For Quick Alerts
  ALLOW NOTIFICATIONS  
  For Daily Alerts

  ಕಾಂತಾರದಲ್ಲಿನ ತನ್ನ 'ಲೀಲಾ' ಪಾತ್ರ ಮೆಚ್ಚಿಕೊಂಡ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ಸಪ್ತಮಿ ಗೌಡ

  |

  'ಕಾಂತಾರ' ಕನ್ನಡ ಸಿನಿ ಪ್ರೇಕ್ಷಕನ ಮನದಲ್ಲಿ ಶಾಶ್ವತವಾಗಿ ನೆಲೆಯೂರುವಂಥ ಚಿತ್ರ. ಚಿತ್ರ ವೀಕ್ಷಿಸಿದ ಯಾರೊಬ್ಬರ ಬಾಯಿಂದಲೂ ಸಹ ನೆಗೆಟಿವ್ ವಿಮರ್ಶೆಯನ್ನೇ ಪಡೆದುಕೊಳ್ಳದೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಿತ್ರ ಸದ್ಯ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಪಟ್ಟಿಯಲ್ಲಿ ಟಾಪ್ ಒನ್ ವಿಷಯ.

  ಕರ್ನಾಟಕದ ಕರಾವಳಿ ಭಾಗದ ಮಣ್ಣಿನ ಕತೆಯನ್ನು ಕರ್ನಾಟಕದ ಜನರಿಗೆ ತಲುಪಿಸಿ ಮೆಚ್ಚಿಸುವಲ್ಲಿ ಯಶಸ್ವಿಯಾಗಿರುವ ಕಾಂತಾರ ಚಿತ್ರತಂಡ ಕೇವಲ ಕರ್ನಾಟಕ ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಗಳಿಂದಲೂ ಪ್ರಶಂಸೆಗೆ ಪಾತ್ರವಾಗುತ್ತಿದೆ. ಹೊರರಾಜ್ಯಗಳ ಜನರು ಸಹ ಕಾಂತಾರ ಚಿತ್ರಕ್ಕೆ ಬರುತ್ತಿರುವ ವಿಮರ್ಶೆಗಳನ್ನು ಕಂಡು ನಮ್ಮ ಭಾಷೆಗಳಿಗೂ ಸಹ ಕಾಂತಾರ ಚಿತ್ರವನ್ನು ಡಬ್ ಮಾಡಿ ಬಿಡುಗಡೆಗೊಳಿಸಿ ಎಂದು ಮನವಿಯನ್ನು ಇಡುತ್ತಿದ್ದಾರೆ.

  ಕನ್ನಡದಲ್ಲಿ ಅಬ್ಬರಿಸುತ್ತಿರುವ ನಡುವೆಯೇ ಹಿಂದಿಗೂ 'ಕಾಂತಾರ' ಡಬ್; ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆಕನ್ನಡದಲ್ಲಿ ಅಬ್ಬರಿಸುತ್ತಿರುವ ನಡುವೆಯೇ ಹಿಂದಿಗೂ 'ಕಾಂತಾರ' ಡಬ್; ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆ

  ಹೀಗೆ ಕಾಂತಾರ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸಿದ ಬೆನ್ನಲ್ಲೇ ಚಿತ್ರತಂಡ ಸಾಲು ಸಾಲು ಪತ್ರಿಕಾಗೋಷ್ಠಿ ನಡೆಸುವುದರ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಕಾಂತಾರ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡ ಪ್ರೇಕ್ಷಕ ಮಹಾಪ್ರಭುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದೆ.

  ಅದರಂತೆ ಈ ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದುಕೊಂಡಿರುವ ನಟಿ ಸಪ್ತಮಿ ಗೌಡ ಕೂಡ ಚಿತ್ರದಲ್ಲಿನ ತನ್ನ 'ಲೀಲಾ' ಪಾತ್ರ ಮೆಚ್ಚಿಕೊಂಡ ಪ್ರೇಕ್ಷಕರಿಗೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  "ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.
  ಇವತ್ತು ಕಾಂತರ ಸಿನಿಮಾ ಈ ಮಟ್ಟದಲ್ಲಿ ವಿಶ್ವದಾದ್ಯಂತ ಯಶಸ್ವಿಯಾಗಿರುವುದಕ್ಕೆ ಕಾರಣ ನೀವೇ.ಕಾಂತರ ಸಿನಿಮಾವನ್ನು ಅಪ್ಪಿಕೊಂಡು ಗೆಲ್ಲಿಸುತ್ತಿರುವುದಕ್ಕೆ ಋಣಿಯಾಗಿದ್ದೇನೆ.
  ನನ್ನ ಪಾತ್ರ 'ಲೀಲಾ'ಳಿಗೆ ತೋರಿಸುತ್ತಿರುವ ನಿಮ್ಮ ಪ್ರೀತಿಯಿಂದ ಹೃದಯ ತುಂಬಿದೆ.
  ಈ ಪ್ರೀತಿಗೆ ನಾನು ಸದಾ ಚಿರಋಣಿ" ಎಂದು ಬರೆದುಕೊಂಡಿರುವ ಸಪ್ತಮಿ ಗೌಡ ಚಿತ್ರೀಕರಣ ಸಂದರ್ಭದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

  ಇನ್ನು 2020ರಲ್ಲಿ ಬಿಡುಗಡೆಯಾಗಿದ್ದ ಸುಕ್ಕ ಸೂರಿ ನಿರ್ದೇಶನದ ಹಾಗೂ ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಗಿರಿಜಾ ಪಾತ್ರಧಾರಿಯಾಗಿ ಸದ್ದು ಮಾಡಿದ್ದ ಸಪ್ತಮಿ ಗೌಡ ಈ ಬಾರಿ ಕಾಂತಾರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಯೂರುವಲ್ಲಿ ಯಶಸ್ವಿಯಾಗಿದ್ದಾರೆ.

  English summary
  Kantara heroine Sapthami Gowda thanked audience for movie success. Read on
  Thursday, October 6, 2022, 23:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X