For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ಕಾಂತಾರ ಅಬ್ಬರ; ಕೆಜಿಎಫ್ ದಾಖಲೆ ಉಡೀಸ್, 'ರಾಜಕುಮಾರ'ನ ದಾಖಲೆ ಮೇಲೆ ಎಲ್ಲರ ಕಣ್ಣು!

  |

  ಕಾಂತಾರ.. ಕಾಂತಾರ.. ಕಾಂತಾರ... ದೇಶದಾದ್ಯಂತ ಹೆಚ್ಚಾಗಿ ಕೇಳಿ ಬರುತ್ತಿರುವುದು ಸದ್ಯ ಕಾಂತಾರ ಚಿತ್ರದ ಹೆಸರು ಹಾಗೂ ಕಾಂತಾರ ಸಿನಿಮಾಗೆ ಸಂಬಂಧಿಸಿದ ಸುದ್ದಿಗಳು ಮಾತ್ರ. ರಿಷಬ್ ಶೆಟ್ಟಿ ಈ ಬಾರಿ ನಿರ್ದೇಶನದ ಜೊತೆಗೆ ನಟನೆಯಲ್ಲಿಯೂ ಸಹ ಗೆದ್ದು ಬೀಗಿದ್ದಾರೆ. ಕೊನೆಯ ಇಪ್ಪತ್ತು ನಿಮಿಷಗಳ ಕಾಲ ಪ್ರೇಕ್ಷಕರು ನಿಬ್ಬೆರಗಾಗುವ ಹಾಗೆ ಕುಳಿತು ವೀಕ್ಷಿಸುವಂತ ನಟನೆ ಮಾಡಿರುವ ರಿಷಬ್ ಶೆಟ್ಟಿ ಕಾಡಿನ ಜನರ ಕತೆಗೆ ಭೂತ ಕೋಲ ಆಚರಣೆಯ ದೈವಿಕ ಟಚ್ ನೀಡಿ ಅದ್ಭುತ ಕತೆ ಹೆಣೆದು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ.

  ಬಿಡುಗಡೆಗೂ ಮುನ್ನ ಹುಟ್ಟುಹಾಕಿದ್ದ ನಿರೀಕ್ಷೆಗೂ ಮೀರಿದ ಮನರಂಜನೆ ನೀಡಿ ಗೆದ್ದಿರುವ ಕಾಂತಾರ ಬಾಕ್ಸ್ ಆಫೀಸ್‌ ವಿಚಾರದಲ್ಲಿಯೂ ಸಹ ಮುಂದಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ತನ್ನದೇ ಆದ ನೂತನ ದಾಖಲೆ ಬರೆಯುತ್ತಿರುವ ಕಾಂತಾರ ಕನ್ನಡ ಚಿತ್ರರಂಗದ ಹಲವು ದೊಡ್ಡ ಹಿಟ್ ಚಿತ್ರಗಳ ದಾಖಲೆಯನ್ನು ಮುರಿದು ಹಾಕುತ್ತಿದೆ.

  ಇನ್ನು ಮೈಸೂರಿನಲ್ಲಿ ಕಾಂತಾರ ಜಪ ಜೋರಾಗಿದೆ. ಹೇಳಿ ಕೇಳಿ ದಸರಾ ಹಿಂದಿನ ವಾರ ಚಿತ್ರ ಬಿಡುಗಡೆಯಾಗಿತ್ತು, ದಸರಾ ಸಲುವಾಗಿ ಮೈಸೂರಿಗೆ ಬಂದಿದ್ದ ಹಾಗೂ ರಜೆ ಇದ್ದ ಸಿನಿ ರಸಿಕರು ಚಿತ್ರಮಂದಿರಗಳಿಗೆ ನುಗ್ಗಿದ್ದರು. ಪರಿಣಾಮವಾಗಿ ಚಿತ್ರ ಮೈಸೂರು ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿದೆ. ಬಿಡುಗಡೆಯಾದ ಹನ್ನೆರಡನೇ ದಿನಕ್ಕೆ 4 ಕೋಟಿ ಗಳಿಕೆ ಕಂಡು ಅಬ್ಬರಿಸುತ್ತಿದೆ. ಸದ್ಯ ಮೈಸೂರಿನಲ್ಲಿ ಮಲ್ಟಿಪ್ಲೆಕ್ಸ್ ಹವಾ ಜೋರಾಗಿದೆ. ನಗರದಲ್ಲಿ ಒಟ್ಟು ಐದು ಮಲ್ಟಿಪ್ಲೆಕ್ಸ್ ಕೇಂದ್ರಗಳಿದ್ದು ಕಾಂತಾರ ಎಲ್ಲೆಡೆ ತುಂಬಿದ ಪ್ರದರ್ಶನ ಕಾಣ್ತಿದೆ. ಹೀಗೆ ಮೈಸೂರಿನಲ್ಲಿ ನಾಲ್ಕು ಕೋಟಿ ಕ್ಲಬ್ ಸೇರಿರುವ ಕಾಂತಾರ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದೆ.

  ಕೆಜಿಎಫ್ 1 ದಾಖಲೆ ಮುರಿದ ಕಾಂತಾರ

  ಕೆಜಿಎಫ್ 1 ದಾಖಲೆ ಮುರಿದ ಕಾಂತಾರ

  ಹನ್ನೆರಡು ದಿನಗಳಲ್ಲಿ ಮೈಸೂರು ನಗರ ಒಂದರಲ್ಲಿಯೇ ಕಾಂತಾರ 4 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಪರಿಣಿತರು ಮಾಹಿತಿ ನೀಡಿದ್ದಾರೆ. ಈ ಮೂಲಕ ಕಾಂತಾರ ಮೈಸೂರು ನಗರದಲ್ಲಿ ಒಟ್ಟು 3.8 ಕೋಟಿ ಗಳಿಸಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರದ ದಾಖಲೆಯನ್ನು ಮುರಿದು ಹಾಕಿದೆ.

  ರಾಜಕುಮಾರ ದಾಖಲೆ ಮೇಲೆ ಎಲ್ಲರ ಕಣ್ಣು

  ರಾಜಕುಮಾರ ದಾಖಲೆ ಮೇಲೆ ಎಲ್ಲರ ಕಣ್ಣು

  ಮೈಸೂರಿನಲ್ಲಿ ರಾಜಕುಮಾರ ಅಬ್ಬರಿಸಿದ್ದ ರೀತಿ ನಿಜಕ್ಕೂ ಸಾರ್ವಕಾಲಿಕ ಎಂದೇ ಹೇಳಬಹುದು. ಒಂದು ಮಲ್ಟಿಪ್ಲೆಕ್ಸ್ ಸೇರಿದಂತೆ ನಗರದ ಒಟ್ಟು ನಾಲ್ಕು ಕೇಂದ್ರಗಳಲ್ಲಿ ಶತಕ ಬಾರಿಸಿದ್ದ ರಾಜಕುಮಾರ ಒಟ್ಟಾರೆ 5.73 ಕೋಟಿ ರೂಪಾಯಿಗಳನ್ನು ಕಲೆಹಾಕಿತ್ತು. ಈ ದಾಖಲೆ ಮುರಿಯುವುದರಲ್ಲಿ ಕೆಜಿಎಫ್ ಚಾಪ್ಟರ್ 1 ಕೂಡ ವಿಫಲವಾಗಿತ್ತು. ಆದರೆ ಈ ದಾಖಲೆಯನ್ನು ಐದು ವರ್ಷಗಳ ಬಳಿಕ ಪುನೀತ್ ಅಭಿನಯದ ಜೇಮ್ಸ್ ಹಾಗೂ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಮುರಿದಿದ್ದವು.

  ಮೈಸೂರು ನಗರದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳು

  ಮೈಸೂರು ನಗರದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳು

  ಮೈಸೂರು ನಗರದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

  1. ಕೆಜಿಎಫ್ ಚಾಪ್ಟರ್ 2 - 8.5 ಕೋಟಿ

  2. ಜೇಮ್ಸ್ - 6.5 ಕೋಟಿ

  3. ರಾಜಕುಮಾರ - 5.73 ಕೋಟಿ

  4. ಕಾಂತಾರ - 4 ಕೋಟಿ ( ಇನ್ನೂ ಪ್ರದರ್ಶನಗೊಳ್ಳುತ್ತಿದೆ )

  5. ಕೆಜಿಎಫ್ ಚಾಪ್ಟರ್ 1 - 3.8 ಕೋಟಿ

  6. ರಾಬರ್ಟ್ - 3.7 ಕೋಟಿ

  7. ವಿಕ್ರಾಂತ್ ರೋಣ -3.1 ಕೋಟಿ

  English summary
  Kantara beats KGF chapter 1 lifetime collection in Mysuru city now all eyes on Raajkumara gross. Read on
  Tuesday, October 11, 2022, 20:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X