For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' 400 ಕೋಟಿ ಕ್ಲಬ್ ಸೇರಿದ 9ನೇ ಸೌತ್ ಚಿತ್ರ; 400 ಕೋಟಿ ಕ್ಲಬ್‌ ಸೇರಿರುವ ಚಿತ್ರಗಳು ಯಾವುವು?

  |

  ವಿಶ್ವದಾದ್ಯಂರ ಸದ್ದು ಮಾಡುತ್ತಿರುವ ಕಾಂತಾರ ಚಿತ್ರ ದಾಖಲೆ ಮೇಲೆ ದಾಖಲೆ ಬರೆದಿದೆ. ಇನ್ನು ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ ಚಿತ್ರ ಬಿಡುಗಡೆಗೂ ಮುನ್ನ ಹಿಟ್ ಆಗಬಹುದು ಎಂಬ ಊಹೆ ಇತ್ತು. ಬಿಡುಗಡೆಯಾದ ನಂತರ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಚಿತ್ರ ನೂರು ಕೋಟಿ ಕ್ಲಬ್ ಸೇರಿ ಸಾಧನೆ ಮಾಡಬಹುದು ಎಂಬ ಊಹೆ ಇತ್ತೇ ಹೊರತು ಯಾರೂ ಸಹ ಚಿತ್ರ 400 ಕೋಟಿ ಕ್ಲಬ್ ಸೇರಲಿದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ.

  ಆದರೆ ಕಡಿಮೆ ಬಜೆಟ್‌ನಲ್ಲಿ ತಯಾರಾಗಿದ್ದ ಕಾಂತಾರ ಚಿತ್ರ 400 ಕೋಟಿ ಕ್ಲಬ್ ಸೇರುವ ಮೂಲಕ ಚಿತ್ರವೊಂದರ ಕಂಟೆಂಟ್ ಚೆನ್ನಾಗಿದ್ದರೆ ಆ ಚಿತ್ರ ಬೃಹತ್ ಗಳಿಕೆ ಮಾಡಲಿದೆ, ಬಿಗ್ ಬಜೆಟ್ ಚಿತ್ರವಾ ಅಥವಾ ಸಣ್ಣ ಬಜೆಟ್ ಚಿತ್ರವಾ ಎಂಬುದು ಲೆಕ್ಕಕ್ಕೆ ಬರುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಇನ್ನು ಈ ಮೂಲಕ ಕಾಂತಾರ ಚಿತ್ರ 400 ಕೋಟಿ ಕೋಟಿ ಕ್ಲಬ್ ಸೇರಿದ ದಕ್ಷಿಣ ಭಾರತದ 9ನೇ ಚಿತ್ರ ಎನಿಸಿಕೊಂಡಿದೆ.

  ಹೌದು, ಸಿನಿಮಾ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು ಎಂಟು ದಕ್ಷಿಣ ಭಾರತದ ಚಿತ್ರಗಳು 400 ಕೋಟಿ ಕ್ಲಬ್ ಸೇರಿದ್ದವು. ಸದ್ಯ ಕಾಂತಾರ ಮೂಲಕ ಈ ಸಂಖ್ಯೆ ಒಂಬತ್ತಕ್ಕೆ ಏರಿಕೆ ಕಂಡಿದ್ದು, ಈ ಎಲ್ಲಾ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

  400 ಕೋಟಿ ಕ್ಲಬ್‌ನಲ್ಲಿರುವ ದಕ್ಷಿಣ ಭಾರತದ ಚಿತ್ರಗಳು

  400 ಕೋಟಿ ಕ್ಲಬ್‌ನಲ್ಲಿರುವ ದಕ್ಷಿಣ ಭಾರತದ ಚಿತ್ರಗಳು

  1. ಬಾಹುಬಲಿ ದ ಬೆಗಿನಿಂಗ್

  2. ಬಾಹುಬಲಿ ದ ಕನ್‌ಕ್ಲೂಷನ್

  3. ರೊಬೊ 2.0

  4. ಸಾಹೋ

  5. ಆರ್‌ಆರ್‌ಆರ್‌

  6. ಕೆಜಿಎಫ್ 2

  7. ವಿಕ್ರಮ್

  8. ಪೊನ್ನಿಯಿನ್ ಸೆಲ್ವನ್ 1

  9. ಕಾಂತಾರ

  ಈ ಚಿತ್ರಗಳ ಒಟ್ಟಾರೆ ಕಲೆಕ್ಷನ್

  ಈ ಚಿತ್ರಗಳ ಒಟ್ಟಾರೆ ಕಲೆಕ್ಷನ್

  ಇನ್ನು 400 ಕೋಟಿ ಕ್ಲಬ್ ಸೇರಿರುವ ಈ ಚಿತ್ರಗಳ ಒಟ್ಟಾರೆ ಕಲೆಕ್ಷನ್ ಈ ಕೆಳಕಂಡಂತಿದೆ

  1. ಬಾಹುಬಲಿ ದ ಬೆಗಿನಿಂಗ್ - 600 ಕೋಟಿ ರೂಪಾಯಿಗಳು

  2. ಬಾಹುಬಲಿ ದ ಕನ್‌ಕ್ಲೂಷನ್ - 1800 ಕೋಟಿ ರೂಪಾಯಿಗಳು

  3. ರೊಬೊ 2.0 - 625 ಕೋಟಿ ರೂಪಾಯಿಗಳು

  4. ಸಾಹೋ - 439 ಕೋಟಿ ರೂಪಾಯಿಗಳು

  5. ಆರ್‌ಆರ್‌ಆರ್‌ - 1200 ಕೋಟಿ ರೂಪಾಯಿಗಳು

  6. ಕೆಜಿಎಫ್ 2 - 1250 ಕೋಟಿ ರೂಪಾಯಿಗಳು

  7. ವಿಕ್ರಮ್ - 420 ಕೋಟಿ ರೂಪಾಯಿಗಳು

  8. ಪೊನ್ನಿಯಿನ್ ಸೆಲ್ವನ್ 1 - 480 ಕೋಟಿ ರೂಪಾಯಿಗಳು

  9. ಕಾಂತಾರ - 401 ಕೋಟಿ ರೂಪಾಯಿಗಳು

  2022ರಲ್ಲಿ 400 ಕೋಟಿ ಕ್ಲಬ್ ಸೇರಿದ ಐದು ಚಿತ್ರಗಳು

  2022ರಲ್ಲಿ 400 ಕೋಟಿ ಕ್ಲಬ್ ಸೇರಿದ ಐದು ಚಿತ್ರಗಳು

  ಇನ್ನು ಈ ವರ್ಷ ದಕ್ಷಿಣ ಭಾರತದ ಒಟ್ಟು ಐದಯ ಚಿತ್ರಗಳು 400 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿರುವುದು ವಿಶೇಷವಾಗಿದೆ. ಇಷ್ಟು ವರ್ಷಗಳಲ್ಲಿ ದಕ್ಷಿಣ ಭಾರತದ ನಾಲ್ಕು ಚಿತ್ರಗಳು ಮಾತ್ರ ಈ ಮೈಲಿಗಲ್ಲನ್ನು ಮಟ್ಟಿದ್ದರೆ ಈ ವರ್ಷವೇ ಐದು ಚಿತ್ರಗಳು ಈ ಮೈಲಿಗ್ಲಲನ್ನು ಮುಟ್ಟಿವೆ. ಈ ವರ್ಷ 400 ಕೋಟಿ ಕ್ಲಬ್ ಸೇರಿದ ಚಿತ್ರಗಳೆಂದರೆ: ಆರ್ ಆರ್ ಆರ್, ಕೆಜಿಎಫ್ ಚಾಪ್ಟರ್ 2, ವಿಕ್ರಮ್, ಪೊನ್ನಿಯಿನ್ ಸೆಲ್ವನ್ 1 ಹಾಗೂ ಕಾಂತಾರ.

  English summary
  Kanthara becomes the 9th south movie to enter 400 crores club; Here is the all movies list. Take a look
  Wednesday, November 23, 2022, 17:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X