'ಕಾಟೇರ' ಸಕ್ಸಸ್ ಬೆನ್ನಲ್ಲೇ 'ಕಾಂತಾರ' ಪೋಸ್ಟ್‌ಗಳು ವೈರಲ್ ಆಗಿದ್ದೇಕೆ? ಹೊಂಬಾಳೆಗೆ ಮಸಿ ಬಳಿಯುವ ಹುನ್ನಾರ?

ನಟ ದರ್ಶನ್ ನಟನೆಯ 'ಕಾಟೇರ' ಸಿನಿಮಾ 24ನೇ ದಿನವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ. ಇದೆಲ್ಲದರ ನಡುವೆ ದಿಢೀರನೆ ಸೋಶಿಯಲ್ ಮೀಡಿಯಾದಲ್ಲಿ 'ಕಾಂತಾರ' ಕಲೆಕ್ಷನ್ ಬಗ್ಗೆ ಚರ್ಚೆ ಶುರುವಾಗಿದೆ.

ಒಂದೂವರೆ ವರ್ಷದ ಹಿಂದೆ ಬಿಡುಗಡೆ ಆಗಿದ್ದ ' ಕಾಂತಾರ' ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿ ಸದ್ದು ಮಾಡಿತ್ತು. 350 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದ್ದಾಗಿ ಹೇಳಲಾಗಿತ್ತು. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಸಿನಿರಸಿಕರು ಫಿದಾ ಆಗಿದ್ದರು. ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಿಸಿ ಗೆದ್ದಿತ್ತು. ಅಂದಾಜು 15 ಕೋಟಿ ರೂ. ಬಜೆಟ್ ಸಿನಿಮಾ ಬರೋಬ್ಬರಿ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು ಎಲ್ಲರ ಹುಬ್ಬೇರಿಸಿತ್ತು.

Kantara collection posts goes viral amid Kaatere enters ₹200 crore club

ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲ ಟ್ರೋಲ್ ಪೇಜ್‌ಗಳಲ್ಲಿ 'ಕಾಂತಾರ' ಚಿತ್ರದ ಪೋಸ್ಟ್‌ಗಳು ದಿಢೀರ್ ವೈರಲ್ ಆಗಲು ಆರಂಭವಾಗಿದೆ. ಇದು ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

'ಕಾಂತಾರ' ಸಿನಿಮಾ ಬಂದು ಹೋಗಿ ಒಂದೂವರೆ ವರ್ಷ ಆಯಿತು. ಈಗ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುವ ಪೋಸ್ಟ್‌ಗಳನ್ನು ಹಾಕಲು ಕಾರಣ ಏನು? 'ಕಾಟೇರ' ಸಕ್ಸಸ್ ಕಂಡು ಈ ರೀತಿ 'ಕಾಂತಾರ' ಸಿನಿಮಾವನ್ನು ಮೆರೆಸುವ ಕೆಲಸ ನಡೆಯುತ್ತಿದ್ಯಾ? ಹೊಂಬಾಳೆ ಸಂಸ್ಥೆ ಈ ರೀತಿ ಮಾಡುತ್ತಿದ್ಯಾ? ಅಂತ ಚರ್ಚೆ ಶುರುವಾಗಿದೆ. ಒಮ್ಮಿಂದೊಮ್ಮೆಲೆ 'ಕಾಂತಾರ' ಚಿತ್ರಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ವೈರಲ್ ಆಗುತ್ತಿರುವುದು ಯಾಕೆ? ಎನ್ನುವ ಪ್ರಶ್ನೆಯನ್ನು ದರ್ಶನ್ ಅಭಿಮಾನಿಗಳು ಕೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Kantara collection posts goes viral amid Kaatere enters ₹200 crore club

ಹೊಂಬಾಳೆ ಸಂಸ್ಥೆ ಇಂತಹ ಕೀಳುಮಟ್ಟಕ್ಕೆ ಇಳಿಯುವುದಿಲ್ಲ. ಯಾರೋ ಫ್ಯಾನ್ಸ್ ವಾರ್ ಸೃಷ್ಟಿಸಲು ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವುದು ಕೆಲವರ ವಾದ. ಹೊಂಬಾಳೆ ಸಂಸ್ಥೆಯ ಮೂಲಗಳಿಂದ ಕೂಡ ಇದನ್ನೆಲ್ಲಾ ಯಾರು ಮಾಡಿಸುತ್ತಿದ್ದಾರೆ ನಮಗೆ ಗೊತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಕೆಸರೆರಚಾಟ ಮುಂದುವರೆದಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಇಂತಹ ಸಂಸ್ಥೆ ಇಂತಹ ಪೇಯ್ಡ್ ಪೋಸ್ಟ್‌ಗಳನ್ನು ಯಾಕೆ ಮಾಡಿಸುತ್ತದೆ? 'ಕಾಟೇರ' ಆಗಲಿ 'ಕಾಂತಾರ' ಆಗಲಿ ಎರಡೂ ಕನ್ನಡ ಸಿನಿಮಾಗಳೇ. ಎರಡೂ ಚಿತ್ರಗಳು 200 ಕೋಟಿ ರೂ. ಗಳಿಸಿದ್ದರೆ ಎಲ್ಲರಿಗೂ ಖುಷಿನೇ. ಇದರಲ್ಲಿ ಕಿರಿಕ್ ಯಾಕೆ? ಎನ್ನುವುದು ಕೆಲವರ ಪ್ರಶ್ನೆ.

ಕೆಲ ದಿನಗಳ ಹಿಂದೆ 'ಸಲಾರ್' ಸಿನಿಮಾ ವಿಚಾರದಲ್ಲೂ ಇಂತದ್ದೇ ಸುಳ್ಳು ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಚಿತ್ರದ ಕಲೆಕ್ಷನ್ ಬಗ್ಗೆ ಹೊಂಬಾಳೆ ಸಂಸ್ಥೆ ಮಾಡಿದ್ದ ಪೋಸ್ಟ್‌ಗಳನ್ನು ಬಳಿಕ ಡಿಲೀಟ್ ಮಾಡಿದೆ ಎಂದು ಒಂದಷ್ಟು ಪೋಸ್ಟ್‌ಗಳು ವೈರಲ್ ಆಗಿತ್ತು. ಆದರೆ ಸಂಸ್ಥೆ ತನ್ನ ಅಧಿಕೃತ ಪೇಜ್‌ನಲ್ಲಿ ಕಲೆಕ್ಷನ್ ಬಗ್ಗೆ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಸಂಸ್ಥೆ ಹೆಸರಿಗೆ ಮಸಿ ಬಳಿಯುವಂತಹ ಈ ಪೋಸ್ಟ್‌ಗಳ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿತ್ತು.

ಸದ್ಯ 'ಕಾಟೇರ' ಸಿನಿಮಾ 25ನೇ ದಿನದ ಸಂಭ್ರಮದಲ್ಲಿದೆ. ದರ್ಶನ್ ಸಿನಿಮಾ ಕರಿಯರ್‌ನಲ್ಲೇ ಬೆಸ್ಟ್ ಸಿನಿಮಾ ಎನಿಸಿಕೊಂಡಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಸಿನಿಮಾ ತೆರೆಕಂಡಿದೆ. ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿದ್ದು ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಜೀ5 ಸಂಸ್ಥೆ 'ಕಾಟೇರ' ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಸಾಮಾನ್ಯವಾಗಿ 45 ದಿನಕ್ಕೆ ಓಟಿಟಿ ಸ್ಟ್ರೀಮಿಂಗ್ ಒಪ್ಪಂದ ಆಗಿರುತ್ತದೆ. ಆದರೆ 'ಕಾಟೇರ' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಸದ್ಯಕ್ಕೆ ಓಟಿಟಿಗೆ ಬರುವುದು ಅನುಮಾನ ಎನ್ನಲಾಗುತ್ತಿದೆ.

More from Filmibeat

English summary
Kaatera: Darshan Fans angry over Kantara collection posts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X