ಅಪ್ಪು 'ಗಂಧದ ಗುಡಿ' ಅಬ್ಬರಕ್ಕೆ ಶೋ ಕಳೆದುಕೊಂಡು ಮಂಕಾದ ಚಿತ್ರಗಳ ಪಟ್ಟಿ
ಮೂವತ್ತು ದಿನಗಳ ಸನಿಹದಲ್ಲಿರುವ ಕಾಂತಾರ ಚಿತ್ರ ಇಂದಿಗೂ ಸಹ ತನ್ನ ಅಬ್ಬರವನ್ನು ಮುಂದುವರಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಈಗಾಗಲೇ ಇನ್ನೂರು ಕೋಟಿ ಕ್ಲಬ್ ಸೇರಿದ್ದು ಕೆಜಿಎಫ್ ಚಾಪ್ಟರ್ 1 ದಾಖಲೆಗಳನ್ನು ಅಳಿಸಿಹಾಕುವತ್ತ ಹೆಜ್ಜೆ ಇಟ್ಟಿದೆ. ಇನ್ನು ಇಂದು ( ಅಕ್ಟೋಬರ್ 28 ) ಗಂಧದಗುಡಿ ಚಿತ್ರ ಬಿಡುಗಡೆಗೊಂಡಿದ್ದರೂ ಸಹ ಕಾಂತಾರ ಹವಾ ಕಡಿಮೆಯಾಗಿಲ್ಲ. ಗಂಧದ ಗುಡಿ ಬಿಡುಗಡೆಯ ಎಫೆಕ್ಟ್ ಚಿತ್ರಮಂದಿರಗಳಲ್ಲಿದ್ದ ಎಲ್ಲಾ ಚಿತ್ರಗಳಿಗೂ ತಟ್ಟಿದೆ ಆದರೆ ಕಾಂತಾರ ಚಿತ್ರ ಮಾತ್ರ ಎಂದಿನಂತೆ ತನ್ನ ಓಟ ಮುಂದುವರಿಸಿದೆ.
ಇದನ್ನು ಕಂಡ ಕನ್ನಡ ಸಿನಿ ರಸಿಕರು ಒಳ್ಳೆ ಚಿತ್ರ ಬಂದರೆ ಸಿಗಬೇಕಾದ ಮನ್ನಣೆ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ ಎನ್ನುತ್ತಿದ್ದಾರೆ. ಇನ್ನು ಗಂಧದ ಗುಡಿ ಚಿತ್ರ ಬಿಡುಗಡೆಗೊಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಾಂತಾರ ಬಿಡುಗಡೆಗೊಂಡ ನಂತರ ಚಿತ್ರಮಂದಿರಕ್ಕೆ ಬಂದಿದ್ದ ಯಾವ ಚಿತ್ರಗಳೂ ಸಹ ಪಡೆದುಕೊಳ್ಳದಿದ್ದಷ್ಟು ಪ್ರದರ್ಶನಗಳನ್ನು ಗಂಧದಗುಡಿ ಪಡೆದುಕೊಂಡಿದೆ.
ಕೇವಲ ಪ್ರದರ್ಶನಗಳನ್ನು ಪಡೆದುಕೊಳ್ಳುವುದು ಮಾತ್ರವಲ್ಲದೇ ಈ ಪೈಕಿ ಹೆಚ್ಚು ಪ್ರದರ್ಶನಗಳು ಸೋಲ್ಡ್ ಔಟ್ ಆಗಿವೆ. ಹಾಗಿದ್ದರೆ ಬೆಂಗಳೂರು ನಗರದಲ್ಲಿ ಗಂಧದಗುಡಿ ಬಿಡುಗಡೆ ದಿನ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ, ಗಂಧದ ಗುಡಿ ರಿಲೀಸ್ ಎಫೆಕ್ಟ್ ಯಾವ ಚಿತ್ರದ ಮೇಲೆ ಬಿದ್ದಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಬೆಂಗಳೂರು ಶೋಗಳ ಸಂಖ್ಯೆ
ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ವಿವಿಧ ಚಿತ್ರಗಳು ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆ
ಕಾಂತಾರ: 480 ಪ್ರದರ್ಶನಗಳು
ಗಂಧದ ಗುಡಿ: 436 ಪ್ರದರ್ಶನಗಳು ( ಹೊಸ ಬಿಡುಗಡೆ )
ರಾಮ್ ಸೇತು: 129 ಪ್ರದರ್ಶನಗಳು
ಬ್ಲಾಕ್ ಆಡಂ: 118 ಪ್ರದರ್ಶನಗಳು
ಸರ್ದಾರ್: 90 ಪ್ರದರ್ಶನಗಳು
ಹೆಡ್ ಬುಷ್ : 90 ಪ್ರದರ್ಶನಗಳು

ಸೋಲ್ಡ್ ಔಟ್ ಎಷ್ಟು?
ಇನ್ನು ವಿವಿಧ ಚಿತ್ರಗಳು ಅಕ್ಟೋಬರ್ 28ರ ಶುಕ್ರವಾರದಂದು ಬೆಂಗಳೂರಿನಲ್ಲಿ ಮೇಲ್ಕಂಡಂತೆ ಶೋಗಳನ್ನು ಪಡೆದುಕೊಂಡಿದ್ದು, ಗಂಧದ ಗುಡಿ ಹಾಗೂ ಕಾಂತಾರ ಬಿಗಿ ಹಿಡಿತ ಸಾಧಿಸಿವೆ. ಅಕ್ಟೋಬರ್ 28ರ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಗಂಧದ ಗುಡಿ ಚಿತ್ರದ 210 ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದರೆ, ಕಾಂತಾರ ಚಿತ್ರದ 26 ಪ್ರದರ್ಶನಗಳು ಸೋಲ್ಡ್ ಔಟ್ ಆಗಿವೆ.

ಕಾಂತಾರ, ಗಂಧದ ಗುಡಿ ಅಬ್ಬರಕ್ಕೆ ನಲುಗಿದ ಉಳಿದ ಚಿತ್ರಗಳು
ಗಂಧದ ಗುಡಿ ಬಿಡುಗಡೆ ದಿನ ಬೆಂಗಳೂರಿನಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಅಂಕಿಅಂಶ ಬಹಿರಂಗವಾಗಿದ್ದು, ಕಾಂತಾರ ಹೊರತುಪಡಿಸಿ ಉಳಿದೆಲ್ಲಾ ಚಿತ್ರಗಳಿಗೂ ಹಿನ್ನಡೆ ಉಂಟಾಗಿದೆ. ಅದರಲ್ಲಿಯೂ ವಿವಾದದ ಸುಳಿಗೆ ಸಿಲುಕಿರುವ ಹೆಡ್ ಬುಷ್ ಪ್ರದರ್ಶನಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅತ್ತ ರಾಮ್ ಸೇತು, ಸರ್ದಾರ್ ಚಿತ್ರಗಳೂ ಸಹ ಶೋಗಳನ್ನು ಕಳೆದುಕೊಂಡಿವೆ. ಶಿವ ಕಾರ್ತಿಕೇಯನ್ ಅಭಿನಯದ ಪ್ರಿನ್ಸ್ ಚಿತ್ರವಂತೂ ವಾಷ್ ಔಟ್ ಆಗಿದೆ.


Click it and Unblock the Notifications











