twitter
    For Quick Alerts
    ALLOW NOTIFICATIONS  
    For Daily Alerts

    ಐಎಂಡಿಬಿ ರೇಟಿಂಗ್: ಭಾರತದಲ್ಲೇ ಕಾಂತಾರ ನಂಬರ್ 1; ಬಿಗ್ ಬಜೆಟ್ ಚಿತ್ರಗಳೇ ಕಾಂತಾರ ಮುಂದೆ ಸೋತವಲ್ಲ!

    |

    ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರ ಮಾಡುತ್ತಿರುವ ದಾಖಲೆ ಒಂದೆರಡಲ್ಲ. 400 - 500 ಕೋಟಿ ಸುರಿದು ದೇಶದ ಪ್ರಮುಖ ನಗರಗಳನ್ನು ಸುತ್ತಿ ಪ್ರಮೋಷನ್ ಮಾಡಿದ ಚಿತ್ರಗಳಿಗೂ ಸಿಗದಿದ್ದ ಕ್ರೇಜ್ ಹಾಗೂ ಪ್ರತಿಕ್ರಿಯೆ ಕಾಂತಾರ ಚಿತ್ರಕ್ಕೆ ದಕ್ಕಿದೆ. ಹೌದು, ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದಿರುವ ಕಾಂತಾರ ಚಿತ್ರ ಈಗ ಐಎಂಡಿಬಿಯಲ್ಲೂ ದಾಖಲೆ ಬರೆದು ಸೈ ಎನಿಸಿಕೊಂಡಿದೆ.

    ಕಳೆದ ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡ ಕಾಂತಾರ ಚಿತ್ರ ಪ್ರೀಮಿಯರ್ ಶೋಗಳಿಂದಲೇ ಮಾಸ್ಟರ್ ಪೀಸ್ ಎಂಬ ವಿಮರ್ಶೆಗಳನ್ನು ಪಡೆದುಕೊಳ್ಳಲಾರಂಭಿಸಿತು. ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದ ಪರಭಾಷಾ ಸಿನಿ ರಸಿಕರು ಚಿತ್ರಕ್ಕೆ ಕ್ಲೀನ್ ಬೋಲ್ಡ್ ಆಗಿದ್ದರು. ಇಂತಹ ಒಳ್ಳೆಯ ಚಿತ್ರವನ್ನು ನಮ್ಮ ಭಾಷೆಗಳಿಗೂ ಡಬ್ ಮಾಡಿ ಎಂಬ ಬೇಡಿಕೆಯನ್ನು ಇಟ್ಟರು. ಅದರಂತೆ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೂ ಡಬ್ ಮಾಡಿ ಬಿಡುಗಡೆಗೊಳಿಸುತ್ತಿದೆ.

    ಹೀಗೆ ಪ್ಯಾನ್ ಇಂಡಿಯಾ ಚಿತ್ರವಾಗಿ ಪರಿವರ್ತನೆಗೊಳ್ಳುತ್ತಿರುವ ಕಾಂತಾರ ಐಎಂಡಿಬಿಯಲ್ಲಿ ಮತ್ತಷ್ಟು ಮತಗಳನ್ನು ಪಡೆದುಕೊಳ್ಳಲಿದ್ದು, ವಿಶೇಷವಾಗಿ ಹಿಂದಿ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗಲಿರುವ ಕಾರಣ ಐಎಂಡಿಬಿ ರೇಟಿಂಗ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹೆಚ್ಚಿವೆ. ಇನ್ನು ಕಾಂತಾರ ಇಂದಿನ ವೇಳೆಗೆ ( ಅಕ್ಟೋಬರ್ 13 ) ಐಎಂಡಿಬಿಯಲ್ಲಿ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

    ಐಎಂಡಿಬಿಯಲ್ಲಿ ಕಾಂತಾರ ಅಬ್ಬರ

    ಐಎಂಡಿಬಿಯಲ್ಲಿ ಕಾಂತಾರ ಅಬ್ಬರ

    ಇಂದಿಗೆ ( ಅಕ್ಟೋಬರ್ 13 ) ಕಾಂತಾರ ಇಂಟರ್‌ನ್ಯಾಷನಲ್ ಮೂವಿ ಡೇಟಾಬೇಸ್ ( ಐಎಂಡಿಬಿ ) 13000 ವೋಟ್‌ಗಳನ್ನು ಪಡೆದುಕೊಂಡು 10 ಅಂಕಗಳಿಗೆ 9.6 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ಭಾರತ ಚಿತ್ರರಂಗದ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾವುದೇ ಚಿತ್ರವೂ ಇಷ್ಟು ರೇಟಿಂಗ್‌ನ್ನು ಪಡೆದುಕೊಂಡ ಉದಾಹರಣೆಗಳಿಲ್ಲ. ಬಾಹುಬಲಿ 8.2, ಕೆಜಿಎಫ್ ಚಾಪ್ಟರ್ 2 8.4, ತಮಿಳಿನ ವಿಕ್ರಮ್ 8.4, ಜೈ ಭೀಮ್ 8.9, 777 ಚಾರ್ಲಿ ರೀತಿಯ ಹಿಟ್ ಚಿತ್ರಗಳೇ 9 ಅಂಕಗಳನ್ನು ಪಡೆದುಕೊಂಡಿವೆ.

    ಬಿಗ್ ಬಜೆಟ್ ಚಿತ್ರಗಳಿಗೂ ಇಲ್ಲ ಈ ಪರಿ ರೇಟಿಂಗ್

    ಬಿಗ್ ಬಜೆಟ್ ಚಿತ್ರಗಳಿಗೂ ಇಲ್ಲ ಈ ಪರಿ ರೇಟಿಂಗ್

    ಇನ್ನು ಹಲವಾರು ಬಿಗ್ ಬಜೆಟ್ ಚಿತ್ರಗಳೂ ಸಹ ಕಾಂತಾರ ಚಿತ್ರದ ರೇಟಿಂಗ್ ಸನಿಹಕ್ಕೂ ಬಂದಿಲ್ಲ ಎಂದು ಹೇಳಬಹುದು. ಬಾಹುಬಲಿ, ಕೆಜಿಎಫ್ ರೀತಿಯ ಬಿಗ್ ಬಜೆಟ್ ಚಿತ್ರಗಳು ಕಾಂತಾರ ರೀತಿಯ ರೇಟಿಂಗ್ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ಈ ವರ್ಷ ತೆರೆಕಂಡ ಬಿಗ್ ಬಜೆಟ್ ಚಿತ್ರ ಬ್ರಹ್ಮಾಸ್ತ್ರ 5.6 ಹಾಗೂ ಕಾಂತಾರ ಜತೆ ತೆರೆಕಂಡ ಪೊನ್ನಿಯಿನ್ ಸೆಲ್ವನ್ 8.4 ಅಂಕಗಳನ್ನು ಮಾತ್ರ ಪಡೆದುಕೊಂಡಿದ್ದು ಕಾಂತಾರ ಮುಂದೆ ಸೋತಿವೆ.

    ಬುಕ್‌ ಮೈ ಶೋ ಅಪ್ಲಿಕೇಶನ್‌ನಲ್ಲೂ ಸಹ ಕಾಂತಾರ ದಂಡಯಾತ್ರೆ

    ಬುಕ್‌ ಮೈ ಶೋ ಅಪ್ಲಿಕೇಶನ್‌ನಲ್ಲೂ ಸಹ ಕಾಂತಾರ ದಂಡಯಾತ್ರೆ

    ಇನ್ನು ಕಾಂತಾರ ಬುಕ್‌ ಮೈ ಶೋನಲ್ಲಿ ಅತಿಹೆಚ್ಚು ರೇಟಿಂಗ್ ಪಡೆದುಕೊಂಡ ಚಿತ್ರ ಎಂಬ ವಿಶ್ವ ದಾಖಲೆಯನ್ನು ಈಗಾಗಲೇ ಪಡೆದುಕೊಂಡಿದ್ದು, ಇಂದಿಗೆ ( ಅಕ್ಟೋಬರ್ 10 ) 73000 ವೋಟ್ ಪೂರೈಸಿದೆ ಹಾಗೂ ಇನ್ನೂ ಸಹ 99% ರೇಟಿಂಗ್ ಅನ್ನೇ ಪಡೆದುಕೊಂಡಿದೆ. ಈ ಮೂಲಕ ಕಾಂತಾರ ಎಲ್ಲಾ ರೇಟಿಂಗ್ ಅಪ್ಲಿಕೇಶನ್‌ನಲ್ಲೂ ಸಹ ಅಬ್ಬರಿಸಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

    English summary
    Kantara becomes the highest rated Indian film on IMDB by beating all movies. Read on
    Friday, October 14, 2022, 9:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X