For Quick Alerts
  ALLOW NOTIFICATIONS  
  For Daily Alerts

  ಕಾಂತಾರ, ಗಂಧದ ಗುಡಿ ಯಾವ ಚಾನೆಲ್‌ನಲ್ಲಿ? ಹೊಸ ಕನ್ನಡ ಚಿತ್ರಗಳ ಟಿವಿ ರೈಟ್ಸ್ ಪಟ್ಟಿ ಇಲ್ಲಿದೆ

  |

  ಈ ವರ್ಷ ಕನ್ನಡ ಚಿತ್ರರಂಗ ಯಶಸ್ಸು ಸಾಧಿಸಿದಷ್ಟು ಉಳಿದ ಯಾವುದೇ ಚಿತ್ರರಂಗ ಸಹ ಸಾಧಿಸಿಲ್ಲ ಎಂದೇ ಹೇಳಬಹುದು. ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿದ್ದ ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ತನ್ನ ಗೆಲುವಿನ ಖಾತೆ ತೆರೆದ ಸ್ಯಾಂಡಲ್‌ವುಡ್ ನಂತರ ಜೇಮ್ಸ್, ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಇತ್ತೀಚೆಗಿನ ಕಾಂತಾರ ರೀತಿಯ ನೂರು, ಮುನ್ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿ ಭಾರತ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.

  ಅದರಲ್ಲಿಯೂ ಕಾಂತಾರ ಹೆಚ್ಚು ಹೈಪ್ ಇಲ್ಲದೇ ಸಾಮಾನ್ಯ ಬಿಡುಗಡೆ ಕಂಡು ಮೊದಲ ದಿನ ಸುಮಾರು ಒಂದೂವರೆ ಕೋಟಿ ಗಳಿಕೆ ಮಾಡಿ ನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟು ಮುನ್ನೂರು ಕೋಟಿ ಕ್ಲಬ್ ಚಿತ್ರವಾಗಿ ಬೃಹತ್ ಯಶಸ್ಸು ಸಾಧಿಸಿದ್ದು ಅತಿ ವಿಶೇಷ ಹಾಗೂ ಹೆಮ್ಮೆಯೂ ಹೌದು. ಎಂಬತ್ತು ಲಕ್ಷಕ್ಕೂ ಹೆಚ್ಚು ಜನರು ಕಾಂತಾರ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿದ್ದು, ಇತ್ತೀಚೆಗೆ ಬಿಡುಗಡೆಗೊಂಡಿರುವ ಗಂಧದ ಗುಡಿ ಚಿತ್ರ ಕೂಡ ವೀಕ್ಷಕರ ಗಮನ ಸೆಳೆಯುತ್ತಿದೆ.

  ಹೀಗೆ ಚಿತ್ರಮಂದಿರಗಳಲ್ಲಿ ತುಂಬು ಪ್ರದರ್ಶನ ನೀಡುತ್ತಿರುವ ಈ ಚಿತ್ರಗಳನ್ನು ಒಟಿಟಿ ಹಾಗೂ ಟಿವಿಯಲ್ಲಿ ವೀಕ್ಷಿಸಲು ಸಹ ಕೆಲ ವೀಕ್ಷಕರು ಕಾಯುತ್ತಿದ್ದಾರೆ. ಈ ಚಿತ್ರಗಳು ಮಾತ್ರವಲ್ಲದೇ ಇತ್ತೀಚೆಗೆ ತೆರೆಕಂಡು ಇನ್ನೂ ಸಹ ಟಿವಿ ಪ್ರೀಮಿಯರ್ ಆಗದ ಹಲವು ಕನ್ನಡ ಚಿತ್ರಗಳನ್ನು ಟಿವಿಯಲ್ಲಿ ವೀಕ್ಷಿಸಲು ಕಾಯುತ್ತಿದ್ದಾರೆ. ಅಂಥಹ ಚಿತ್ರಗಳ ಟಿವಿ ಹಕ್ಕು ಯಾವ ಚಾನೆಲ್ ಬಳಿ ಇದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

  ಇತ್ತೀಚೆಗೆ ಬಿಡುಗಡೆಗೊಂಡ ಕನ್ನಡ ಚಿತ್ರಗಳ ಟಿವಿ ಹಕ್ಕು

  ಇತ್ತೀಚೆಗೆ ಬಿಡುಗಡೆಗೊಂಡ ಕನ್ನಡ ಚಿತ್ರಗಳ ಟಿವಿ ಹಕ್ಕು

  ಇತ್ತೀಚೆಗೆ ಬಿಡುಗಡೆಗೊಂಡು ಸದ್ದು ಮಾಡಿದ ಕನ್ನಡ ಚಿತ್ರಗಳು ಯಾವ ಯಾವ ಚಾನೆಲ್‌ನಲ್ಲಿ ಪ್ರೀಮಿಯರ್ ಆಗಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

  ಗುರು ಶಿಷ್ಯರು - ಜೀ ಕನ್ನಡ

  ಕಾಂತಾರ - ಸ್ಟಾರ್ ಸುವರ್ಣ

  ಗಂಧದ ಗುಡಿ - ಜೀ ಕನ್ನಡ

  ಮಾನ್ಸೂನ್ ರಾಗ - ಜೀ ಕನ್ನಡ

  ಹೆಡ್ ಬುಷ್ - ಜೀ ಕನ್ನಡ

  ತೋತಾಪುರಿ ಚಾಪ್ಟರ್ 1 - ಜೀ ಕನ್ನಡ

  ಲಕ್ಕಿ ಮ್ಯಾನ್ - ಸ್ಟಾರ್ ಸುವರ್ಣ

  ರೇಮೊ - ಜೀ ಕನ್ನಡ

  ದಿಲ್ ಪಸಂದ್ - ಉದಯ ಟಿವಿ

  ಈ ಚಿತ್ರಗಳ ಒಟಿಟಿ

  ಈ ಚಿತ್ರಗಳ ಒಟಿಟಿ

  ಗುರು ಶಿಷ್ಯರು - ಜೀ ಫೈವ್

  ಕಾಂತಾರ - ಅಮೆಜಾನ್ ಪ್ರೈಮ್ ವಿಡಿಯೊ

  ಗಂಧದ ಗುಡಿ - ಅಮೆಜಾನ್ ಪ್ರೈಮ್ ವಿಡಿಯೊ

  ಮಾನ್ಸೂನ್ ರಾಗ - ಜೀ ಫೈವ್

  ಹೆಡ್ ಬುಷ್ - ಜೀ ಫೈವ್

  ತೋತಾಪುರಿ ಚಾಪ್ಟರ್ 1 - ಜೀ ಫೈವ್

  ನವೆಂಬರ್ 18ಕ್ಕೆ ಒಟಿಟಿಗೆ ಕಾಂತಾರ?

  ನವೆಂಬರ್ 18ಕ್ಕೆ ಒಟಿಟಿಗೆ ಕಾಂತಾರ?

  ಇನ್ನು ಸೂಪರ್ ಹಿಟ್ ಚಿತ್ರ ಕಾಂತಾರ ನವೆಂಬರ್ 4ಕ್ಕೆ ಅಮೆಜಾನ್ ಪ್ರೈಮ್ ವಿಡಿಯೊ ವೇದಿಕೆಯಲ್ಲಿ ಸ್ಟ್ರೀಮ್ ಆಗಲಿದೆ ಎಂಬ ಸುದ್ದಿ ಇತ್ತು. ಆದರೆ ಚಿತ್ರತಂಡ ಈ ಸುದ್ದಿಯನ್ನು ತಳ್ಳಿಹಾಕಿತ್ತು. ಅದರಂತೆ ಕಾಂತಾರ ನವೆಂಬರ್ 4ರಂದು ಒಟಿಟಿಗೆ ಲಗ್ಗೆ ಇಟ್ಟಿಲ್ಲ. ಆದರೆ ಸದ್ಯ ಈ ಕುರಿತಾಗಿ ಹೊಸ ಸುದ್ದಿ ಹರಿದಾಡುತ್ತಿದ್ದು ಕಾಂತಾರ ಎಲ್ಲಾ ಭಾಷೆಯ ಒಟಿಟಿ ನವೆಂಬರ್ 18ಕ್ಕೆ ಬಿಡುಗಡೆಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಚಿತ್ರತಂಡ ಪ್ರತಿಕ್ರಿಯಿಸದ ಕಾರಣ ಈ ಸುದ್ದಿ ಖಚಿತ ಎನ್ನುತ್ತಿದೆ ಸಿನಿ ರಸಿಕರ ವರ್ಗ.

  English summary
  Kantara, Gandhada Gudi, Head Bush and other new kannada movies tv and ott rights details. Read on
  Friday, November 4, 2022, 19:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X