For Quick Alerts
  ALLOW NOTIFICATIONS  
  For Daily Alerts

  ಕಾಂತಾರ vs ಪೊನ್ನಿಯಿನ್ ಸೆಲ್ವನ್: ಮೊದಲ ದಿನ ಹೆಚ್ಚು ರೇಟಿಂಗ್ ಪಡೆದು ಗೆದ್ದ ಚಿತ್ರ ಯಾವುದು?

  |

  ನಿನ್ನೆ ( ಸೆಪ್ಟೆಂಬರ್ 30 ) ಈ ವರ್ಷದ ಒಂಬತ್ತನೇ ತಿಂಗಳು ಸಿನಿ ಪ್ರಿಯರ ಫೇವರಿಟ್ ಶುಕ್ರವಾರದೊಂದಿಗೆ ಮುಕ್ತಾಯಗೊಂಡಿದೆ. ಈ ದಿನ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡ ಚಿತ್ರರಂಗದಲ್ಲಿ ಕಾಂತಾರ, ತಮಿಳಿನ ಪೊನ್ನಿಯಿನ್ ಸೆಲ್ವನ್ ಹಾಗೂ ಬಾಲಿವುಡ್‌ನ ವಿಕ್ರಮ್ ವೇದ ಸೇರಿದಂತೆ ಹಲವಾರು ಚಿತ್ರಗಳು ಬಿಡುಗಡೆಗೊಂಡಿವೆ. ಈ ಪೈಕಿ ಕಾಂತಾರ ಹಾಗೂ ಪೊನ್ನಿಯಿನ್ ಸೆಲ್ವನ್ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕಾರಣ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಒಳ್ಳೆಯ ವಿಮರ್ಶೆ ಪಡೆದುಕೊಂಡು ಹೆಚ್ಚು ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಎಂಬ ಕುತೂಹಲವಿತ್ತು.

  ಇನ್ನು ಕಾಂತಾರ ಚಿತ್ರ ಬಿಡುಗಡೆ ಹಿಂದಿನ ದಿನವೇ ಪ್ರೀಮಿಯರ್ ಪ್ರದರ್ಶನಗಳನ್ನು ಕಂಡು ಒಂದು ದಿನ ಮುಂಚಿತವಾಗಿಯೇ ಸದ್ದು ಮಾಡಲಾರಂಭಿಸಿತು. ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ವೀಕ್ಷಿಸಿದ ಸಿನಿ ಪ್ರಿಯರು ಈ ಚಿತ್ರವನ್ನು ಕಾಂತಾರ ರಿಷಬ್ ಶೆಟ್ಟಿ ಕೆರಿಯರ್‌ನಲ್ಲೇ ಬೆಸ್ಟ್ ಸಿನಿಮಾ, ಇದು ಕನ್ನಡದ ಹೆಮ್ಮೆ ಎಂದು ಚಿತ್ರವನ್ನು ಮೆಚ್ಚಿಕೊಂಡಿದ್ದರು. ಇನ್ನು ಕಾಂತಾರ ಬಿಡುಗಡೆ ದಿನವೂ ಸಹ ಇದೇ ವಿಮರ್ಶೆಯನ್ನು ಪಡೆದುಕೊಂಡಿತು. ಸಿನಿಮಾ ವೀಕ್ಷಿಸಿ ಹೊರಬಂದ ಯಾರೊಬ್ಬರೂ ಸಹ ಚಿತ್ರದ ಕುರಿತು ನೆಗೆಟಿವ್ ವಿಮರ್ಶೆ ನೀಡಲೇ ಇಲ್ಲ. ಅಷ್ಟರ ಮಟ್ಟಿಗೆ ಕಾಂತಾರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

  ಇತ್ತ ಪೊನ್ನಿಯಿನ್ ಸೆಲ್ವನ್ ಹೆಚ್ಚಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ಸಹ ಚಿತ್ರ ಅಷ್ಟಕ್ಕಷ್ಟೇ ಎಂದವರೂ ಸಹ ಇದ್ದಾರೆ. ಅತ್ತ ತಮಿಳಿನ ವಿಕ್ರಮ್ ವೇದಾ ಚಿತ್ರವನ್ನು ರಿಮೇಕ್ ಮಾಡಿ ಅದೇ ಶೀರ್ಷಿಕೆಯಡಿಯಲ್ಲಿ ಬಿಡುಗಡೆಗೊಂಡ ಹಿಂದಿ ಸಿನಿಮಾ ಕಾಂತಾರ ಮತ್ತು ಪೊನ್ನಿಯಿನ್ ಸೆಲ್ವನ್ ಅಬ್ಬರದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸೈಲೆಂಟ್ ಆಗಿಬಿಟ್ಟಿದೆ. ಹೀಗೆ ನಿನ್ನೆ ಬಿಡುಗಡೆಗೊಂಡ ಚಿತ್ರಗಳ ಪೈಕಿ ಮೊದಲ ದಿನ ಯಾವ ಚಿತ್ರ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಹಾಗೂ ಯಾವ ಚಿತ್ರ ಅತಿ ಹೆಚ್ಚು ರೇಟಿಂಗ್ ಪಡೆದುಕೊಂಡಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ

  ಮೊದಲ ದಿನ ಚಿತ್ರಗಳು ಪಡೆದುಕೊಂಡ ಬುಕ್ ಮೈ ಶೋ ರೇಟಿಂಗ್

  ಮೊದಲ ದಿನ ಚಿತ್ರಗಳು ಪಡೆದುಕೊಂಡ ಬುಕ್ ಮೈ ಶೋ ರೇಟಿಂಗ್

  ಕಾಂತಾರ: 99% ( 2800 ವೋಟ್ )

  ಪೊನ್ನಿಯಿನ್ ಸೆಲ್ವನ್: 89% ( 35900 ವೋಟ್ )

  ವಿಕ್ರಮ್ ವೇದ: 89% ( 12400 ವೋಟ್ )

  ತೋತಾಪುರಿ 75% ( 96 ವೋಟ್ )

  ಹೀಗೆ ಕಾಂತಾರ ಮೊದಲ ದಿನ ಚಿತ್ರ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ತನ್ನ ಜತೆ ಬಿಡುಗಡೆಯಾದ ಎಲ್ಲಾ ಚಿತ್ರಗಳಿಗಿಂತ ಅತಿ ಹೆಚ್ಚು ರೇಟಿಂಗ್ ಪಡೆದುಕೊಂಡಿದೆ.

  ಐಎಂಡಿಬಿ ರೇಟಿಂಗ್

  ಐಎಂಡಿಬಿ ರೇಟಿಂಗ್

  ಇಂಟರ್ನೆಟ್ ಮೂವಿ ಡೇಟಾಬೇಸ್‌ನಲ್ಲಿ ನಿನ್ನೆ ಬಿಡುಗಡೆಯಾದ ಚಿತ್ರಗಳ ಪೈಕಿ ಯಾವ ಚಿತ್ರ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಎಂಬುದರ ಕುರಿತ ವಿವರ ಕೆಳಗಿನಂತಿದೆ.

  ಕಾಂತಾರ: 10ಕ್ಕೆ 9.8

  ಪೊನ್ನಿಯಿನ್ ಸೆಲ್ವನ್: 10ಕ್ಕೆ 8.9

  ವಿಕ್ರಮ್ ವೇದ: 10ಕ್ಕೆ 6.7

  ತೋತಾಪುರಿ: 10ಕ್ಕೆ 5.6

  ಎಲ್ಲೆಡೆ ಗೆದ್ದ ಕಾಂತಾರ

  ಎಲ್ಲೆಡೆ ಗೆದ್ದ ಕಾಂತಾರ

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಎಲ್ಲೆಡೆ ಗೆದ್ದಿದೆ. ಬಿಗ್ ಬಜೆಟ್ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕಿಂತಲೂ ಹೆಚ್ಚು ರೇಟಿಂಗ್ ಪಡೆದುಕೊಂಡು ಗೆದ್ದಿದೆ. ಒಂದೊಳ್ಳೆ ಚಿತ್ರ ಮಾಡಿದರೆ ಜನ ಬಜೆಟ್ ಲೆಕ್ಕಿಸದೇ ಮೆಚ್ವಿಕೊಳ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

  English summary
  Kantara got more ratings than Ponniyin Selvan 1 and Vikram Vedha on release day. Read on.
  Saturday, October 1, 2022, 11:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X