For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಯಶಸ್ಸಿನ ಬಳಿಕ ತನ್ನ ಮುಂದಿನ ಚಿತ್ರ ಘೋಷಿಸಿದ ನಟಿ ಸಪ್ತಮಿ ಗೌಡ

  |

  ಕಾಂತಾರ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡು ಪ್ರೇಕ್ಷಕರಿಂದ ತೀವ್ರ ಪ್ರಶಂಸೆ ಪಡೆದುಕೊಂಡ ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು. ಕನ್ನಡದಲ್ಲಿ ಬಿಡುಗಡೆಯಾಗಿ ಮೊದಲನೇ ದಿನ ಒಂದೂವರೆ ಕೋಟಿ ಗಳಿಕೆ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದ್ದ ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾದ ನಂತರ ಗಲ್ಲಾಪೆಟ್ಟಿಗೆ ಲೂಟಿ ಮಾಡಿ 400 ಕೋಟಿ ಕ್ಲಬ್ ಸೇರಿದೆ.

  ಹೀಗೆ ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ ಯಾರೂ ಊಹಿಸಿರದ ಫಲಿತಾಂಶ ಕೊಡುವುದರ ಜತೆಗೆ ಈ ಚಿತ್ರದಲ್ಲಿ ಅಭಿನಯಿಸಿದ್ದ ಹಲವರ ಸಿನಿ ಜರ್ನಿಯನ್ನೂ ಸಹ ಯಾರೂ ಊಹಿಸಿರದ ಮಟ್ಟಕ್ಕೆ ಬದಲಾಯಿಸಿಬಿಟ್ಟಿತು. ಅದರಲ್ಲಿಯೂ ವಿಶೇಷವಾಗಿ ಚಿತ್ರದ ನಾಯಕ ರಿಷಬ್ ಶೆಟ್ಟಿ ಮತ್ತು ನಾಯಕಿ ಸಪ್ತಮಿ ಗೌಡ ದೊಡ್ಡ ಮಟ್ಟದ ಸಕ್ಸಸ್ ಕಂಡರು.

  ನಟಿ ಸಪ್ತಮಿ ಗೌಡ ಲುಕ್ ಹಾಗೂ ನಟನೆಗೆ ಮಾರುಹೋಗಿದ್ದ ಸಿನಿಮಾ ಮಂದಿ ಪೈಕಿ ಹಲವರು ನಟಿಯ ಕಾಲ್ ಶೀಟ್ ಪಡೆಯಲು ಪ್ರಯತ್ನ ಮಾಡಿದ್ದಂತೂ ಸತ್ಯ. ಇನ್ನು ಖಚಿತವಾಗಿ ಪರಭಾಷೆಗಳಿಂದಲೂ ಸಪ್ತಮಿ ಗೌಡರನ್ನು ಹರಸಿಬಂದಿರುತ್ತವೆ ಎಂಬುದನ್ನು ಊಹಿಸಿದ್ದ ಕನ್ನಡ ಚಿತ್ರ ಪ್ರೇಮಿಗಳು ನಟಿ ಯಾವ ಚಿತ್ರವನ್ನು ಆರಿಸಬಹುದು ಎಂಬ ಕುತೂಹಲದಲ್ಲಿದ್ದರು.

  ಇನ್ನು ಕಾಂತಾರ ಯಶಸ್ಸಿನ ಬಳಿಕ ನಟಿ ಸಪ್ತಮಿ ಗೌಡ ಅಭಿಷೇಕ್ ಅಂಬರೀಶ್ ಅಭಿನಯದ ಹಾಗೂ ಪೈಲ್ವಾನ್ ಕೃಷ್ಣ ನಿರ್ದೇಶನದ ಕಾಳಿ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಆ ಸುದ್ದಿಯೇ ಇದೀಗ ನಿಜವಾಗಿದ್ದು, ಸಪ್ತಮಿ ಈ ಚಿತ್ರದಲ್ಲಿ ನಟಿಸುತ್ತಿರುವ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

  ನಟಿ ಸಪ್ತಮಿ ಗೌಡ ಇದಕ್ಕೂ ಮುನ್ನ ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

  English summary
  Kantara fame Sapthami Gowda to romance Abhishek Ambareesh in Kaali film . Read on
  Saturday, November 26, 2022, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X