For Quick Alerts
  ALLOW NOTIFICATIONS  
  For Daily Alerts

  ಅತಿಹೆಚ್ಚು ಪ್ರದರ್ಶನ: ಬೆಂಗಳೂರಿನಲ್ಲಿ ದಾಖಲೆ ಬರೆದ ಕಾಂತಾರ!

  |

  ಕಾಂತಾರ ಚಿತ್ರ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಹಲವಾರು ದಾಖಲೆಗಳನ್ನು ಬರೆಯುತ್ತಾ ಬಂದಿದೆ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ನಂತರ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಯಿತು. ಇನ್ನು ಮೊದಲ ದಿನ ಕರ್ನಾಟಕದಲ್ಲಿ ಒಂದೂವರೆ ಕೋಟಿ ಕಲೆಹಾಕಿದ್ದ ಕಾಂತಾರ ಚಿತ್ರ ಈಗ ಒಟ್ಟು 401 ಕೋಟಿ ಕಲೆಕ್ಷನ್ ಮಾಡಿದೆ.

  ಇನ್ನು ಕರ್ನಾಟಕದಲ್ಲಿ ಸುಮಾರು 168 ಕೋಟಿ ಕಲೆಕ್ಷನ್ ಮಾಡಿರುವ ಕಾಂತಾರ ಚಿತ್ರ ಬಿಡುಗಡೆಗೊಂಡಿದ್ದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಪೂರೈಸಿದೆ ಹಾಗೂ ರಾಜ್ಯದಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಚಿತ್ರ ಎಂಬ ದಾಖಲೆಯನ್ನೂ ಬರೆದಿದೆ. ಹೀಗೆ ರಾಜ್ಯದಲ್ಲಿ ಹಲವಾರು ದಾಖಲೆಯನ್ನು ನಿರ್ಮಿಸಿದ್ದ ಕಾಂತಾರ ಇದೀಗ ಬೆಂಗಳೂರು ನಗರದಲ್ಲಿ ಬೃಹತ್ ದಾಖಲೆಯೊಂದನ್ನು ನಿರ್ಮಿಸಿದೆ.

  ಹೌದು, ಕಾಂತಾರ ಚಿತ್ರ ಬೆಂಗಳೂರು ನಗರವೊಂದರಲ್ಲಿಯೇ 20000 ಪ್ರದರ್ಶನಗಳನ್ನು ಕಂಡಿದೆ. ಇದು ಬೆಂಗಳೂರು ನಗರದಲ್ಲಿ ಯಾವ ಚಿತ್ರವೂ ಮಾಡಿರದ ದಾಖಲೆಯಾಗಿದೆ. ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡೂ ಸೇರಿ ಕಾಂತಾರ ಇಷ್ಟು ಪ್ರದರ್ಶನಗಳನ್ನು ಕಂಡಿದೆ.

  ಇನ್ನು ಕಾಂತಾರ ಚಿತ್ರ ಸದ್ಯ ಅಮೆಜಾನ್ ಪ್ರೈಮ್ ವಿಡಿಯೊನಲ್ಲಿಯೂ ಬಿಡುಗಡೆಗೊಂಡಿದೆ. ಹಾಗಿದ್ದರೂ ಸಹ ಬೆಂಗಳೂರಿನ ಕೆಜಿ ರಸ್ತೆ ಚಿತ್ರಮಂದಿರ ಸೇರಿದಂತೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಾಂತಾರ ಇನ್ನೂ ಸಹ ಪ್ರದರ್ಶನಗೊಳಗಳ್ಳುತ್ತಿದೆ. ಈ ಹಿಂದೆ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಈ ದಾಖಲೆಯನ್ನು ಬರೆದಿತ್ತು. ಕೆಜಿಎಫ್ ಚಾಪ್ಟರ್ 2 17000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಬೆಂಗಳೂರು ನಗರವೊಂದರಲ್ಲಿಯೇ ಕಂಡಿತ್ತು.

  English summary
  Kantara completes 20,000 shows in Bengaluru City and this is highest for any film
  Saturday, November 26, 2022, 9:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X