ಕಡಿಮೆಯಾಗದ ಕಾಂತಾರ ಕ್ರೇಜ್: ಕೋಲ್ಕತ್ತಾದ ದುರ್ಗಾ ಪೆಂಡಾಲ್‌ನಲ್ಲಿ ರಿಷಬ್ ಶೆಟ್ಟಿಯ ಕಾಂತಾರ!

2022 ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಭಾರತೀಯ ಚಲನಚಿತ್ರೋದ್ಯಮದ ಅತಿ ದೊಡ್ಡ ಹಿಟ್. ಎಲ್ಲಾ ಭಾಷೆಗಳಲ್ಲಿಯೂ ಬಿಡುಗಡೆಯಾದ ಈ ಸಿನಿಮಾ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ಗಣೇಶ ಹಬ್ಬದ ಪೆಂಡಾಲ್‌ಗಳಲ್ಲಿ ಕಾಂತಾರ ಥೀಮ್‌ನ ಗಣೇಶ ಕೂತಿದ್ದು ಆಗಿದೆ. ಈಗ ದುರ್ಗಾ ಪೆಂಡಾಲ್‌ಗಳ ಸರದಿ.

ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಕ್ರೇಜ್ ಉತ್ತರ ಭಾರತೀಯರಲ್ಲಿ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಉದಾಹರಣೆಯಾಗಿ ನವರಾತ್ರಿ ಉತ್ಸವ ಸಾಕ್ಷಿಯಾಗುತ್ತಿದೆ. ದುರ್ಗಾ ಪೂಜೆಯ ಪೆಂಡಾಲ್‌ಗಳಲ್ಲಿ ಕಾಂತಾರ ಥೀಮ್‌ನ ದುರ್ಗಾ ವಿಗ್ರಹಗಳು ಮತ್ತು ಅಲಂಕಾರಗಳು ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.

 Kantara inspired Durga idols in Kolkatas Durga Puja celebrations

ಕಾಂತಾರ ಥೀಮ್‌ನ ದುರ್ಗಾ ಮೂರ್ತಿಗಳು

ಎಲ್ಲಾ ಗಡಿಗಳನ್ನು ಮೀರಿದ್ದ ಕನ್ನಡ ಚಲನಚಿತ್ರ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಭಾರೀ ಸಕ್ಸಸ್ ಗಳಿಸಿದ್ದು, ಇತ್ತೀಚಿನ ದಿನಗಳಲ್ಲಿ ಅತ್ಯಂತ ಬೃಹತ್ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮಾಸ್ಟರ್‌ಪೀಸ್ ತೆರೆಗೆ ಬಂದು ಒಂದು ವರ್ಷ ಕಳೆದಿದೆ. ಆದರೆ ಪ್ರೇಕ್ಷಕರಲ್ಲಿ ಅದು ಹುಟ್ಟುಹಾಕಿದ ಕ್ರೇಜ್ ಇನ್ನು ಕೊಂಚವೂ ಕಡಿಮೆಯಾಗಿಲ್ಲ.

ಇತ್ತೀಚೆಗೆ ಮುಕ್ತಾಯವಾದ ಗಣೇಶ ಚತುರ್ಥಿಯ ಪೆಂಡಾಲ್‌ಗಲ್ಲಿನ ಅತಿ ದೊಡ್ಡ ಹೈಲೈಟ್‌ ಕಾಂತಾರ. ಈಗ ನವರಾತ್ರಿಯ ವೈಭವಕ್ಕೂ ಕಳೆ ತುಂಬುತ್ತಿದೆ. ಕೋಲ್ಕತ್ತಾದಲ್ಲಿ ನವರಾತ್ರಿ ಕಳೆಗಟ್ಟುತಿದ್ದು, ನಾನಾ ವಿಧಗಳಲ್ಲಿ ದುರ್ಗಾ ಪೂಜೆಯ ಪೆಂಡಾಲ್‌ಗಳು ನಿರ್ಮಾಣ ಮಾಡಲಾಗುತ್ತಿದೆ.

ಭವ್ಯವಾದ ದುರ್ಗಾ ಪೆಂಡಾಲ್‌ಗಳಲ್ಲಿ ಈ ಬಾರಿ ಕಾಂತಾರ ಥೀಮ್‌ನ ದುರ್ಗಾ ವಿಗ್ರಹಗಳು ಮತ್ತು ಅಲಂಕಾರಗಳನ್ನು ವಿನ್ಯಾಸ ಮಾಡಲಾಗಿದೆ. ಕೋಲ್ಕತ್ತಾದ ದುರ್ಗಾ ಪೂಜೆಯ ಸಮಯದಲ್ಲಿ ಈ ಪೆಂಡಾಲ್ ಜನರ ಗಮನ ಸೆಳೆದಿದ್ದು, ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಭಾರತದಲ್ಲಿನ ಯಾವುದೇ ಆಚರಣೆಗಳಿರಲಿ ಅವಕ್ಕೆ ಸಿನಿಮಿಯ ಟಚ್ ನೀಡುವುದನ್ನು ನಮ್ಮ ಜನರು ಬಿಡುವುದಿಲ್ಲ. ತಮಗಿಷ್ಟವಾದ ಸಿನಿಮಾವನ್ನೇ ತಾವು ನಿರ್ಮಿಸುವ ಪ್ರತಿಮೆಗಳಲ್ಲಿ ಇಳಿಸಿಬಿಡುತ್ತಾರೆ. ಕಾಂತಾರ ಸಿನಿಮಾ ಕೂಡ ಇದಕ್ಕೆ ಹೊರತಲ್ಲ. ಕೊರೊನಾ ಸಮಯದಲ್ಲಿ ದುರ್ಗಾ ಪೆಂಡಾಲ್‌ಗಳಲ್ಲಿ ಕೊರೊನಾಸುರನನ್ನು ಕೊಲ್ಲುವ ದುರ್ಗೆ, ಕೊರೊನಾ ಪೀಡಿತೆಇಗೆ ನೆರವಾಗುವ ವೈದ್ಯರು, ನರ್ಸ್‌ಗಳು, ಕೊರೊನಾ ವಾರಿಯರ್ಸ್‌ಗಳು ಸ್ಥಾನ ಪಡೆದುಕೊಂಡಿದ್ದರು.

 Kantara inspired Durga idols in Kolkatas Durga Puja celebrations


ಕಾಂತಾರ ಸಿನಿಮಾ ಕುರಿತು ಮಾಹಿತಿ

2022 ರಲ್ಲಿ ಬಿಡುಗಡೆಯಾದ ಕಾಂತಾರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ಲಾಕ್‌ಬಸ್ಟರ್ ಆಗಿ ಹೊರಹಿಮ್ಮಿದೆ. ಕಥೆ, ಚಿತ್ರಕಥೆಯಿಂದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದ ಈ ಸಿನಿಮಾ ಹಿಂದಿ ಮಾತನಾಡುವ ಪ್ರದೇಶಗಳಲ್ಲಿಯೇ ಆರಾಮವಾಗಿ 100 ಕೋಟಿ ರೂಪಾಯಿಯ ಗಡಿ ದಾಟಿತ್ತು. ಕನ್ನಡ ಪ್ರೇಕ್ಷಕರಂತೆಯೇ ಎಲ್ಲಾ ಭಾಷೆಯಲ್ಲಿಯೂ ಸಿನಿಮಾವನ್ನು ಎದೆಗೆ ಅಪ್ಪಿಕೊಂಡರು. ನಟ ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು.

ದೈವಗಳು, ಭೂತಕೋಲ ಆಚರಣೆಗಳು ವಿಶ್ವವಿಖ್ಯಾತಿಯಾದವು. ಜನರು ಇವುಗಳನ್ನು ನೋಡುವ ದೃಷ್ಟಿಕೋನ ಬದಲಾಯಿತು. ಹಾಡುಗಳು ಜನರ ಕಿವಿಗೆ ಇಂಪು ನೀಡಿದವು. ಸಿನಿಮಾ ಗೆಲುವಿನಿಂದ ಸಿನಿಮಾ ತಂಡಕ್ಕೆ ಉತ್ತಮ ಅವಕಾಶಗಳು ಲಭಿಸುತ್ತಿವೆ. ನಟಿ ಸಪ್ತಮಿ ಗೌಡ ಬಾಲಿವುಡ್‌ ಸಿನಿಮಾದಲ್ಲಿ ಕಾಣಿಸಕೊಂಡರು. ಈಗ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಜನರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

More from Filmibeat

English summary
Kantara themed Durga pandal and idol in Durga Puja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X