೀನ್ಸ್‌ನಲ್ಲಿ ರಾಕಿಭಾಯ್ ಆರ್ಭಟ ಮರೆಯೋಕೆ ಸಾಧ್ಯವಿಲ್ಲ. ದೊಡ್ಡಮ್ಮ ಗನ್ ಹಿಡಿದು ರಾಕಿ ಅಬ್ಬರಿಸಿದ ಪರಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅಂದಹಾಗೆ ಇದರ ನಿಜವಾದ ಹೆಸರು M1919 ಬ್ರೌನಿಂಗ್ ಮಷಿನ್ ಗನ್. ಇದೇ ಡಿಸೈನ್‌ನಲ್ಲಿರುವ ಪಟಾಕಿ ಸಿಡಿಸಿ ಕೆಲ ಅಭಿಮಾನಿಗಳು ವೀಡಿಯೋ ಮಾಡಿದ್ದರು. 'KGF' ಕಥೆ ಮುಗಿದಿಲ್ಲ. ಚಾಪ್ಟರ್-3 ಮಾಡುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ ರಾಕಿಭಾಯ್ ಕ್ರೇಜ್ ಕಮ್ಮಿ ಆಗಿಲ್ಲ.

ಅಂದಹಾಗೆ 'KGF' ದೊಡ್ಡಮ್ಮ ಗನ್ ಶೈಲಿಯ ಪಟಾಕಿ ಮಾರುಕಟ್ಟೆಯಲ್ಲಿ ಸಿಗುವುದು ಅನುಮಾನ. ಅಭಿಮಾನಿಗಳೇ ಬೇರೆ ಪಟಾಕಿಯನ್ನು ಈ ರೀತಿ ಕಸ್ಟಮೈಸ್ ಮಾಡಿಕೊಂಡು ಸಿಡಿಸುವ ಪ್ರಯತ್ನ ಮಾಡಿದಂತೆ ಕಾಣ್ತಿದೆ. ಒಟ್ಟಾರೆ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡ್ತಿವೆ. ಪರಭಾಷಿಕರು ಇತ್ತ ತಿರುಗಿ ನೋಡುವಂತೆ ಮಾಡುತ್ತಿರುವುದು ವಿಶೇಷ.

ಈ ವರ್ಷದ ಮೊದಲ 6 ತಿಂಗಳು ಕನ್ನಡ ಸಿನಿಮಾಗಳ ಸಾಧನೆ ಹೇಳಿಕೊಳ್ಳುವಂತೆ ಇರಲಿಲ್ಲ. ಆದರೆ 'ಸು ಫ್ರಮ್ ಸೋ' ಹಾಗೂ 'ಕಾಂತಾರ- 1' ಸಿನಿಮಾಗಳು ಆ ಕೊರಗನ್ನು ನೀಗಿಸಿವೆ. ಚಿತ್ರರಂಗಕ್ಕೆ ಹೊಸ ಹುಮ್ಮಸ್ಸು ತಂದು ಕೊಟ್ಟಿವೆ.

More from Filmibeat

Read more about: kgf kantara diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X