For Quick Alerts
  ALLOW NOTIFICATIONS  
  For Daily Alerts

  16ನೇ ದಿನ 'ಕಾಂತಾರ' ದಾಖಲೆ ಗಳಿಕೆ: ಹೊಂಬಾಳೆ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ

  |

  'ಕಾಂತಾರ' ದಾಖಲೆಗಳ ಸರಮಾಲೆ ಮುಂದುವರೆದಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಹೆಚ್ಚುತ್ತಾ ಹೋಗ್ತಿದೆ. ಹಿಂದಿ, ತೆಲುಗು, ತಮಿಳಿಗೆ ಡಬ್ ಆಗಿ ರಿಲೀಸ್ ಆಗಿರುವ ಚಿತ್ರಕ್ಕೂ ಹೊರ ರಾಜ್ಯಗಳಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ತಿದೆ. 'ಕಾಂತಾರ' ಸಿನಿಮಾ ಶನಿವಾರ (ಅಕ್ಟೋಬರ್ 15) ಹೊಸ ದಾಖಲೆ ಸೃಷ್ಟಿ ಮಾಡಿದೆ. ಬಿಡುಗಡೆಯಾದ 16ನೇ ದಿನಕ್ಕೆ 15 ಕೋಟಿ ರೂ. ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದೆ.

  'ಕಾಂತಾರ' ಚಿತ್ರದ ಕನ್ನಡ ಅವತರಣಿಕೆಯು ಸೆಪ್ಟೆಂಬರ್ 30ರಂದು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಯಿತು. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಭಾಷಿಕರ ಬೇಡಿಕೆ ಮೇರೆಗೆ ಚಿತ್ರವನ್ನು ಅಕ್ಟೋಬರ್ 14ರಂದು ಹಿಂದಿ,15ರಂದು ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಹಾಗಾಗಿ ಸಿನಿಮಾ ಕಲೆಕ್ಷನ್ 15ನೇ ದಿನ ದಿಢೀರ್ ಹೆಚ್ಚಳ ಕಂಡಿದೆ. ಇದು ನಿರ್ಮಾಪಕರ ಸಂತಸಕ್ಕೆ ಕಾರಣವಾಗಿದೆ.

  'ಕಾಂತಾರ' ಹಿಂದಿ ವರ್ಷನ್ 3 ದಿನದ ಒಟ್ಟು ಕಲೆಕ್ಷನ್ ಎಷ್ಟು? ಕಾರ್ತಿಕೇಯ 2 ಕಲೆಕ್ಷನ್ ಬ್ರೇಕ್ ಆದರೂ ‌ಆಶ್ಚರ್ಯವಿಲ್ಲ!'ಕಾಂತಾರ' ಹಿಂದಿ ವರ್ಷನ್ 3 ದಿನದ ಒಟ್ಟು ಕಲೆಕ್ಷನ್ ಎಷ್ಟು? ಕಾರ್ತಿಕೇಯ 2 ಕಲೆಕ್ಷನ್ ಬ್ರೇಕ್ ಆದರೂ ‌ಆಶ್ಚರ್ಯವಿಲ್ಲ!

  ಶುಕ್ರವಾರ ಹಿಂದಿಯಲ್ಲಿ ತೆರೆಕಂಡ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಶನಿವಾರ ತೆಲುಗು ಹಾಗೂ ತಮಿಳು ವರ್ಷನ್ ಕಲೆಕ್ಷನ್ ಸೇರಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಕಾಣುವಂತಾಯಿತು. ಭಾನುವಾರ ಈ ಮೊತ್ತ ಮತ್ತಷ್ಟು ಹೆಚ್ಚು ಆಗಿರುವ ಸಾಧ್ಯತೆಯಿದೆ.

   ಉತ್ತರ ಭಾರದಲ್ಲಿ 2.75 ಕೋಟಿ ರೂ. ಗಳಿಕೆ

  ಉತ್ತರ ಭಾರದಲ್ಲಿ 2.75 ಕೋಟಿ ರೂ. ಗಳಿಕೆ

  ಶನಿವಾರದಂದು ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 2.75 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿ ಅವತರಣಿಕೆಯು ಶುಕ್ರವಾರವಷ್ಟೇ (ಅಕ್ಟೋಬರ್ 14) ಬಿಡುಗಡೆಯಾಗಿತ್ತು. ಮೊದಲ ದಿನದ ಕಲೆಕ್ಷನ್‌ಗೆ ಹೋಲಿಸಿದರೆ, ಎರಡನೆಯ ದಿನ ಕಲೆಕ್ಷನ್ ಡಬಲ್ ಆಗಿದ್ದು ವಿಶೇಷ. ಇನ್ನು, ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಯಿಂದ 12 ಕೋಟಿ ರೂ. ಗಳಿಕೆ ಆಗಿದೆ.

  Ashwini: 'ಕಾಂತಾರ' ಲೀಲಾಳ ಮೂಗುತಿ ಫುಲ್ ಟ್ರೆಂಡ್: ಎರಡೂ ಕಡೆ ಬೊಟ್ಟು ಇಟ್ಟ ಕಿರುತೆರೆ ನಟಿ!Ashwini: 'ಕಾಂತಾರ' ಲೀಲಾಳ ಮೂಗುತಿ ಫುಲ್ ಟ್ರೆಂಡ್: ಎರಡೂ ಕಡೆ ಬೊಟ್ಟು ಇಟ್ಟ ಕಿರುತೆರೆ ನಟಿ!

   ಶನಿವಾರ 15 ಕೋಟಿ ರೂ. ಕಲೆಕ್ಷನ್

  ಶನಿವಾರ 15 ಕೋಟಿ ರೂ. ಕಲೆಕ್ಷನ್

  ಶನಿವಾರ ಒಂದೇ ದಿನ 'ಕಾಂತಾರ' ಚಿತ್ರವು ನಾಲ್ಕು ಭಾಷೆಗಳಿಂದ ಸೇರಿ 15 ಕೋಟಿ ರೂ. ಗಳಿಕೆ ಕಂಡಿದೆ. 'ಕಾಂತಾರ' ಚಿತ್ರದ ಕನ್ನಡ ಅವತರಿಣಿಕೆಯು ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದು, ಶನಿವಾರಕ್ಕೆ 16 ದಿನಗಳಾಗಿವೆ. 16ನೇ ದಿನ ನಾಲ್ಕು ಭಾಷೆಗಳಿಂದ 15 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

   ಧೂಳೆಬ್ಬಿಸಿದ 'ಕಾಂತಾರ' ತೆಲುಗು ವರ್ಷನ್

  ಧೂಳೆಬ್ಬಿಸಿದ 'ಕಾಂತಾರ' ತೆಲುಗು ವರ್ಷನ್

  ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು 'ಕಾಂತಾರ' ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರದ ಹೈಲೆಟ್. ಇನ್ನು ಆಂಧ್ರ, ತೆಲಂಗಾಣದಲ್ಲೂ ಸಿನಿಮಾ ವೀಕೆಂಡ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಶನಿವಾರ, ಭಾನುವಾರ ತೆಲುಗು ವರ್ಷನ್ 10 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.

   'ಗಾಡ್‌ಫಾದರ್'ಗೂ 'ಕಾಂತಾರ' ಪೆಟ್ಟು

  'ಗಾಡ್‌ಫಾದರ್'ಗೂ 'ಕಾಂತಾರ' ಪೆಟ್ಟು

  ಸದ್ಯ ತೆಲುಗು ರಾಜ್ಯಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗಿಲ್ಲ. ಅಕ್ಟೋಬರ್ 5ಕ್ಕೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ 'ಗಾಡ್‌ಫಾದರ್' ಸಿನಿಮಾ ರಿಲೀಸ್ ಆಗಿತ್ತು. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಚಿತ್ರ ಕುಂಟುತ್ತಾ ಸಾಗಿತ್ತು. 'ಕಾಂತಾರ' ತೆಲುಗು ವರ್ಷನ್ 'ಗಾಡ್‌ಫಾದರ್' ಚಿತ್ರಕ್ಕೆ ಪೆಟ್ಟು ಕೊಡುವ ಸುಳಿವು ಸಿಕ್ತಿದೆ. ಚಿರಂಜೀವಿ ಚಿತ್ರಕ್ಕಿಂತ ಕನ್ನಡ ಡಬ್ ಸಿನಿಮಾಗೆ ರೆಸ್ಪಾನ್ಸ್ ಚೆನ್ನಾಗಿದೆ ಎನ್ನುವು ಈ ವೀಕೆಂಡ್ ಸಾಬೀತಾಗಿದೆ.

  English summary
  Kantara Day 16 Collection Rishab Shetty's Movie Earns 15 Cr Worldwide. Kantara has touched the golden 100 crore mark in just 15 days. Know More.
  Monday, October 17, 2022, 12:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X